ಕೋಲ್ಡ್ ಮಿಲ್ಕ್ ಲ್ಯಾಕ್ಟಿಕ್ ಆಸಿಡ್ ಅಂಶ ಹೆಚ್ಚಿರುತ್ತೆ ಇದು ತ್ವಚೆಗೆ ತುಂಬಾನೆ ಒಳ್ಳೆಯದು..ಹಾಗಾಗಿ ವಾರಕ್ಕೆ ಎರಡರಿಂದ ಮೂರು ಭಾರಿ ತಣ್ಣನೆಯ ಹಾಲನ್ನು ಮುಖಕ್ಕೆ ಹಚ್ಚಿ ೨೦ ನಿಮಿಷಗಳ ಕಾಲ ಹಾಗೆ ಬಿಟ್ಟು ಮುಖ ತೊಳೆಯುವುದರಿಂದ ತ್ವಚೆಗೆ ಉತ್ತಮ ಹಾಗು ಸಾಕಷ್ಟು ಪ್ರಯೋಜಗಳು ಇವೆ.

ಕಣ್ಣುಗಳ ಸುತ್ತಲಿನ ಕಲೆ
ತಣ್ಣನೆಯ ಹಾಲು ಕಣ್ಣುಗಳಿಗೆ ನ್ಯಾಚುರಲ್ ಕ್ಲೆನ್ಸರ್ ಆಗಿದೆ ಮತ್ತು ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಶಮನಗೊಳಿಸಲು ಹಾಗೂ ಕಣ್ಣುಗಳ ಕೆಳಗಿನ ಕಪ್ಪು ವಲಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ . ತಣ್ಣನೆಯ ಹಾಲನ್ನ ದಿನಕ್ಕೆ ಎರಡರಿಂದ ಮೂರು ಬಾರಿ ಕಣ್ಣಿನ ಕೆಳಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ಸ್ ಬೇಗನೆ ನಿವಾರಣೆ ಆಗುತ್ತೆ.
ಕಣ್ಣಿನ ಕೆಳಗಿನ ಊತವನ್ನು ಕಡಿಮೆ ಮಾಡುತ್ತದೆ
ತಣ್ಣನೆಯ ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಅಂಶ ಹೆಚ್ಚಿರುತ್ತೆ ಇದು ಕಣ್ಣಿನ ಕೆಳಗಿರುವ ಊತವನ್ನು ಕಡಿಮೆ ಮಾಡುವುದರ ಜೊತೆಗೆ ಡಾರ್ಕ್ ಸರ್ಕಲ್ಸ್ ಅನ್ನ ಕಡಿಮೆ ಮಾಡಿ ನಿಮಗೆ ಬ್ರೈಟ್ ಸ್ಕಿನ್ ನೀಡುತ್ತದೆ..

ಮೊಡವೆ ಮತ್ತು ಮೊಡವೆಯ ಕಲೆಯನ್ನು ಕಡಿಮೆ ಮಾಡುತ್ತದೆ:
ಹಾಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಮೊಡವೆ ಮತ್ತು ಮೊಡವೆಗಳನ್ ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ pH ಅನ್ನು ಸಮತೋಲನಗೊಳಿಸುತ್ತದೆ
ಹಾಲು ಚರ್ಮದ ನೈಸರ್ಗಿಕ pH ಗೆ ಹತ್ತಿರವಿರುವ pH ಮಟ್ಟವನ್ನು ಹೊಂದಿದ್ದು, ಇದು ಚರ್ಮದ pH ಅನ್ನು ಬ್ಯಾಲೆನ್ಸ್ ಮಾಡುತ್ತದೆ.