ದಾಸವಾಳದ ಗಿಡ ಹಾಗೂ ಬೇರಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಮಾತ್ರವಲ್ಲದೆ ದಾಸವಾಳದ ಹೂವು ಕೂಡ ತುಂಬಾನೇ ಒಳ್ಳೆಯದು, ಆರೋಗ್ಯಕ್ಕೆ ಸೌಂದರ್ಯಕ್ಕೆ ದಾಸವಾಳದ ಹೂವು ಬೆಸ್ಟ್. ಅದರಲ್ಲೂ ಕೆಂಪು ಹಾಗೂ ಬಿಳಿ ದಾಸವಾಳ ಉತ್ತಮ. ಹಾಗಿದ್ರೆ ಈ ದಾಸವಾಳದ ಹೂವಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಕ್ತದ ಒತ್ತಡ ಕಡಿಮೆಯಾಗುತ್ತದೆ
ಸಾಕಷ್ಟು ಫ್ಲೇವರ್ನ ಟೀಯನ್ನ ಸೇರಿಸುತ್ತೇವೆ ಅದೇ ರೀತಿ ದಾಸವಾಳದ ಟೀ ಕೂಡ ಉತ್ತಮ, ಈ ಟೀ ಸೇವಿಸುವುದರಿಂದ ಟೆನ್ಶನ್ ಕಡಿಮೆಯಾಗುವುದು ಮಾತ್ರವಲ್ಲದೆ ದೇಹದಲ್ಲಿರುವಂತಹ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯ ಸಮಸ್ಯೆ
ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ಹೊಟ್ಟೆ ನೋವು ಕನ್ಸ್ಟ್ರಿಕ್ಟೇಶನ್ ಅಂತ ಸಮಸ್ಯೆಗಳು ಎದುರಾಗುತ್ತದೆ ಜೊತೆಗೆ ಮಲಬದ್ಧತೆ, ಅತಿಸಾರ ಮತ್ತು ಕೆರಳಿಸುವ ಕರುಳಿನ ಸಹಲಕ್ಷಣಗಳು. ಪ್ರತಿದಿನ ದಾಸವಾಳವನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಅಥವಾ ಟೀ ಕುಡಿಯುವುದರಿಂದ ಜೀರ್ಣಕ್ರಿಯ ಸಮಸ್ಯೆ ನಿವಾರಣೆಯಾಗುತ್ತದೆ.
ಸ್ಕಿನ್ ಟೋನರ್
ದಾಸವಾಳದ ಹೂವನ್ನು ತ್ವಚೆಗು ಕೂಡ ಬಳಸಬಹುದು..ಹಾಗೂ ಮುಖ್ಯವಾಗಿ ದಾಸವಾಳದ ಹೂವು ಚರ್ಮದ pH ಅನ್ನು ಸಮತೋಲನಗೊಳಿಸಲು ಮತ್ತು ರಂಧ್ರಗಳ ನೋಟವನ್ನು ಕಡಿಮೆ ಮಾಡಲು ನೈಸರ್ಗಿಕ ಸ್ಕಿನ್ ಟೋನರ್ ಆಗಿ ಬಳಸಬಹುದು.

ಕೂದಲ ಬೆಳವಣಿಗೆ
ನೀವು ಬಳಸುವಂತಹ ಎಣ್ಣೆಯಲ್ಲಿ ದಾಲ್ಸವಾಳದ ಹೂವನ್ನು ಹಾಕಿ ಚೆನ್ನಾಗಿ ಕೊಡಿಸಿ ನಿಮ್ಮ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುತ್ತದೆ.
ನ್ಯಾಚುರಲ್ ಡೈ ಆಗಿಯೂ ಬಳಸಬಹುದು
ಬಿಳಿ ಕೂದಲನ್ನ ಕಪ್ಪು ಮಾಡೋದಕ್ಕೆ ಸಾಕಷ್ಟು ಜನ ಕೆಮಿಕಲ್ಸ್ ಇರುವಂತಹ ಡೈಗಳನ್ನ ಬಳಸುತ್ತಾರೆ, ಬದಲಿಗೆ ನೀವು ದಾಸವಾಳವನ್ನು ರುಬ್ಬಿ ವಾಕ್ಯವನ್ನು ಕೂದಲಿಗೆ ಹಚ್ಚಿ ಈ ಅಭ್ಯಾಸವನ್ನು ಬಿಡದೆ ಪಾಲಿಸಿದ್ರೆ ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ.