ಬೆಂಗಳೂರಿನ ಗುಂಡಿಗೆ ಮುಕ್ತಿ ಕೊಡೋಕೆ ಪಾಲಿಕೆ ಹೊಸ ಪ್ಲ್ಯಾನ್ ಹುಡುಕಿದೆ. ಪಾಟ್ ಹೋಲ್ ನಿಂದ ಹೋದ ಪಾಲಿಕೆ ಮಾನ, ಮತ್ತೆ ರೀ ಫಿಲ್ ಮಾಡೋಕೆ ಪಾಲಿಕೆ ಮೇಗ್ ಪ್ಲಾನ್ ಮಾಡಿ ಗುಂಡಿಗಂಡಾಂತರಕ್ಕೆ ಬ್ರೇಕ್ ಹಾಕಲು ಸಿದ್ಧವಾಗಿದೆ.
ಗುಂಡಿ ಮುಚ್ಚೋ ಬಗ್ಗೆ ಬಿಬಿಎಂಪಿ ಇಂಜಿನಿಯರ್ ಗಳಿಗೆ ಖಾಸಗಿ ಕಂಪೆನಿಗಳಿಂದ ಪಾಠ
ಬೆಂಗಳೂರಿಲ್ಲಿ ಕಳೆದ ಎರಡು ತಿಂಗಳಿಂದ ಸುರಿತ್ತಿರೋ ಮಹಾ ಮಳೆಗೆ ನಗರದ ರಸ್ತೆಗಳು ಸಂಪೂರ್ಣ ಗುಂಡಿ ಮಯವಾಗಿದ್ದು, ಜನರ ಜೀವಕ್ಕಾಗಿ ಕಾದು ಕುಳಿತಂದೆ. ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸೋಕೆ ಹೋಗಿ, ಮತ್ತೊಂದು ಗಾಡಿ ಗಾಲಿಗೆ ಬೀಳ್ತಿದ್ದಾರೆ. ಇತ್ತ ಸಾರ್ವಜನಿಕರು ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ ಹಿಡಿಹಿಡಿ ಶಾಪ ಹಾಕ್ತಿದ್ರು ಇಷ್ಟು ದಿನ ಪ್ರಯೋಜನಕ್ಕೆ ಬರಲಿಲ್ಲ. ಒಂದ್ಕಡೆ ಇಂದಿನಂದ 10 ದಿನಗಳಲ್ಲಿ ಸಿಟಿಯ ರಸ್ತೆ ಗುಂಡಿ ಮುಚ್ಚುತ್ತೆವೆ ಅಂತ ಕಮಿಷನರ್ ಕ್ರಮಕ್ಕೆ ಮುಂದಾದ್ರೆ. ಮತ್ತೊಂದು ಕಡೆಯಿಂದ ಪಾಲಿಕೆ ತನ್ನ ಬುದ್ಧಿವಂತ ಇಂಜಿನಿಯರ್ ಗಳಿಗೆ ಟ್ಯೂಷನ್ ಕೊಡೋದಕ್ಕೆ ಮಾಸ್ಟರ್ ಗಳನ್ನೂ ನೇಮಕ ಮಾಡ್ತಿದೆ.
ಲಕ್ಷ ಲಕ್ಷ ಸಂಬಳ ಪಡೆಯೋ ಬಿಬಿಎಂಪಿ ಇಂಜಿನಿಯರ್ಸ್ ಗೆ ಬೆಂಗಳೂರಿನ ರಸ್ತೆ ಗುಂಡಿ ಹೇಗೆ ಮುಚ್ಚೋದು ಗೋತ್ತಿಲ್ವಂತೆ. ಕಳೆದ ಒಂದು ತಿಂಗಳಿಂದ ನಗರದಲ್ಲಿ ಸುರಿಯುತ್ತಿರೋ ರಣ ಮಳೆಗೆ ಇಡೀ ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಇತ್ತ ಬಿಬಿಎಂಪಿ ಇಂಜಿನಿಯರ್ಸ್ ಗುಂಡಿ ಮುಚ್ಚುತ್ತಿವಿ ಅಂತ ಹೇಳಿದ್ದನ್ನೇ ಹೇಳ್ತಿದ್ರು. ಆದರೆ ಒಂದು ಗುಂಡಿನ್ನೂ ವೈಜ್ಞಾನಿಕವಾಗಿ ಮುಚ್ಚಿಲ್ಲ, ಮುಚ್ಚಿದ್ರು ಅದು ಒಂದು ವಾರವೂ ಬಾಳಿಕೆ ಬರಲ್ಲ. ಮುಚ್ಚಿರೋ ಗುಂಡಿಗಳು ಕಳಪೆ ಕಾಮಗಾರಿಯಿಂದ ಕಿತ್ತು ಬರ್ತಿವೇ. ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ವಿರೋಧ ಬರುತ್ತಿರುವ ಹಿನ್ನೆಲೆ ಎಚ್ಚೆತ್ತ ಪಾಲಿಕೆ ಚೀಪ್ ಇಂಜಿನಿಯರ್ ಗುಂಡಿ ಮುಚ್ಚೋಕ್ಕೆ ಅಂತ ಬಿಬಿಎಂಪಿಯ ಹಿರಿಯ, ಕಿರಿಯ ಹಾಗೂ ಸಹಾಯಕ ಇಂಜಿನಿಯರ್ ಗಳಿಗೆ ಟ್ಯಾಷನ್ ಮಾಡಿಸೋದಕ್ಕೆ ಮುಂದಾಗಿದ್ದಾರೆ.
