ಬೆಳಗಾವಿ ಚಳಿಗಾಲದ ಅಧಿವೇಶನದ (Belagavi winter session) ಆರನೇಯ ದಿನವೂ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಡಿಪಿಐ (SDPI) ಸಂಘಟನೆಯಿಂದ ಪ್ರೋಟೆಸ್ಟ್ ನಡೆಸಿದೆ.
ಬೆಳಗಾವಿಯ ಸುವರ್ಣ ಗಾರ್ಡನ್‌ನಲ್ಲಿ ಎಸ್‌ಡಿಪಿಐ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್‌ರಿಂದ (Police) ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.ಎಸ್‌ಡಿಪಿಐ ಕಾರ್ಯಕರ್ತರನ್ನು ತಪಾಸಣೆ ಮಾಡಿ ಪ್ರತಿಭಟನಾ ಸ್ಥಳಕ್ಕೆ ಬಿಡುತ್ತಿರುವ ಪೊಲೀಸರು. ಸ್ಕೂ ಡ್ರೈವರ್ (Screw driver), ಗುಟ್ಕಾ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಟೆಂಟ್ ಬಳಿ ಎಸ್ ಡಿಪಿಐ ಸಂಘಟನೆ ಕಾರ್ಯಕರ್ತರನ್ನ ಬಿಗಿ ಭದ್ರತೆಯಲ್ಲಿ ಪೋಲಿಸರ ತಪಾಸಣೆ ನಡೆದಿದ್ದು ಪ್ರತಿಭಟನಾ ಸ್ಥಳಕ್ಕೆ ಯಾವುದೇ ವಸ್ತುಗಳನ್ನ ತೆಗೆದುಕೊಂಡು ಹೋಗದಂತೆ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.