ಕೊರೋನಾ ಹೊಡೆತಕ್ಕೆ ಬದುಕು ಭಾರವಾಗಿರುವ ಹೊತ್ತಲ್ಲಿ ಬಿಬಿಎಂಪಿ (BBMP) ಮತ್ತೊಂದು ಬರೆ ಎಳೆಯಲು ಹೊರಟಿದೆ. ಈಗಾಗಲೇ ಹಲವು ಬಗೆಯ ಬಿಲ್ ಕಟ್ಟುತ್ತಿರುವ ಬೆಂಗಳೂರು ಜನರ ಜೇಬಿಗೆ ಪಾಲಿಕೆ ಮತ್ತೆ ಹಾಕುವ ಚಿಂತನೆ ಮಾಡುತ್ತಿದೆ. ಕರೆಂಟ್ ಬಿಲ್ (Electricity Bill), ನೀರಿನ ಬಿಲ್ (Water Bill) ಸೇರಿ ಹಲವು ಬಗೆಯ ಬಿಲ್ಗಳ ಜೊತೆಗೆ ಶ್ರೀ ಸಾಮಾನ್ಯರು ಇನ್ಮುಂದೆ ಗಾರ್ಬೇಜ್ ಯೂಸರ್ ಫೀ (Garbage User Fee) ಕಟ್ಟುವಂತಾಗಲಿದೆ. ಈ ಬಗೆಗಿನ ಚರ್ಚೆಯೊಂದು ಪಾಲಿಕೆಯಲ್ಲಿ ನಡೆಯುತ್ತಿದ್ದು, ಶೀಘ್ರವೇ ಇದು ಜಾರಿಯಾಗಲಿದೆ.
ಗಾರ್ಬೇಜ್ ಸೆಸ್ ಜೊತೆಗೆ ಗಾರ್ಬೇಜ್ ಬಿಲ್ ಕೂಡ ಜಾರಿ!
ಬೆಂಗಳೂರಿನಲ್ಲಿ ಈಗಾಗಲೇ ಗಾರ್ಬೇಜ್ ಸೆಸ್ ಜಾರಿಯಲ್ಲಿದೆ. ವಾರ್ಷಿಕವಾಗಿ ಕಟ್ಟಲಾಗುವ ಪ್ರಾಪರ್ಟಿ ತೆರಿಗೆ ಜೊತೆಗೆ ಗಾರ್ಬೇಜ್ ಸೆಸ್ ಅನ್ನು ಬೆಂಗಳೂರು ಜನರು ಭರಿಸುತ್ತಿದ್ದಾರೆ. ಅದರ ಹೊರತಾಗಿಯೂ ಇದೀಗ ಗಾರ್ಬೇಜ್ ಬಿಲ್ ಅನ್ನು ಕಟ್ಟ ಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. ಹೌದು, ಗಾರ್ಬೆಜ್ ಸೆಸ್ ಜೊತೆಗೆ ಗಾರ್ಬೆಜ್ ಯೂಸರ್ ಫೀ ಕೂಡಾ ಶೀಘ್ರದಲ್ಲೇ ಜಾರಿಯಾಗಲಿದೆ. ಪ್ರತಿ ತಿಂಗಳು ಕರೆಂಟ್ ಬಿಲ್ ಜೊತೆಗೆ ಇನ್ಮುಂದೆ ಗಾರ್ಬೆಜ್ ಬಿಲ್ ಕೂಡ ಬರಲಿದೆ. ವರ್ಷಕ್ಕೊಮ್ಮೆ ಗಾರ್ಬೆಜ್ ಸೆಸ್, ಪ್ರತಿ ತಿಂಗಳಿಗೊಮ್ಮೆ ಗಾರ್ಬೆಜ್ ಬಿಲ್ ಜನರು ಕಟ್ಟಲು ಮುಂದಿನ ದಿನಗಳಲ್ಲಿ ಕಟ್ಟ ಬೇಕಿದೆ.
