• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

BCCI ಗಂಗೂಲಿಗೆ ಬಿಟ್ಟು ಬಂಗಾಳದ ಗದ್ದುಗೆ‌‌ ಮೇಲೆ‌ ಕಣ್ಣಿಟ್ಟರೇ ಅಮಿತ್ ಶಾ?

by
October 15, 2019
in ದೇಶ
0
BCCI ಗಂಗೂಲಿಗೆ ಬಿಟ್ಟು ಬಂಗಾಳದ ಗದ್ದುಗೆ‌‌ ಮೇಲೆ‌ ಕಣ್ಣಿಟ್ಟರೇ ಅಮಿತ್ ಶಾ?
Share on WhatsAppShare on FacebookShare on Telegram

ಭಾರತದಲ್ಲಿ‌ ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲದವರ ಸಂಖ್ಯೆ ವಿರಳಾತಿ ವಿರಳ. ಈಗ ಹುಟ್ಟಿದ ಕೂಸಿನಿಂದ ಹಿಡಿದು ಇನ್ನೇನು‌ ಸಾಯುತ್ತಾರೆ ಎನ್ನುವವರೂ ಚೆಂಡು-ಬ್ಯಾಟು-ವಿಕೆಟ್ ಒಳಗೊಂಡ ಆಟದ ಮೇಲೆ ಹೊಂದಿರುವ ಅದಮ್ಯ ಅಭಿಮಾನ ಕ್ರಿಕೆಟ್ ಅನ್ನು ‘ಭಾರತದ ಧರ್ಮ’ ಎನ್ನುವಷ್ಟರ ಮಟ್ಟಿಗೆ ಬೆಳೆಸಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಹೀಗೆ ನಾನಾ ಮಾಜಿ, ಹಾಲಿ ಆಟಗಾರರು ಅಭಿಮಾನಿಗಳ ಆರಾಧ್ಯ ದೈವಗಳಾಗಿದ್ದಾರೆ. ಈ ರೀತಿಯ ಹುಚ್ಚು ಅಭಿಮಾನವೇ ಕ್ರಿಕೆಟ್ ಹಾಗೂ ಅದನ್ನು ನಿಯಂತ್ರಿಸುವ ಸಂಸ್ಥೆ, ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯನ್ನು (ಬಿಸಿಸಿಐ) ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆಯನ್ನಾಗಿ ಬೆಳೆಸಿದೆ.

ADVERTISEMENT

ಭಾರತದ ಕ್ರೀಡಾ ವಲಯಕ್ಕೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಅನುದಾನ 2,500 ಕೋಟಿ ರುಪಾಯಿ ದಾಟುವುದಿಲ್ಲ.‌ ಸನ್ನಿವೇಶ ಹೀಗಿರುವಾಗ 13 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯ ಹೊಂದಿರುವ ಒಂದು ಸಂಸ್ಥೆಗೆ ಹೊಸ ಅಧ್ಯಕ್ಷರ ನೇಮಕದ ವಿಚಾರ ಸದ್ದು ಮಾಡದೇ ಇರುತ್ತದೆಯೇ? ಕ್ರಿಕೆಟ್ ವಿಚಾರದಲ್ಲಿ ಸಣ್ಣ ಸೂಜಿ‌ ಬಿದ್ದರೂ ದೇಶದ ಜನರ ಕಿವಿಗಳು ನಿಮಿರುವಾಗ, ಹಣದ ಥೈಲಿ ಹೊಂದಿರುವ ಬಿಸಿಸಿಐ ಆಡಳಿತದ ಚುಕ್ಕಾಣಿಯನ್ನು‌ ಯಶಸ್ವಿ ಹಾಗೂ ಮಾಜಿ ಕ್ರಿಕೆಟಿಗ, ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಹಿಡಿಯುತ್ತಾರೆ ಎಂದರೆ ಅದು ಆಸಕ್ತಿ ಕೆರಳಿಸದೆ ಇರುತ್ತದೆಯೇ? ಅದರಲ್ಲೂ ಕುಟುಂಬ ರಾಜಕಾರಣ ಹಾಗೂ ಪ್ರಭಾವಿ ಸ್ಥಾನಗಳನ್ನು ಬಲಾಢ್ಯರ ಮಕ್ಕಳು ಪಡೆಯುವುದರ ಕಡು ವಿರೋಧಿಯಾದ ದೇಶದ ಗೃಹ ಸಚಿವ ಅಮಿತ್ ಶಾ ಅವರ ಪುತ್ರನಾದ ಜಯ್ ಶಾ ಅವರೇ ಬಿಸಿಸಿಐ ಕಾರ್ಯದರ್ಶಿಯಾಗುವುದು, ಕೇಂದ್ರ ಹಣಕಾಸು‌ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಹೋದರ ಖಜಾಂಚಿಯಾಗಿ ಆಯ್ಕೆಯಾಗುವ ವಾರ್ತೆ ಗಮನಸೆಳೆಯದೆ ಇದ್ದೀತೆ? ಇದೆಲ್ಲಕ್ಕೂ ಮಿಗಿಲಾದುದು 2021ರ ಮೇನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಾಗೂ ಬಂಗಾಳದ ಹುಲಿ ಗಂಗೂಲಿ ಆಯ್ಕೆ.

