ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (BBMP), ದೇಶದ ಬೃಹತ್ ಪಾಲಿಕೆಗಳಲ್ಲಿ ಒಂದು. ನಗರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಪಾಲಿಕೆ ಆದ್ರೆ, ರಾಜಧಾನಿಯ ಉಸ್ತುವಾರಿ ನಿರ್ವಹಿಸಬೇಕಿದ್ದ ಬಿಬಿಎಂಪಿಗೆ ಕಳೆದ ನಾಲ್ಕು ವರ್ಷಗಳಿಂದ ಎಲೆಕ್ಷನ್ (Election) ಇಲ್ಲದೆ ಗ್ರಹಣ ಕವಿದಿದೆ. ಇಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳದ್ದೆ ದರ್ಬಾರ್ ಇದೆ. ಆದ್ರೆ, ಕಾಂಗ್ರೆಸ್ ಸರ್ಕಾರ (Congress) ಅಧಿಕಾರಕ್ಕೆ ಬಂದು ವರ್ಷದ ಬಳಿಕ ಬಿಬಿಎಂಪಿಗೆ ಕವಿದ ಗ್ರಹಣ ಮೋಕ್ಷಕ್ಕಾಗಿ ಎಲೆಕ್ಷನ್ ಸಿದ್ಧತೆ ಶುರು ಮಾಡಿದೆ.
2020 ಸೆಪ್ಟೆಂಬರ್‌ನಲ್ಲೇ ಬಿಬಿಎಂಪಿ ಸದಸ್ಯರುಗಳ ಅವಧಿ ಅಂತ್ಯ ಆಗಿದೆ. ಇನ್ನೊಂದು ವರ್ಷ ಕಳೆದ್ರೆ ಎಲೆಕ್ಷನ್ ಅವಧಿಯೇ ಕಳೆದಂತೆ. ಸದ್ಯ ಎಲೆಕ್ಷನ್‌ಗೆ ಒಲವು ತೋರಿಸಿದ ರಾಜ್ಯ ಸರ್ಕಾರ, ಪೂರ್ವ ಸಿದ್ಧತೆ ಶುರು ಮಾಡಿದೆ. ಲೋಕಸಭಾ ಫಲಿತಾಂಶದ ಬೆನ್ನಿಗೆ ಹೈವೋಲ್ವೇಜ್ ಮೀಟಿಂಗ್ (Highvoltage meeting) ಅರೆಂಜ್ ಆಗಿದೆ. ಡಿಕೆಶಿ (dk) ನೇತೃತ್ವದಲ್ಲಿ ಬೆಂಗಳೂರು ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದ್ದು, ಬಹುತೇಕ ದಸರಾ ವೇಳೆಗೆ ಎಲೆಕ್ಷನ್ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಯಾವತ್ತೋ ನಡೀಬೇಕಿದ್ದ ಎಲೆಕ್ಷನ್‌ಗೆ ವಾರ್ಡ್‌ಗಳ ಮರು ವಿಂಗಡಣೆ, ಮೀಸಲಾತಿ, ಕೋರ್ಟ್ ವ್ಯಾಜ್ಯಗಳು, ವಿಧಾನಸಭೆ, ಲೋಕಸಭೆ ಎಲೆಕ್ಷನ್ ಕಾರಣಕ್ಕೆ ಬಿಬಿಎಂಪಿ ಎಲೆಕ್ಷನ್‌ನನ್ನ ಬಹುತೇಕರು ಮರೆತೇ ಬಿಟ್ಟಿದ್ದಾರೆ.. ಅಂದ್ದಾಗ ಈಗ ಡಿಸಿಎಂ ಡಿಕೆಶಿಗೆ ಬೆಂಗಳೂರಿನ ಕಾಂಗ್ರೆಸ್ ಸಚಿವರು (Ministers), ಶಾಸಕರು (MLA) ಈ ಬಿಬಿಎಂಪಿ ಎಲೆಕ್ಷನ್‌ಗಾಗಿ ದುಂಬಾಲು ಬಿದ್ದಿದ್ದಾರೆ.. ಸರ್ಕಾರ ಸಹ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಪ್ಲಾನ್ ಮಾಡ್ತಿದೆ..
ಒಟ್ಟಾರೆ, ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ ನಾಲ್ಕು ವರ್ಷ ಕಳೆದಿದೆ. ಪ್ರತಿ ಮಳೆಗಾಲ, ಬೇಸಿಗೆಯಲ್ಲೂ ತತ್ತರಿಸ್ತಿರುವ ಸಿಲಿಕಾನ್ ಸಿಟಿ (Silicon city) ಬ್ಯಾಂಡ್‌ಗೆ ಧಕ್ಕೆ ಆಗ್ತಿದೆ.. ಸಾಕಷ್ಟು ಅಭಿವೃದ್ಧಿ ಪರ, ಜನಪರ ಯೋಜನೆಗಳು ಪಾತಾಳ ಸೇರಿವೆ.. ಹೀಗಾಗಿ ಬಿಬಿಎಂಪಿ ಎಲೆಕ್ಷನ್ ಅತ್ಯವಶ್ಯ ಅಷ್ಟೇ ಅಲ್ಲ ಅನಿವಾರ್ಯವೂ ಆಗಿದೆ.