ಪಾಲಿಕೆಯಲ್ಲಿ ಲಕ್ಷ ಲಕ್ಷ ಎಣಿಸುವ ಇಂಜಿನಿಯರ್ಸ್ ಗಳು ಇಷ್ಟು ದಿನ ಗುಂಡಿ ಮುಚ್ಚುತ್ತಿದ್ದಿವಿ ಅಂತ ಜನರಿಗೆ ಪಂಗ್ನಾಮ ಹಾಕಿದ್ರಾ ಹಾಗಾದ್ರೆ ಎನ್ನುವ ಅನುಮಾನ ಸದ್ಯದ್ದು. ಗುಂಡಿ ಮುಚ್ಚೋಕೆ ಗೊತ್ತಿಲ್ಲದೆ ಪಾಲಿಕೆಯಲ್ಲಿ ಹೊತ್ತು ಕಳೆದ್ರಾ? ಗುಂಡಿ ಮುಚ್ಚೊದು ಹೇಗೆ ಅನ್ನೊದ್ರ ಬಗ್ಗೆ ಟ್ರೈನಿಂಗ್ ಅಂದ್ರೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ. ಬಿಬಿಎಂಪಿ ಗುಂಡಿ ಮುಚ್ಚೋದಕ್ಕೆ ಖಾಸಗಿ ಕಂಪನಿ ಮೊರೆ ಹೋಗಿರುವ ಪಾಲಿಕೆ ಇಂಜಿನಿಯರ್ಸ್ ಗೆ ಫೀಕ್ಸ್ ಮೈ ಸ್ಟ್ರೀಟ್ ಇಂಜಿನಿಯರ್ ಗಳಿಂದ ಟ್ರೈನಿಂಗ್ ನೀಡೋದಕ್ಕೆ ಮುಂದಾಗಿದೆ. ರಸ್ತೆ ಗುಂಡಿಗಳನ್ನು ಹೇಗೆ ಮುಚ್ಚಬೇಕು.? ಎಷ್ಟು ದಿನ ಬಾಳಿಕೆ ಬರುತ್ತೆ. ಗುಂಡಿ ಮುಚ್ಚಬೇಕಾದಾಗ ಯಾವ ರೀತಿಯಲ್ಲಿ ಮಿಶ್ರಣ ಉಪಯೋಗಿಸ ಬೇಕು. ಹಾಗೂ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೊದ್ರ ಬಗ್ಗೆ ಖಾಸಗಿ ಇಂಜಿನಿಯರ್ಸ್ ಗಳಿಂದ ಪಾಲಿಕೆ ಇಂಜಿನಿಯರ್ ಗೆ ಟ್ಯೂಷನ್ ಸಿಗಲಿದೆ.
ಒಟ್ಟಾರೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅವೈಜ್ಞಾನಿಕವಾದ ಕಾಮುಗಾರಿ ಜೊತೆ ಎಂಜಿನಿಯರ್‌ಗಳ ನಿರ್ಲಕ್ಷ್ಯವೂ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಪಾಲಿಕೆ ಪ್ರಧಾನ ಎಂಜಿನಿಯರ್ ನೇತೃತ್ವದಲ್ಲಿ ಖಾಸಗಿ ಕಂಪನಿಯಿಂದ ತರಬೇತಿ ನೀಡಿದ, ನಂತರದ ದಿನಗಳಲ್ಲಿ ಗುಂಡಿ ಮುಕ್ತ ರಸ್ತೆ ಮಾಡ್ತಾರೋ ಅನ್ನೋದೆ ಎಲ್ಲರ ಪ್ರಶ್ನೆಯಾಗಿದೆ.