ಬ್ರಿಟಿಷರ ವಿರುದ್ಧದ ಸೆಡ್ಡು ಹೊಡೆದು ಸ್ವಾಭಿಮಾನದ ಸಂಕೇತವಾಗಿ 1928ರಲ್ಲಿ ಆಯ್ದ ಆಟಗಾರರು ದೆಹಲಿಯಲ್ಲಿ ಆರಂಭಿಸಿದ‌ ಬಿಸಿಸಿಐ ಇಂದು ರಾಜಕಾರಣಿಗಳು ಹಾಗೂ ಉದ್ಯಮಿಗಳು ಮರ್ಜಿಗೆ ಸಿಲುಕಿ‌‌ ನಲುಗುತ್ತಿರುವುದು ಹೊಸ ವಿಚಾರವೇನಲ್ಲ. ಆಟದ ಒಳಿತು, ಕೆಡಕಿನ ಬಗ್ಗೆ ಗಮನಹರಿಸಲು ಆರಂಭವಾದ ಸಂಸ್ಥೆ ಇಂದು‌ ಅಧಿಕಾರ ದಾಹ ತೀರಿಸಿಕೊಳ್ಳಲು ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಲವಲೇಶದಷ್ಟೂ ಅನುಮಾನವಿಲ್ಲ. 2021ರ ಮೇನಲ್ಲಿ 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಬಿಜೆಪಿಗೆ ‘ಬಂಗಾಳ ಅಸ್ಮಿತೆ’ ಹೋರಾಟ ಎತ್ತಿ ಹಿಡಿಯುವ ಪ್ರಬಲ ಸ್ಥಳೀಯ ಮುಖವಿಲ್ಲ. ಇದಕ್ಕಾಗಿ ಕ್ರಿಕೆಟ್ ಮೂಲಕ ಸಾಕಷ್ಟು ವರ್ಚಸ್ಸು ಗಳಿಸಿರುವ, ಬಂಗಾಳದ ಹುಲಿ ಎಂದೇ ಖ್ಯಾತರಾದ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಿಸಿದ್ದಾರೆ ಎನ್ನಲಾಗುತ್ತಿದೆ.‌ ಇದಕ್ಕೆ ಪೂರಕ ಎಂಬಂತೆ ಅಮಿತ್ ಶಾ ಅವರನ್ನು ಗಂಗೂಲಿ ಕೆಲವು ದಿನಗಳ‌ ಹಿಂದೆ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ನ್ಯಾ. ಲೋಧಾ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮುಂದಿನ 10 ತಿಂಗಳು ಮಾತ್ರ ಬಿಸಿಸಿಐ ಅಧ್ಯಕ್ಷರಾಗಿರಲಿರುವ ಗಂಗೂಲಿ, ಆನಂತರ ನಿರ್ದಿಷ್ಟ ಅವಧಿಗೆ ಕ್ರಿಕೆಟ್ ಆಡಳಿತದ ಚಟುವಟಿಕೆಯಿಂದ ದೂರ ಉಳಿಯಬೇಕಿದೆ. ಇದೇ ಸಂದರ್ಭಕ್ಕೆ 2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಪರವಾಗಿ ಗಂಗೂಲಿ ಪ್ರಚಾರ ನಡೆಸಬೇಕು. ಇಲ್ಲವೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂಬ ಒಪ್ಪಂದ ಅಮಿತ್ ಶಾ ಹಾಗೂ ಗಂಗೂಲಿ‌‌ ನಡುವೆ ನಡೆದಿದೆ ಎನ್ನಲಾಗುತ್ತಿದೆ. ಇಂಥ ಒಳ ಒಪ್ಪಂದ ನಡೆದಿಲ್ಲ‌ ಎಂದಿರುವ ಅಮಿತ್ ಶಾ, “ಗಂಗೂಲಿ‌‌ ಬಿಜೆಪಿ‌ ಸೇರಿದರೆ ಸ್ವಾಗತ” ಎನ್ನುವ ಮೂಲಕ ತಾನೊಬ್ಬ ವೃತ್ತಿಪರ ರಾಜಕಾರಣಿ‌ ಎಂಬುದನ್ನು ನೆನಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಆಡಳಿತಾರೂಢ ಟಿಎಂಸಿಗೆ ಪ್ರಬಲ ಪೈಪೋಟಿ ಒಡ್ಡಿ 18 ಸ್ಥಾನ ಗೆದ್ದಿರುವ ಬಿಜೆಪಿ ಶೇ. 40.5ರಷ್ಟು ಮತಗಳಿಸಿ ಎರಡನೇ ಅತಿದೊಡ್ಡ ಪಕ್ಷ ಎನಿಸಿಕೊಂಡಿತ್ತು. ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿಗೆ ಸೋಲುಣಿಸಲು ಟೊಂಕಕಟ್ಟಿರುವ ಬಿಜೆಪಿ ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ಬಂಗಾಳ ಸೇರಿದಂತೆ ದೇಶಾದ್ಯಂತ ಜಾರಿಗೊಳಿಸುವುದಾಗಿ ಹೇಳಿದೆ. ಪಶ್ಚಿಮ ಬಂಗಾಳ ಚುನಾವಣೆಯ ಮೇಲೆ ಕಣ್ಣಿಟ್ಟು ಇಂಥ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಈಗ ಸ್ಥಳೀಯ ಜನಪ್ರಿಯ ನಾಯಕತ್ವದ ಹುಡುಕಾಟದಲ್ಲಿರುವ ಬಿಜೆಪಿ ಗಂಗೂಲಿಯ ಬೆನ್ನು ಬಿದ್ದಿದೆ ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಡಪಕ್ಷದ ಬುದ್ಧದೇವ ಭಟ್ಟಚಾರ್ಯ, ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತನ್ನ ಗುರು ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ, ದಿವಂಗತ ಜಗಮೋಹನ್ ದಾಲ್ಮಿಯಾ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಂಡು ನಾಜೂಕಾಗಿ‌ ಕ್ಲಿಷ್ಟ ಸಂದರ್ಭದಲ್ಲಿ‌ ಗೆದ್ದಿರುವ ಗಂಗೂಲಿ ಈಗಲೂ ಅದೇ ದಾರಿ ಅನುಸರಿಸುವರೇ? ಕಾದು ನೋಡಬೇಕಿದೆ. ಇನ್ನು ದೊಡ್ಡ‌ ಸಾಧನೆಯ ಹಾದಿಯಲ್ಲಿ ಅನಿವಾರ್ಯ ಹೊಂದಾಣಿಕೆ ಅಗತ್ಯ ಎಂದರಿತು ಅಮಿತ್ ಶಾ ಅವರು ಗಂಗೂಲಿಗೆ ಅಧ್ಯಕ್ಷ ಸ್ಥಾನ ಕರುಣಿಸಿದ್ದಾರೆ ಎನ್ನುವ ಅನುಮಾನವನ್ನು ಅಷ್ಟು ಸುಲಭಕ್ಕೆ‌ ಅಲ್ಲಗಳೆಯಲಾಗದು. ಶತಾಯಗತಾಯ ಗೆಲ್ಲುವುದನ್ನೇ‌ ಗುರಿಯಾಗಿಸಿಕೊಂಡಿರುವ ಬಿಜೆಪಿಯ ಎಲೆಕ್ಷನ್ ಮಷೀನ್ ಅಮಿತ್ ಶಾ ತಂತ್ರಗಳು ಮುಂದಿನ ದಿನಗಳಲ್ಲಿ‌ ಸ್ಪಷ್ಟವಾಗಲಿವೆ.

