ಮದುವೆ ಸಮಾರಂಭಗಳು ಅಥವಾ ಮನೆಯಲ್ಲಿ ಏನೇ ಒಂದು ಫಂಕ್ಷನ್ ಆದರೂ ಕೂಡ ಹೆಣ್ಣು ಮಕ್ಕಳು ತುಂಬಾ ಇಷ್ಟಪಟ್ಟು ಮೆಹಂದಿಯನ್ನು ಕೈಗಳಿಗೆ ಹಾಕಿಕೊಳ್ಳುತ್ತಾರೆ. ಮೆಹೆಂದಿಯನ್ನ ಹಾಕಿದಾಗ ಕೈಗಳು ಸುಂದರವಾಗಿ ಕಾಣುತ್ತದೆ ಹಾಗೇನೆ ಮೆಹಂದಿಯನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂಡ ಸಾಕಷ್ಟು ಲಾಭಗಳಿವೆ . ಕೆಲವರು ಮೆಹಂದಿ ತುಂಬಾ ತಂಪು ಇದನ್ನು ತಲೆಗೆ ಹಚ್ಚುವುದರಿಂದ ಶೀತ ಶುರುವಾಗುತ್ತೆ ಅಂತ ಹೇಳ್ತಾರೆ. ಆದ್ರೆ ಮೆಹಂದಿ ನಮ್ಮ ಕೂದಲ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು . ಮೆಹಂದಿಯನ್ನು ತಲೆಗೆ ಹಚ್ಚುವುದರಿಂದ ಯಾವೆಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತೆ ಅನ್ನೋದ್ರಲ್ಲಿ ಡೀಟೇಲ್ಸ್ ಹೀಗಿದೆ..

ಬಿಳಿ ಕೂದಲು ಸಮಸ್ಯೆ
ತಲೆಯಲ್ಲಿ ಬಿಳಿ ಕೂದಲ ಆದಾಗ ಹೆಚ್ಚು ಜನ ಹೇರ್ ಡೈ, ಕಲರಿಂಗ್ ಹೇರ್ ಮಾಡುತ್ತಾರೆ .ಆದರೆ ಇದರಲ್ಲಿ ಸಾಕಷ್ಟು ಕೆಮಿಕಲ್ಸ್ ನ ಬಳಸ್ತಾರೆ. ಅದು ನಮ್ಮ ಕೂದಲಿಗೆ ಹಾನಿಯನ್ನು ಉಂಟುಮಾಡುತ್ತದೆ.ಆದರೆ ನ್ಯಾಚುರಲ್ಲಾಗಿ ಬರುವಂತಹ ಮೆಹಂದಿಯನ್ನು ತಲೆಗೆ ಹಚ್ಚುವುದರಿಂದ ನಿಮ್ಮ ಬಿಳಿಯ ಕೂದಲು ಕೆಂಪಾಗುತ್ತದೆ.. ವಾರಕ್ಕೊಮ್ಮೆ ಮೆಹಂದಿಯನ್ನು ಹಚ್ಚುವುದರಿಂದ ಕೆಂಪು ಕೂದಲು ಕಪ್ಪಾಗುವಂತಹ ಚಾನ್ಸಸ್ ಹೆಚ್ಚಿರುತ್ತೆ.

ಸ್ಪ್ಲಿಟ್ ಎಂಡ್ಸ್
ನಿಮ್ಮ ಕೂದಲು ತುದಿಯನ್ನು ಗಮನಿಸಿದರೆ ಕೆಲವರಿಗೆ ಕೂದಲು ಒಡೆದಿರುತ್ತದೆ. ಹೀಗಾದಾಗ ಕೂದಲು ಬೆಳೆಯುವುದಿಲ್ಲ ಅನ್ನೋದು ಕೂಡ ಖಚಿತ.. ಸ್ಪ್ಲಿಟ್ ಎಂಡ್ಸ್ ಆದಾಗ ಸಲೂನ್ಗಳಿಗಳಲ್ಲಿ ಕೂದಲ ತುದಿಯನ್ನು ಕಟ್ ಮಾಡಿಸ್ತೀವಿ. ಇದರ ಬದಲಿಗೆ ನೀವು ಮೆಹಂದಿಯನ್ನು ಹಚ್ಚುವುದರಿಂದ ಸ್ಪ್ಲಿಟ್ ಎಂಡ್ಸ್ ಬೇಗನೆ ನಿವಾರಣೆಯಾಗುತ್ತದೆ.

ಡ್ಯಾಂಡ್ರಫ್
ಹೆಚ್ಚು ಜನಕ್ಕೆ ಡ್ಯಾಂಡ್ರಫ್ ಸಮಸ್ಯೆ ಕಾಡ್ತಾ ಇರುತ್ತೆ. ಏನೇ ಮಾಡಿದ್ರು ಡ್ಯಾಂಡ್ರಫ್ ನಿವಾರಣೆ ಆಗಿಲ್ಲ ಅಂದ್ರೆ ವಾರಕ್ಕೊಮ್ಮೆ ಆದ್ರೂ ಮೆಹೆಂದಿಯನ್ನ ತಲೆಗೆ ಹಚ್ಚುವುದರಿಂದ ಸಮಸ್ಯೆಗೆ ಗುಡ್ ಬೈ ಹೇಳ್ಬಹುದು. ಇದರ ಜೊತೆಗೆ ತಲೆ ತುರಿಕೆ ಹಾಗೂ ಜಿಡ್ಡಿನ ಸಮಸ್ಯೆ ಕೂಡ ನಿವಾರಣೆಯಾಗುತ್ತೆ.
ತಂಪು
ಬೇಸಿಗೆಯಲ್ಲಿ ಮೆಹಂದಿಯನ್ನು ತಲೆಗೆ ಹಚ್ಚುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯಮಾಡುತ್ತದೆ. ಯಾಕೆಂದರೆ ಮೆಹಂದಿ ತುಂಬಾನೇ ತಂಪು .ಆದ್ರೆ ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಮೆಹಂದಿಯನ್ನು ಜಾಸ್ತಿ ಹಚ್ಚುವುದರಿಂದ ಶೀತ ಕೆಮ್ಮು ಶುರುವಾಗುವಂತ ಚಾನ್ಸಸ್ ಹೆಚ್ಚಿರುತ್ತೆ.

ದಟ್ಟವಾದ ಕೂದಲು
ವಾರಕ್ಕೊಮ್ಮೆ ಆದ್ರೂ ಮೆಹಂದಿಯನ್ನು ಹಚ್ಚುವುದರಿಂದ ಹೇರಿ ಡ್ಯಾಮೇಜ್ ನಿವಾರಣೆ ಆಗುತ್ತೆ. ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತೆ, ಇದರ ಜೊತೆಗೆ ದಟ್ಟವಾದ ಕೂದಲು ನಿಮ್ಮದಾಗುತ್ತದೆ. ಹೇರ್ ಸ್ಟ್ರೆಂತ್ ಹೆಚ್ಚಾಗತ್ತೆ,ಉದುರುವುದು ಕಡಿಮೆಯಾಗುತ್ತದೆ.
ಒಟ್ಟಿನಲ್ಲಿ ಮೆಹಂದಿ ನಿಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಮ್ಮ ತಲೆ ಕೂದಲಿಗೆ ಬೇಕಾದಷ್ಟು ಮೆಹಂದಿಯನ್ನ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಇಡಿ. ಮರುದಿನ ಬೆಳಿಗ್ಗೆ ಆ ಮೆಹೆಂದಿಯನ್ನು ತಲೆಗೆ ಹಚ್ಚುವುದು ಉತ್ತಮ.