ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ನಿಗಧಿತ ದಿನಕ್ಕಿಂತ ಒಂದು ದಿನ ಮುಂಚೆ ಅಂದರೆ ಗುರುವಾರ ಮುಕ್ತಾಯಗೊಳ್ಳಿದೆ.
ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸದನದಲ್ಲಿ ಘೋಷಣೆ ಮಾಡಿದ್ದು, ಡಿ.29 ರಂದು ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದಾರೆ.
ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಧಿವೇಶನ ಅಂತ್ಯಗೊಳ್ಳುತ್ತಿದೆ, ಗುರುವಾರ ಸಂಜೆ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದಾರೆ.
ಡಿ.19 ರಿಂದ ಆರಂಭವಾಗಿರುವ ಅಧಿವೇಶನ ಡಿ.30 ರವರೆಗೆ ನಿಗದಿಯಾಗಿತ್ತು, ಆದರೆ ಒಂದು ದಿನ ಮೊದಲೇ ಅಂದರೆ ನಾಳೆ ಅಧಿವೇಶನ ಅಂತ್ಯಗೊಳ್ಳಲಿದೆ. ಕೋವಿಡ್ ಸೋಂಕು ಉಲ್ಪಣ ಹಾಗೂ ಮಾರ್ಗಸೂಚಿ ಪಾಲನೆ ಹಿನ್ನೆಲೆ ಒಂದು ದಿನ ಮೊದಲೇ ಚಳಿಗಾಲದ ಅಧಿವೇಶನ ಸಮಾಫ್ತಿಗೊಳ್ಳಲಿದೆ.