• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸೋಂಕಿನ ತೀವ್ರತೆ ಮತ್ತು ಪ್ರತೀಕಾಯದ ಮಟ್ಟವನ್ನು ತಿಳಿಯಲು ಸೆರೋಸರ್ವೇ ಆರಂಭಿಸಿದ ಬಿಬಿಎಂಪಿ

ಪ್ರತಿಧ್ವನಿ by ಪ್ರತಿಧ್ವನಿ
August 5, 2021
in ಕರ್ನಾಟಕ
0
ಸೋಂಕಿನ ತೀವ್ರತೆ ಮತ್ತು ಪ್ರತೀಕಾಯದ ಮಟ್ಟವನ್ನು ತಿಳಿಯಲು ಸೆರೋಸರ್ವೇ ಆರಂಭಿಸಿದ ಬಿಬಿಎಂಪಿ
Share on WhatsAppShare on FacebookShare on Telegram
ಬಿಬಿಎಂಪಿ ಬುಧವಾರ ಎಲ್ಲಾ ವಲಯಗಳಲ್ಲಿನ ವ್ಯಕ್ತಿಗಳಲ್ಲಿ ಸೋಂಕಿನ ಪ್ರತಿರೋಧದ ಮಾದರಿ, ಅದರ ತೀವ್ರತೆ ಮತ್ತು ಪ್ರತಿಕಾಯ ಮಟ್ಟವನ್ನು ತಿಳಿಯಲು ಸೆರೋಸರ್ವೇ ಆರಂಭಿಸಿದೆ.

ಸೂಕ್ಷ್ಮ ಮಟ್ಟದಲ್ಲಿ ಅಧಿಕಾರಿಗಳು ಮತ್ತು ತಜ್ಙರು ಸೋಂಕನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯು ಸಹಾಯ ಮಾಡುತ್ತದೆ. ಎಲ್ಲಾ ವಾರ್ಡ್ ಮತ್ತು ವಲಯಗಳಲ್ಲಿನ ವ್ಯಕ್ತಿಗಳಲ್ಲಿನ ಪ್ರತಿಕಾಯ ಮಟ್ಟವನ್ನು ನಿರ್ಧರಿಸಲು ಅಧಿಕಾರಿಗಳು ಸೂಕ್ಷ್ಮ ಮಟ್ಟದಲ್ಲಿ ಸರ್ವೇ ನಡೆಸುತ್ತಾರೆ ಈ ಹಿಂದೆ ಸೆರೋಸರ್ವೇಯನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗಿತ್ತು ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾದ ಡಿ. ರಂದೀಪ್ ಹೇಳಿದ್ದಾರೆ.

ADVERTISEMENT

ಆಯ್ಕೆ ಮಾಡಲಾಗಿರುವ ಮಾದರಿಗಳ ಗುಂಪುಗಳು ವಿವಿಧ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ 50% ಜನರು 18ವರ್ಷಕ್ಕಿಂತ ಮೇಲ್ಪಟ್ಟವರು, 30%ಜನರು 18 ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ, 20%ಜನರು 45 ವರ್ಷಗಳು ಮೇಲ್ಪಟ್ಟಿರುತ್ತಾರೆ. ಈ ವೈವಿಧ್ಯಮಯ ಜನರ ಗುಂಪು ಕಡಿಮೆ ಮತ್ತು ಹೆಚ್ಚಿನ ಆದಾಯದ ಗುಂಪುಗಳ ಮಿಶ್ರಣವಾಗುವುದನ್ನು ಖಾತ್ರಿಪಡ್ಡಿಸಿದ್ದೇವೆ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವಲಯದಲ್ಲಿರುವ ಆಶಾ ಕಾರ್ಯಕರ್ತೆಯರು ಮತ್ತು ಲ್ಯಾಬ್ ತಂತ್ರಜ್ಙರು ಸಮೀಕ್ಷೆಯಲ್ಲಿ ಭಾಗವಹಿಸುವವರನ್ನು ಗುರುತಿಸುತ್ತಾರೆ ಲಸಿಕೆ ಪಡೆದಿರುವ 1000 ಜನರ ಮತ್ತು ಲಸಿಕೆ ಪಡೆಯದ 1000 ಜನರ ರಕ್ತ ಮತ್ತು ಸ್ವ್ಯಾಬ್ ಮಾದರಿಗಳನ್ನು ಮನೆ ಮನೆ ಸಮೀಕ್ಷೆ ನಡೆಸಿ ಅವರಲ್ಲಿ ಇರುವ ಪ್ರತೀಕಾಯ ಪ್ರಮಾಣವನ್ನು ನಿರ್ಧರಿಸಲು ಸಂಗ್ರಹಿಸಲಾಗುತ್ತದೆ. ಪ್ರಯೋಗಾಲಯದ ಸ್ವ್ಯಾಬ್ ಮಾದರಿಗಳನ್ನು ಆರ್ ಟಿ ಪಿಸಿ ಆರ್ ಗಾಗಿ ಪರೀಕ್ಷಿಸಲಾಗುವುದು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಂಕ್ರಾಮಿಕ ರೋಗ ತಜ್ಙರು ಮತ್ತು ವಲಯ ಆರೋಗ್ಯ ಅಧಿಕಾರಿಗಳ ಸಮನ್ವಯದಲ್ಲಿ ಈ ಸಮೀಕ್ಷೆ ಪ್ರಕ್ರಿಯೆ ನಡೆಯಲಿದೆ.