ನಗಾರಭಿವೃದ್ಧಿ ಇಲಾಖೆಗೆ ಗಾರ್ಬೇಜ್ ಬಿಲ್ ಪ್ರಸ್ತಾವನೆ ಸಲ್ಲಿಕೆ!
ಕರೆಂಟ್ ಬಿಲ್ ಆಧಾರದ ಮೇರೆಗೆ ಈ ಗಾರ್ಬೆಜ್ ಬಿಲ್ ನಿಗದಿ ಮಾಡಲು ಪಾಲಿಕೆ ಯೋಚಿಸಿದೆ. ಈ ಬಗ್ಗೆ ಬೆಸ್ಕಾಂ ಜೊತೆಗೂ ಪಾಲಿಕೆ (Bruhath Bengaluru Mahanagara Palike) ಹಲವು ಸುತ್ತಿನ ಸಭೆ ನಡೆಸಿದ್ದು, ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡಾ ಕಟ್ಟಲು ಸಿದ್ಧಗೊಳ್ಳಬೇಕಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿಯಿಂದ ಪ್ರಸ್ತಾವನೆ ನೀಡಲಾಗಿದೆ. ಬಿಬಿಎಂಪಿ ಪ್ರಸ್ತಾವನೆಯ ಸಾಧಕ, ಬಾಧಕ (Nagative and Positive) ಚರ್ಚೆಯಾಗಿ ಇಲಾಖೆಯಿಂದ ಅನುಮೋದನೆ ಸಿಕ್ಕರೆ ಬೆಂಗಳೂರಿನಲ್ಲಿ ಡಬಲ್ ಟ್ಯಾಕ್ಸ್ (Double Tax) ನಿಯಮ ಜಾರಿಯಾಗಲಿದೆ.
ಪ್ರತಿ ತಿಂಗಳು 40 ಕೋಟಿ ಸಂಗ್ರಹದ ನಿರೀಕ್ಷೆ!
ಈಗಾಗಲೇ ಪಾಲಿಕೆ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ (Waste Collection) ಮಾಡುತ್ತಿದೆ. ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದ್ದು, ನಿರ್ವಹಣೆಗೆ ಆದಾಯ ಕ್ರೂಢೀಕರಣ ಅವಶ್ಯಕವಾಗಿದೆ. ಬೆಂಗಳೂರು ಮಂದಿ ಸಧ್ಯ ವರ್ಷಕ್ಕೊಮ್ಮೆ ಪ್ರಾರ್ಪಟಿ ಟ್ಯಾಕ್ಸ್ ಕಟ್ಟುತ್ತಿದ್ದು, ಆ ಪ್ರಾರ್ಪಟಿ ಟ್ಯಾಕ್ಸ್ (Property Tax) ಕಟ್ಟುವ ವೇಳೆ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಸೆಸ್ ಹಣ ಕಸನಿರ್ವಹಣೆಗೆ ಸಾಕಾಗುತ್ತಿಲ್ಲವೆನ್ನಿತ್ತಿರುವ ಬಿಬಿಎಂಪಿ, ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಬಿಲ್ ವಸೂಲಿಗೆ ಮುಂದಾಗಿದೆ. ಈ ಗಾರ್ಬೇಜ್ ಬಿಲ್ ನಿಂದ ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ (Contractors) ಪಾವತಿ ಹಾಗೂ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡಲು ಅನುಕೂಲವಾಗಲಿದೆ ಎಂಬುವುದು ಬಿಬಿಎಂಪಿ (Bruhath Bengaluru Mahanagara Palike) ನಿಲುವು. ಆದರೆ ಇದರ ನಡುವೆ ಕೊರೋನಾ ಹೊಡೆತಕ್ಕೆ ಆರ್ಥಿಕವಾಗಿ ದಿವಾಳಿಯಾಗಿರುವ ಜನರು ಇದೀಗ ಮತ್ತೊಂದು ಹೊರೆ ಹೊತ್ತುಕೊಳ್ಳಲು ಸಜ್ಜಾಗಬೇಕಿದೆ.