ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ನಗರದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 1ರಿಂದ 8ನೇ ಬ್ಲಾಕ್ನಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ, ಸುಮಾರು 57 ಕೋಟಿ ರೂ.ಮೊತ್ತದ ಸ್ವತ್ತುಗಳನ್ನು ಮರುವಶ ಮಾಡಿಕೊಂಡಿದೆ.
ಈ ಬಡಾವಣೆಯ 1ರಿಂದ 8ನೇ ಬ್ಲಾಕ್ನಲ್ಲಿ ಸುಮಾರು 7 ಕಿ.ಮೀ. ಉದ್ದದ ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶೆಡ್ಗಳು, ಅಂಗಡಿಗಳು ಮತ್ತು ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿ ಅಲ್ಲಿನ ಸ್ವತ್ತನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಆರೆ.
ಕಾರ್ಯಾಚರಣೆ ನೇತೃತ್ವವನ್ನು ಪ್ರಾಧಿಕಾರದ ಕಾರ್ಯಪಡೆಯ ಆರಕ್ಷಕ ಅಧೀಕ್ಷಕ ನಂಜುಂಡೇಗೌಡ ವಹಿಸಿದ್ದರು.ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಸಹಾಯಕ ಅಭಿಯಂತರ ಅಶ್ವಿನ್ ಕುಮಾರ್ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನೆರವೇರಿಸಲಾಯಿತು.