Tags: Amit ShahBCCI CricketBJP PartyMamata BanerjeeSourav GangulyTMC PartyTrinamool CongressWest BengalWest Bengal Assembly Electionಅಮಿತ್ ಶಾಕ್ರಿಕೆಟ್ಟಿಎಂಸಿ ಪಕ್ಷತೃಣಮೂಲ ಕಾಂಗ್ರೆಸ್ಪಶ್ಚಿಮ ಬಂಗಾಳಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಬಿಜೆಪಿ ಪಕ್ಷಬಿಸಿಸಿಐಮಮತಾ ಬ್ಯಾನರ್ಜಿಸೌರವ್ ಗಂಗೂಲಿ
Previous Post

ಅಭಿಜಿತ್  ಬ್ಯಾನರ್ಜಿ ದಂಪತಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

Next Post

ಬುದ್ಧಿವಂತರ ಜಿಲ್ಲೆಗಳ ಹೆದ್ದಾರಿಯ ಟೋಲ್  ಗೇಟ್  ಕರ್ಮಕಾಂಡ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ಬುದ್ಧಿವಂತರ ಜಿಲ್ಲೆಗಳ ಹೆದ್ದಾರಿಯ ಟೋಲ್  ಗೇಟ್  ಕರ್ಮಕಾಂಡ

ಬುದ್ಧಿವಂತರ ಜಿಲ್ಲೆಗಳ ಹೆದ್ದಾರಿಯ ಟೋಲ್  ಗೇಟ್  ಕರ್ಮಕಾಂಡ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada