• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

BBMP ಆಯುಕ್ತರ ಚುರುಕು ಕಾರ್ಯಾಚರಣೆ; ಹಾಸಿಗೆ ಕೊಡದ ಆಸ್ಪತ್ರೆಗಳ ಮೇಲೆ ಕ್ರಮ

by
July 19, 2020
in ಕರ್ನಾಟಕ
0
BBMP ಆಯುಕ್ತರ ಚುರುಕು ಕಾರ್ಯಾಚರಣೆ; ಹಾಸಿಗೆ ಕೊಡದ ಆಸ್ಪತ್ರೆಗಳ ಮೇಲೆ ಕ್ರಮ
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಕರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ, ಕರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡು ಎರಡ್ಮೂರು ದಿನಗಳನ್ನು ತೆಗೆದುಕೊಳ್ಳಲಾಗ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ಆರೋಗ್ಯ ಸಿಬ್ಬಂದಿಗಳು ವಿಫಲವಾಗ್ತಿದ್ದಾರೆ ಎನ್ನುವ ಆರೋಪ ಎದುರಾಗಿತ್ತು. ಅದೇ ಕಾರಣಕ್ಕೆ ಹಿಂದಿನ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಮಂಜುನಾಥ್‌ ಪ್ರಸಾದ್‌ ಅವರನ್ನು ತಂದು ಕೂರಿಸಲಾಗಿದೆ. ಶನಿವಾರ ಅಧಿಕಾರ ವಹಿಸಿಕೊಂಡ ಮಂಜುನಾಥ್‌ ಪ್ರಸಾದ್‌, ಭಾನುವಾರವ ಬೆಂಗಳೂರಿನಲ್ಲಿ ಬಿರುಗಾಳಿ ಸಂಚಾರ ನಡೆಸಿದ್ದಾರೆ.

ADVERTISEMENT

ಆಸ್ಪತ್ರೆಗಳಲ್ಲಿ ಶೇಕಡ 50 ರಷ್ಟು ಹಾಸಿಗೆಯನ್ನು ಸರ್ಕಾರ ಹೇಳುವ ರೋಗಿಗಳಿಗೆ ಕೊಡಬೇಕು ಎನ್ನುವುದು ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳು ಮಾಡಿಕೊಂಡಿರುವ ಒಡಂಬಡಿಕೆ. ಆದರೆ ಖಾಸಗಿ ಆಸ್ಪತ್ರೆಗಳು ಒಪ್ಪಂದದಂತೆ ಹಾಸಿಗೆಗಳನ್ನು ಬಿಟ್ಟುಕೊಟ್ಟಿಲ್ಲ, ಇದರಿಂದ ಸಿಎಂ ಬಿ.ಎಸ್‌ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸೂಚನೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅಖಾಡಕ್ಕೆ ಇಳಿದಿದ್ದಾರೆ. ಖಾಸಗಿ ಆಸ್ಪತ್ರೆಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಒಪ್ಪಂದಂತೆ ಶೇಕಡ 50 ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಬೇಕು, ಇಲ್ಲದಿದ್ದರೆ ಸಿಎಂ ಸೂಚನೆಯಂತೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎನ್ನುವ ಸಂದೇಶ ರವಾನಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿರುವ BBMP ಆಯುಕ್ತ ಮಂಜುನಾಥ್‌ ಪ್ರಸಾದ್‌, ಸಾಕ್ರಾ, ವೈದೇಹಿ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಿಗೆ ನೋಟಿಸ್‌ ಕೊಟ್ಟಿದ್ದಾರೆ. ಕೋವಿಡ್‌ 19 ರೋಗಿಗಳಿಗೆ ಸರಿಯಾಗಿ ಬೆಡ್​ ಕೊಡ್ತಿಲ್ಲ ಎನ್ನುವ ಮಾಹಿತಿ ಬಂದಿತ್ತು. ಹಾಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. 3 ಆಸ್ಪತ್ರೆಗಳಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಕೆಲಸ ಮಾಡುತ್ತಿದೆ. ಸಕ್ರಾ, ವೈದೇಹಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಆದೇಶ ಪಾಲಿಸ್ತಿಲ್ಲ. ಈಗಲೂ ಸರ್ಕಾರದ ಆದೇಶಕ್ಕೆ ಸ್ಪಂದಿಸದಿದ್ರೆ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡುವ ಎಚ್ಚರಿಕೆ ಕೊಟ್ಟಿದ್ದೇವೆ ಎಂದಿದ್ದಾರೆ ನೂತನ ಆಯುಕ್ತ ಮಂಜುನಾಥ್‌ ಪ್ರಸಾದ್‌.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮತ್ತಷ್ಟು ಆಸ್ಪತ್ರೆಗಳ ಮೇಲೆ ಬಿಬಿಎಂಪಿ ಆಯುಕ್ತರ ಆಕ್ರೋಶದ ಕೆಂಗಣ್ಣು ಬಿದ್ದಿದ್ದು ಯಲಹಂಕದ ಮಾನಸ‌, ಆರ್ಕೆ, ಫೊರ್ಟಿಸ್‌ ಆಸ್ಪತ್ರೆಗಳಿಗೂ ನೋಟಿಸ್ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಶೇಕಡ 50ರಷ್ಟು ಹಾಸಿಗೆಯನ್ನು ನೀಡುವಂತೆ ಸೂಚಿಸಿದ್ದಾರೆ. ಬೆಂಗಳೂರು ಜಿಲ್ಲಾ ವೈದ್ಯಾಧಿಕಾರಿ ನೋಟಿಸ್ ನೀಡಿದ್ದು, ಕೆಲವು ಆಸ್ಪತ್ರೆಗಳು ಹಾಸಿಗೆ ಹಸ್ತಾಂತರಿಸಿಲ್ಲ, 24 ಗಂಟೆಗಳೊಳಗೆ ಸೂಕ್ತ ಪ್ರತಿಕ್ರಿಯೆ ನೀಡಿ, ಇಲ್ಲದಿದ್ದರೆ ಹೊರ ರೋಗಿ ಚಿಕಿತ್ಸೆಯನ್ನು ಬಂದ್ ಮಾಡುತ್ತೇವೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ನೋಟಿಸ್‌ಗೂ ಬಗ್ಗದಿದ್ದರೆ ಆಸ್ಪತ್ರೆ ನಡೆಸಲು ಕೊಟ್ಟಿರುವ ಲೈಸೆನ್ಸ್ ರದ್ದು ಮಾಡೊದಾಗಿ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಜಯನಗರದ ಅಪೊಲೊ ಆಸ್ಪತ್ರೆ ಮತ್ತು ವಿಕ್ರಂ ಆಸ್ಪತ್ರೆಗೆ ಡಿಎಚ್ಒ ಚುರುಕು ಮುಟ್ಟಿಸಿದ್ದರು. ಆ ಬಳಿಕ ಹಾಸಿಗೆ ಸೌಲಭ್ಯ ಕೊಟ್ಟಿದ್ದರು.

ಕೋವಿಡ್‌ ಮೇಲೆ ಐಎಎಸ್‌ ಅಧಿಕಾರಿಗಳ ಕಣ್ಗಾವಲು..!

ಖಾಸಗಿ ಆಸ್ಪತ್ರೆಗಳ ಮೇಲೆ ಐಎಎಸ್ ಅಧಿಕಾರಿಗಳ ಕಣ್ಗಾವಲು ಇಡಲು ಮುಂದಾಗಿದ್ದು, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು ಹಿರಿಯ ಐಎಎಸ್ ಅಧಿಕಾರಿಗಳ ಟೀಂ ರಚನೆ ಮಾಡಲಾಗಿದೆ. ಬೆಂಗಳೂರಿನ ‌31 ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು 7 ಜನರ ಹಿರಿಯ ಐಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ರಚನೆ ಆಗಿದೆ. ಹಿರಿಯ ಐಎಎಸ್ ಅಧಿಕಾರಿಗಳ ತಂಡ ರಚಿಸಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಆದೇಶ ಮಾಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳಾದ ಉಮಾ ಮಹದೇವನ್, ಮೊಹಮದ್ ಮೊಹ್ಸೀನ್, ಏಕರೂಪ್ ಕೌರ್, ಮಹೇಶ್ವರ ರಾವ್, ಕಪಿಲ್ ಮೋಹನ್, ಹರ್ಷಗುಪ್ತ ಮತ್ತು ಗೌರವ್ ಗುಪ್ತ ನೇತೃತ್ವದ 7 ತಂಡಗಳ ರಚನೆ ಆಗಿದೆ. ಪ್ರತೀ ಐಎಎಸ್ ಅಧಿಕಾರಿಗೆ ತಲಾ 4 ರಿಂದ 6 ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ಮಾಡಲಾಗಿದೆ. ಐಎಎಸ್ ಅಧಿಕಾರಿಗಳ ತಂಡದಲ್ಲಿ ಪ್ರತೀ ಆಸ್ಪತ್ರೆಗೂ ತಲಾ ಒಬ್ಬೊಬ್ಬ ಸ್ಥಳೀಯ ಬಿಬಿಎಂಪಿ ಅಥವಾ ಮತ್ತು‌ ಬೆಸ್ಕಾಂ ಅಧಿಕಾರಿಗಳು ಇರಲಿದ್ದಾರೆ. ತಲಾ ಒಬ್ಬೊಬ್ಬ ಆರೋಗ್ಯ ಮಿತ್ರ ಅಧಿಕಾರಿಗಳೂ ಇರಲಿದ್ದಾರೆ ಎನ್ನಲಾಗಿದೆ

ವಾರದ ಲಾಕ್‌ಡೌನ್‌ ಮುಂದುವರಿಯುತ್ತಾ..?

ಕಳೆದ 14 ರಿಂದ ಜುಲೈ 22ರ ಬೆಳಗ್ಗೆ 5 ಗಂಟೆ ತನಕ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಆದರೆ ಲಾಕ್‌ಡೌನ್‌ ಅವಧಿ ವಿಸ್ತರಣೆ ಆಗಬೇಕು ಎನ್ನುವ ಕೂಗು ಎದ್ದಿದೆ. ಆದರೆ ಲಾಕ್‌ಡೌನ್‌ ವಿಸ್ತರಣೆ ಮಾಡುವುದಿಲ್ಲ ಎಂದು ಈಗಾಗಲೇ ಸಿಎಂ ಬಿ.ಎಸ್‌ ಯಡಿಯೂರಪ್ಪ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಅದೇ ಮಾತನ್ನು ಪುನರುಚ್ಛಾರ ಮಾಡಿದ್ದು, ಬುಧವಾರದಿಂದ ಮತ್ತೆ ಲಾಕ್​​​ಡೌನ್ ಮುಂದುವರೆಸಲ್ಲ, ಈಗಾಗಲೇ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಲಾಕ್​​​ಡೌನ್ ಮುಂದುವರೆಯಲ್ಲ. ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳಿಗೆ ಅವಕಾಶ ಕೊಡಲಾಗಿದೆ. ಅನಗತ್ಯವಾಗಿ ಓಡಾಡುವವರ ವಾಹನ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್‌ ಪ್ರಸಾದ್‌ ಅಧಿಕಾರ ವಹಿಸಿಕೊಳ್ತಿದ್ದ ಹಾಗೆ ಅಧಿಕಾರಿಗಳು ಚುರುಕಾಗಿದ್ದಾರೆ. ಕೋವಿಡ್‌ 19 ಅಬ್ಬರದಿಂದ ನಗರದ ಜನರ ಹಾಗೂ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ಇನ್ನಾದ್ರೂ ನಿಯಂತ್ರಣಕ್ಕೆ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Previous Post

ಕರ್ನಾಟಕ: 60 ಸಾವಿರದ ಗಡಿ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ

Next Post

ರಾಮ.. ರಾಮ.. ಇನ್ನೆಷ್ಟು ದಿನ ಈ ಅವಮಾನ..?

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ರಾಮ.. ರಾಮ.. ಇನ್ನೆಷ್ಟು ದಿನ ಈ ಅವಮಾನ..?

ರಾಮ.. ರಾಮ.. ಇನ್ನೆಷ್ಟು ದಿನ ಈ ಅವಮಾನ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada