ನಿವೃತ್ತ ಅಂಚಿನಲ್ಲಿದ್ದ ಐ ಎ ಎಸ್ ಅಧಿಕಾರಿ ಲಲನೆಯ ಸಂಚಿಗೆ ಬಲಿ..!

ಹೆಣ್ಣು ಹೊನ್ನು ಮಣ್ಣು.. ಈ ಮೂರರ ಹಿಂದೆ ಹೋದವ ಯಾವತ್ತಿದ್ರು ಬೀದಿಪಾಲೆ.. ಅದು ಎಲ್ಲಾ ಕಳೆದುಕೊಂಡು ಬೀದಿಗೆ ಬರಬಹುದು.. ಇಲ್ಲ ಎಲ್ಲರನ್ನ ಕಳೆದುಕೊಳ್ಳಬಹುದು.. ಇಲ್ಲಾ ತನ್ನ ಹುದ್ದೆ, ಗೌರವಕ್ಕೆ ದಕ್ಕೆ ತಂದುಕೊಂಡು ತಲೆ ಎತ್ತದಂತಾ ಅವಸ್ಥೆಗೆ ತಲುಪಿಬಿಡುತ್ತಾನೆ.. ಅಂತಹದ್ದೆ ಒಂದು ಸ್ಟೋರಿ ನೀವು ಓದ್ತಾ ಇರೊದು..
ಬೆಲವೆಣ್ಣಿನ ಬಲೆಗೆ ಬಿದ್ದರಾ ಬಿ.ಡಿ.ಎ ಬಾಸ್..!

ಅದು 2024 ರ ಮಧ್ಯರಾತ್ರಿ ಕಳೆದು
2025 ರ ಹೊಸವರ್ಷಾಚರಣೆಯ ಆರಂಭದ ಸಂಭ್ರಮಾಚರಣೆಯಲ್ಲಿ ಇಡೀ ಬೆಂಗಳೂರು ಜಗಮಗಿಸುತ್ತಿತ್ತು…!
ಪ್ರತಿವರ್ಷದಂತೆ ಬೆಂಗಳೂರಿನ ಹೊರವಲಯದ ರೆಸಾರ್ಟ್ ಗಳಲ್ಲಿ ನಶೆಯ ನಿಷಾಚರಣೆಗೆ ಎಗ್ಗಿಲ್ಲದೆ ಸಿದ್ದತೆಯಾಗಿತ್ತು. ಅಂದೇ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಹಣಕಾಸು ವಹಿವಾಟು ನಡೆಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸದಲ್ಲಿ ನಿತವಾಗಿರೋ ಖಾಸಗಿ ಕಾಂಟ್ರಾಕ್ಟ್ ರ್ ಗಳು ಬೆಂಗಳೂರಿನ ಹೊರವಲಯದ ಒಂದು ರೆಸಾರ್ಟ್ ಬುಕ್ ಮಾಡಿ ಬಿ.ಡಿ.ಎ ಅಧಿಕಾರಿಗಳಿಗೆ ಮೋಜು ಮಸ್ತಿಯ ಭರ್ಜರಿ ಪಾರ್ಟಿಯನ್ನು ಏರ್ಪಡಿಸಿರುತ್ತಾರೆ.ನಿರೀಕ್ಷೆಯಂತೆ ಬಿ.ಡಿ.ಎ ಎಂಜಿನಿರಯರ್ ಗಳು ಹಾಗು ಇಲಾಖೆಯ ಬಹುತೇಕ ಎಲ್ಲ ಹಿರಿಯ ಅಧಿಕಾರಿಗಳಿಗೂ ಈ ಹೊಸವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿರುತ್ತಾರೆ. ತಡರಾತ್ರಿ ಹನ್ನೆರಡವರೆಗೂ ಮದ್ಯಗೋಷ್ಠಿಯಲಿ ಮಿಂದಿದ್ದ ಕೆಲವರು ಅಷ್ಟರಲ್ಲಾಗಲೇ ತಮ್ಮ ನಿಯಂತ್ರಣ ಕಳೆದುಕೊಂಡಿದ್ದರು..

ಇದೇ ಸರಿಯಾದ ಸಮಯವೆಂದು ಈ ಮೊದಲೇ ಸ್ಟಿಂಗ್ ಪ್ಲಾನ್ ಮಾಡಿದ್ದ ಬಿ.ಡಿ.ಎ ಬ್ರೋಕರ್ಸ್ ( ಮುರಳಿ, ಪ್ರಸಾದ್ ಎಂಬುವರು ಎಂಬ ಮಾಹಿತಿ) ಕೆಲವರು ಹೈ ಟೆಕ್ ಬೆಲವೆಣ್ಣುಗಳನ್ನು ಇವರ ಮುಂದೆ ನರ್ತಿಸುವಂತೆ ಪ್ರೇರೇಪಿಸುತ್ತಾರೆ. ಹೀಗೆ ಕೆಲಹೊತ್ತಿನ ನಂತರ ಇದೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಹಿರಿಯ ಐ.ಎ.ಎಸ್ ಅಧಿಕಾರಿಯೊಬ್ಬರು ಪಾನಮತ್ತರಾಗಿ ಬೆಲವೆಣ್ಣಿನ ಮುಂದೆ ಬೆತ್ತಲಾಗುತ್ತಾರೆ..! ಇದನ್ನೇ ಕಾಯುತ್ತಿದ್ದ ಆ ಸ್ಟಿಂಗ್ ಖದೀಮರು ತಮ್ಮ ಮೊಬೈಲ್ ನಲ್ಲಿ ಆ ದೃಷ್ಯವನ್ನು ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ನಿಯಂತ್ರಣ ಕಳೆದುಕೊಂಡಿದ್ದ ಆ ಹಿರಿಯ ಐ.ಎ.ಎಸ್ ಅಧಿಕಾರಿಗೆ ಇದ್ಯಾವುದೂ ಗೊತ್ತಿರುವುದಿಲ್ಲ..

ಆದ್ರೆ ಸ್ಟಿಂಗ್ ಮಾಡಿಕೊಂಡಿದ್ದ ಆ ತಂಡ ಒಂದು ವಾರ ಸುಮ್ಮನಿದ್ದು ನಂತರ ತಮ್ಮ ವರಸೆ ಪ್ರಾರಂಭಿಸುತ್ತಾರೆ.ಅದೇನಂದ್ತೆ ಬಿ.ಡಿ.ಎ ನ ಹಲವು ಬೆಲೆಬಾಳುವ ಫೈಲ್‌ಗಳನ್ನು ಕ್ಲಿಯರ್ ಮಾಡಿಕೊಡುವಂತೆ ಬೇಡಿಕೆ ಇಡುತ್ತಾರೆ. ಆಗ ಅದನ್ನು ಆ ಅಧಿಕಾರಿ ನಿರಾಕರಿಸಿದ ಮರುಕ್ಷಣವೇ ಸ್ಟಿಂಗ್ ವಿಡಿಯೋ ತೋರಿಸಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಾರೆ…ಆ ವಿಡಿಯೋ ನೋಡಿ ತಾನು ಟ್ರ್ಯಾಪ್ ಆಗಿರೋ ವಿಷಯ ಗೊತ್ತಾದೊಡನೆ ಗಾಬರಿಯಾದ ಆ ಹಿರಿಯ ಐ.ಎ.ಎಸ್ ಅಧಿಕಾರಿ ವಿಧಿಯಿಲ್ಲದೆ ಅವರ ಬೇಡಿಕೆಗೆ ಸ್ಪಂದಿಸಲು ಶುರುಮಾಡುತ್ತಾರೆ…

ಅಷ್ಟರಲ್ಲಾಗಲೇ ಬಿ.ಡಿ.ಎ ಅಂಗಳದಲ್ಲಿ ಈ ಪ್ರಕರಣದ ಬಗ್ಗೆ ಗುಸು ಗುಸು ಪ್ರಾರಂಭವಾಗಿರುತ್ತೆ..ಅಷ್ಟೇ ಅಲ್ಲ ಈ ವಿಷಯ ಬಿ.ಡಿ.ಎ ಅಧ್ಯಕ್ಷರು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೂ ಹೋಗಿರುತ್ತೆ..ಆಗ ಅವರನ್ನು ತಕ್ಷಣವೇ ಎತ್ತಂಗಡಿ ಮಾಡಿ ಮತ್ತೋರ್ವ ಅಧಿಕಾರಿಯನ್ನು ತರಲು ತೀರ್ಮಾನ ತೆಗೆದುಕೊಂಡಾಗ ಇನ್ನು ಕೇವಲ ಮೂರು ತಿಂಗಳಲ್ಲಿ ತನ್ನ ನಿವೃತ್ತಿ ಇದೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಆ ಅಧಿಕಾರಿ ಅವಲತ್ತುಕೊಳ್ಳುತ್ತಾರೆ. ಅದಕ್ಕೆ ಬೇಕಾದ ಕಪ್ಪಕಾಣಿಕೆಯನ್ನೂ ಯಾರಿಗೆ ಒಪ್ಪಿಸಬೇಕೋ ಅವರಿಗೆ ಒಪ್ಪಿಸುತ್ತಾರೆ..! ಈ ವಿಷಯದ ಬಗ್ಗೆ ಒಂದು ಖಾಸಗಿ ಚಾನೆಲ್ ಬೆಳಗ್ಗೆಯಿಂದ ಪ್ರೋಮೋ ತೋರಿಸಿದರು ಆದ್ರೆ ಸಂಜೆ ಆ ಸ್ಟೋರಿಯೇ ಪ್ರಸಾರವಾಗಲಿಲ್ಲ…!
ಅಲ್ಲಿಗೆ ಒಂದು ಸುದ್ದಿಯಾಗಬೇಕಾದ ಸತ್ಯ ಸಾವಿನಲ್ಲಿ ಅಂತ್ಯವಾಗಿತ್ತು…!










