
ಸದನದಲ್ಲಿ ನಾನೊಂದು ಹೇಳಿಕೆ ಮಾಡಿದ್ದೇನೆ. ಅದಕ್ಕೆ ನಾನು ಬದ್ಧ ಇದ್ದೇನೆ. ಏನೇನು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡ್ತೀನಿ. ಮೂರು ದಿನ ಬ್ಯೂಸಿ ಇದ್ದೀನಿ. ನಾಳೆ ಕೋಲಾರ ಹೋಗ್ತೀನಿ. ನಾಡಿದ್ದು ತುರುವೇಕೆರೆ, ಅರಸೀಕೆರೆ ಪ್ರೋಗ್ರಾಂ ಫಿಕ್ಸ್ ಆಗಿದೆ. ಮೂರು ದಿನಗಳ ಬಳಿಕ ಗೃಹ ಸಚಿವರನ್ನ ಭೇಟಿಯಾಗ್ತೀನಿ ಅಂತಾ ತಿಳಿಸಿದ್ದಾರೆ ಕೆ.ಎನ್ ರಾಜಣ್ಣ.
ರಾಜೇಂದ್ರ ಸಿಎಂ ಭೇಟಿ ಮಾಡಬಹುದು. ಮೂರು ನಾಲ್ಕು ದಿನ ನಾನು ಬೆಂಗಳೂರಿಗೆ ಹೋಗಲ್ಲ. ಅವಶ್ಯಕತೆ ಬಿದ್ದರೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡ್ತೀನಿ. ಗೃಹ ಸಚಿವರನ್ನ ಭೇಟಿ ಮಾಡೇ ಮಾಡ್ತೀನಿ. ಹನಿಟ್ರ್ಯಾಪ್ ವಿಚಾರವಾಗಿ
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಬಂದು 3 ಗಂಟೆಗೆ ಉತ್ತರ ಕೊಡ್ಬೇಕಿತ್ತಲ್ಲ, ಅದಕ್ಕೂ ಮೊದಲು ಭೇಟಿ ಮಾಡಿಲು ಹೋಗಿದ್ದೆ. ಅಲ್ಲಿ ಏನು ಚರ್ಚೆ ಆಗಲಿಲ್ಲ. ಮಧ್ಯಾಹ್ನ 12.30ಕ್ಕೆ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿದ್ದೆ. ಅವರು ಏನೋ ಓದುತ್ತಿದ್ದರು. ದೂರವಾಣಿ ಮೂಲಕ ದೇವರು ನಿನಗೆ ಏನು ಬುದ್ದಿ ಕೊಡುತ್ತೋ ಆ ರೀತಿ ಮಾಡು ಅಂತ ಹೇಳಿದ್ರು.

ಮೂರು ತಿಂಗಳಿಂದ ಹನಿಟ್ರ್ಯಾಪ್ ಯತ್ನ ಅಲ್ಲ, ಕಳೆದ ಒಂದೂವರೆ ತಿಂಗಳಿಂದ ಪ್ರಯತ್ನ ನಡೆಯುತ್ತಿದೆ. ಏನೇನು ಕೃತ್ಯ ನಡೆದಿದೆ ಅಂತ ವಿವರವಾಗಿ ಹೇಳಿಕೆಯಲ್ಲಿ ಕೊಡ್ತೀನಿ. ಎಲ್ಲರ ಎದುರು ಏನು ಎತ್ತ ಅಂತ ಹೇಳಲು ಬಯಸಲ್ಲ. ಎಲ್ಲೋ ಆಗಿದೆ, ಆಗಿರೋದನ್ನೆಲ್ಲಾ ಹೇಳ್ತೀನಿ. ಸತೀಶ್ ಜಾರಕಿಹೊಳಿ ತೀವ್ರವಾಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಯಾವ ರೀತಿ ತೀವ್ರತೆ ಅಂತ ಅವರ ಬಾಯಿಂದಲ್ಲೇ ಕೇಳಿ. ಲೈಕ್ ಮೈಡೆಂಡ್ ಏನಿದ್ದೇವೆ ಕುಳಿತು ಮಾತನಾಡ್ತೀವಿ. ಯಾರು ಮಾಡಿದ್ದಾರೆ ಅಂತ ನಾನು ಹೇಳಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ, ಹಾಸನದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಮೇಲೆ ಯಾಕೆ ಟಾರ್ಗೆಟ್ ಮಾಡಿದ್ರು ಅಂತ ಹೇಳೋದು. ಒಂದೊಂದು ಉದ್ದೇಶ ಇಟ್ಟುಕೊಂಡು ಮಾಡಿರ್ತಾರೆ. ನನ್ನ ಮೇಲಿನ ಉದ್ದೇಶ ಏನಂತ ಗೊತ್ತಿಲ್ಲ. ತನಿಖೆಯಲ್ಲಿ ಗೊತ್ತಾಗಬೇಕು, ಗೊತ್ತು ಪಡಿಸಬೇಕು. ತನಿಖೆಯ ಸ್ವರೂಪ ಸರ್ಕಾರಕ್ಕೆ ಬಿಟ್ಟ ವಿಚಾರ. ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತನಿಖೆ ಮಾಡಿದ್ರೆ ಸೂಕ್ತ. ಇದರಲ್ಲಿ ಇವರು, ಅವರು ಸೇರಿದ್ದಾರೆ ಅಂತ ನಿರ್ದಿಷ್ಟವಾಗಿ ಹೇಳಲು ಬರಲ್ಲ. ಯಾರಿದ್ದಾರೆ ಅಂತ ಸತ್ಯ ಹೊರಗೆ ಬರಬೇಕು. ಹೈಕಮಾಂಡ್ಗೆ ಯಾಕೆ ದೂರು ಕೊಡಬೇಕು ಅಂದರೆ ಯಾರಾದ್ರೂ ಮುಂದೆ ಹೈಕಮಾಂಡ್ಗೆ ಸಿಡಿ ತಗೊಂಡು ಹೋಗಿ ಕೊಟ್ಟರೆ, ರಾಜಣ್ಣ ಮೊದಲೇ ಹೇಳಿದ್ರು ಅಂತ ಗೊತ್ತಿರಬೇಕಲ್ಲ ಅದಕ್ಕೆ ಹೇಳಬೇಕು ಎಂದಿದ್ದಾರೆ.
ನಾನು ಯಾವ ರೀತಿ ಲೋಪ ಎಸಗಿಲ್ಲ. ನನ್ನ ಮೇಲೆ ಯಾವುದಾದ್ರೂ ಲೋಪ ಇದೆ ಅಂದ್ರೆ ನಂಬಬಾರದು. ಡಿ.ಕೆ ಶಿವಕುಮಾರ್ ಹಲೋ ಅಂದಾಗ ಆ ಕಡೆಯಿಂದ ಹಲೋ ಅಂತಾರೆ ಅನ್ನೋ ಹೇಳಿಕೆ ವಿಚಾರ. ಹೌದಾ ಅದು ನನಗೆ ಗೊತ್ತಿಲ್ಲ. ಅವರವರ ಅನುಭವ ಅವರು ಹೇಳ್ತಾರೆ. ನಾನು ಯಾವತ್ತು ಯಾರಿಗೂ ಕೆಟ್ಟದು ಬಯಸಿಲ್ಲ. ಕೆಟ್ಟದು ಬಯಸುತ್ತಾರೋ ಅವರು ಉದ್ದಾರ ಆಗಿಲ್ಲ, ನೂರಾರು ಉದಾಹರಣೆಗಳಿವೆ. ಬೇರೆಯವರಿಗೆ ಕೆಟ್ಟದು ಮಾಡಿ ನನ್ನಗೇನು ಲಾಭ ಆಗಬೇಕಿಲ್ಲ. ನಮಗಾದ ರೀತಿ ಬೇರೆಯವರಿಗೆ ಆಗಬಾರದು. ಸಾರ್ವಜನಿಕ ಜೀವನದಲ್ಲಿ ಏಕಾಏಕಿ ಬೆಳೆದು ಬಂದಿಲ್ಲ. ಹೋರಾಟ ಮಾಡಿಕೊಂಡು ಜನ ಮನ್ನಣೆ ಗಳಿಸಿಕೊಂಡು ಬೆಳೆದು ಬಂದಿದ್ದೇನೆ ಎಂದಿದ್ದಾರೆ.

ಒಬ್ಬರು ಬೆಳೆದ ಮೇಲೆ ಈ ರೀತಿ ತೇಜೋವಧೆ ಮಾಡೋದು ಯಾರಿಗೂ ಭೂಷಣ ಬರಲ್ಲ. ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡ್ತಾರೆ. ರಾಜಕಾರಣದಲ್ಲಿ ಇರೊರಿಗೆ ತೇಜವಧೆ ಮಾಡುವಂತಹದ್ದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಯಾರು ಇದರಲ್ಲಿ ಭಾಗಿ ಆಗ್ತಾರೆ ಅನ್ನೋದನ್ನ ಪತ್ತೆ ಹಚ್ಚಬೇಕು. ಅವರಿಗೆ ಶಿಕ್ಷೆ ಕೊಡಿ ಅಂತ ಒತ್ತಾಯವಲ್ಲ, ಮುಂದೆ ಈ ರೀತಿ ಆಗಬಾರದು ಅನ್ನೋದು ನನ್ನ ಆಗ್ರಹ.