ಬಿಬಿಎಂಪಿ ಪಶ್ಚಿಮ ವಲಯವು 534 ಜನ ಸ್ವಯಂಸೇವಕರನ್ನು ಹೊಂದಿದ್ದು ಮಹದೇವಪುರ ವಲಯವು 56 ಜನ ಸ್ವಯಂಸೇವಕರನ್ನು ಹೊಂದಿದೆ, ಒಂದು ವಾರದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ನಿರೀಕ್ಷಿಸುತ್ತಿದೆ ಮತ್ತು ಸಂಶೋಧನೆಗಳಿಗೆ ಹೆಚ್ಚಿನ ಹಾಜರಾತಿ ಅಗ್ಯತವಿರುವ ಪ್ರದೇಶಗಳಲ್ಲಿ ಬೆಳಕು ಚೆಲ್ಲುತ್ತದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

ನಾವು ದುರ್ಬಲ ಗುಂಪುಗಳು ಮತ್ತು ಹೆಚ್ಚಿನ ಮೇಲ್ಚಿಚಾರಣೆಯ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಲು ಮತ್ತು ಅನುಷ್ಠಾನಗೊಳ್ಳುವ ಲಸಿಕೆ ತಂತ್ರವನ್ನು ನಿರ್ಧರಿಸಲು ನಮಗೆ ಇದು ಸಹಾಯ ಮಾಡುತ್ತದೆ ಎಂದು ರಂದೀಪ್ ತಿಳಿಸಿದ್ದಾರೆ .

Tags: AntiBodyBangaloreBBMPCovid 19ಕರೋನಾಕೋವಿಡ್-19
Previous Post

ಗದಗಿನ ಸಹ್ಯಾದ್ರಿ ಕಪ್ಪತ್ತಗುಡ್ಡ: ಮೈನಿಂಗ್ ಮಾಫಿಯಾ ಒತ್ತಡಕ್ಕೆ ರೈತರ ಒಕ್ಕಲೆಬ್ಬಿಸುವಿಕೆ

Next Post

2022 ಉ.ಪ್ರ ಚುನಾವಣೆಗೆ ಎಸ್‌ಪಿ ಸಜ್ಜು; ಬಿಜೆಪಿ ಸೋಲಿಸಲು ಲಾಲು ಭೇಟಿಯಾದ ಮುಲಾಯಂ ಸಿಂಗ್

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

March 4, 2026
Next Post
2022 ಉ.ಪ್ರ ಚುನಾವಣೆಗೆ ಎಸ್‌ಪಿ ಸಜ್ಜು; ಬಿಜೆಪಿ ಸೋಲಿಸಲು ಲಾಲು ಭೇಟಿಯಾದ ಮುಲಾಯಂ ಸಿಂಗ್

2022 ಉ.ಪ್ರ ಚುನಾವಣೆಗೆ ಎಸ್‌ಪಿ ಸಜ್ಜು; ಬಿಜೆಪಿ ಸೋಲಿಸಲು ಲಾಲು ಭೇಟಿಯಾದ ಮುಲಾಯಂ ಸಿಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada