ಈ ಬಾರಿಯ ಗಣೇಶೋತ್ಸವ ಆಚರಣೆ ಹೇಗೆ..? ಯಾರಿಂದ ಅನುಮತಿ ಪಡೆಯಬೇಕು ಎಂಬಿತ್ಯಾದಿ ಗೊಂದಲಗಳು ವಿನಾಯಕನ ಭಕ್ತರಲ್ಲಿತ್ತು. ಅದೆಲ್ಲದಕ್ಕೂ ತೆರೆ ಎಳೆದಿರುವ ಪಾಲಿಕೆ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿ ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸುವಂತ ಸೂಚಿಸಿದೆ. ಸರ್ಕಾರ ಕೂಡ ಏಕಗವಾಕ್ಷಿ ಮೂಲಕವೇ ಅನುಮತಿ ನೀಡಲು ಆದೇಶ ನೀಡಿತ್ತು. ಹೀಗಾಗಿ ಬಿಬಿಎಂಪಿಯಿಂದ ತನ್ನ ವ್ಯಾಪ್ತಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ಓಪನ್ ಮಾಡಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುವವರು ಈ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸಿ ಮೂರು ದಿನಗಳ ಒಳಗಾಗಿ ಅರ್ಜಿ ವಿಲೇವಾರಿ ಮಾಡಿ ಬಿಬಿಎಂಪಿ ಅನುಮತಿ ನೀಡಲಿದೆ. ಒಟ್ಟು ನಗರದ 63 ಕಡೆಗಳಲ್ಲಿ ಏಕಗವಾಕ್ಷಿ ಸಮಿತಿ ರಚಿಸಿದ ಬಿಬಿಎಂಪಿಯ ಈ ಸಮಿತಿಯಲ್ಲಿ ಬಿಬಿಎಂಪಿ ಸೇರಿದಂತೆ ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳು ಇರಲಿದ್ದಾರೆ.
ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದಲೂ ಗೈಡ್ ಲೈನ್ಸ್ ಬಿಡುಗಡೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕೃತ ಗಣೇಶೋತ್ಸವ ಹೇಗೆ ಆಚರಿಸಬೇಕು ಹಾಗೂ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದಾರೆ.
– ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು
– ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಈ ಬಾರಿಯೂ ಬ್ಯಾನ್
– ನಿಷೇಧಿತ ಗಣೇಶನ ಮೂರ್ತಿ ಬಳಸಿದರೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ
– ಗಣೇಶಮೂರ್ತಿ ತಯಾರಿಸುವವರು ಪರಿಸರ ಸ್ನೇಹಿ ಮೂರ್ತಿಯನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು

– ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಲು ವ್ಯವಸ್ಥೆ ಮಾಡುವುದು
– ಬಕೆಟ್, ಡ್ರಮ್ ಮುಂತಾದವುಗಳಿಗೆ ವಿಸರ್ಜಿಸುವುದು
– ದೊಡ್ಡ ಗಾತ್ರದ ಗಣೇಶನ ಮೂರ್ತಿ ವಿಸರ್ಜನೆಯನ್ನು ಪಾಲಿಕೆ ಗುರುತಿಸುವ ಜಾಗದಲ್ಲೇ/ಕಲ್ಯಾಣಿಯಲ್ಲೇ ಮಾಡುವುದು ಕಡ್ಡಾಯ
– ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ, ಕೆರೆಗಳಲ್ಲಿ ಬಿಬಿಎಂಪಿ ವತಿಯಿಂದಲೇ ನುರಿತ ಈಜುಗಾರರು ಹಾಗೂ NDRF ತಂಡ ನೇಮಕ
– ಗಣೇಶೋತ್ಸವ ಸುಸೂತ್ರವಾಗಿ ನಡೆಯಲು ಬಿಬಿಎಂಪಿಯಿಂದಲೇ ವಾರ್ಡ್ ಗೆ ಒಬ್ಬರಂತೆ ನೋಡಲ್ ಅಧಿಕಾರಿಯ ನೇಮಕ
– ಗಣೇಶೋತ್ಸವ ಆಚರಣೆ ವೇಳೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ
ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಅನುಮತಿ ಕೇಂದ್ರಗಳು ಎಲ್ಲೆಲ್ಲಿವೆ..?

ಯಲಹಂಕ ವಲಯ :
– ಯಲಹಂಕ ಬಿಬಿಎಂಪಿ ಕಚೇರಿ
– ಕೊಡಿಗೆಹಳ್ಳಿ ಬಿಬಿಎಂಪಿ ಕಚೇರಿ
– ಯಲಹಂಕ ಉಪನಗರ ಕಚೇರಿ
– ಬ್ಯಾರಾಯನಪುರ ಕಚೇರಿ
– ವಿದ್ಯಾರಣ್ಯಪುರ ಕಚೇರಿ
ಮಹದೇವಪುರ ವಲಯ :
– ಹೊರಮಾವು ಕಚೇರಿ
– ಕೆಆರ್ ಪುರ ಕಚೇರಿ
– HAL ಏರ್ಪೋರ್ಟ್ ವಾರ್ಡ್ ಕಚೇರಿ
– ಹೂಡಿ ಬಿಬಿಎಂಪಿ ವಾರ್ಡ್ ಕಚೇರಿ
– ವೈಟ್ ಫೀಲ್ಡ್ ವಾರ್ಡ್ ಕಚೇರಿ
– ಮಾರತಹಳ್ಳಿ ವಾರ್ಡ್ ಕಚೇರಿ

ದಾರಸಹಳ್ಳಿ ವಲಯ :
– ಶೆಟ್ಟಿಹಳ್ಳಿ ವಾರ್ಡ್ ಕಚೇರಿ
– ಟಿ ದಾಸರಹಳ್ಳಿ ವಾರ್ಡ್ ಕಚೇರಿ
– ಪೀಣ್ಯ ಕೈಗಾರಿಕಾ ಕೇಂದ್ರ ವಾರ್ಡ್ ಕಚೇರಿ
– ಹೆಗ್ಗನಹಳ್ಳಿ ವಾರ್ಡ್ ಕಚೇರಿ
ಆರ್ ಆರ್ ನಗರ ವಲಯ :
– ಆರ್ ಆರ್ ನಗರ ವಾರ್ಡ್ ಕಚೇರಿ
– ಲಗ್ಗೆರೆ ವಾರ್ಡ್ ಕಚೇರಿ
– ಗೊರಗುಂಟೆಪಾಳ್ಯ ವಾರ್ಡ್ ಕಚೇರಿ
– ಯಶವಂತಪುರ ವಾರ್ಡ್ ಕಚೇರಿ
– ಕೆಂಗೇರಿ ವಾರ್ಡ್ ಕಚೇರಿ
– ಹೇರೋಹಳ್ಳಿ ವಾರ್ಡ್ ಕಚೇರಿ

ಪಶ್ಚಿಮ ವಲಯ :
– ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕಚೇರಿ
– ನಾಗಪುರ ವಾರ್ಡ್ ಕಚೇರಿ
– ಮತ್ತಿಕೆರೆ ವಾರ್ಡ್ ಕಚೇರಿ
– ಮಲ್ಲೇಶ್ವರ ವಾರ್ಡ್ ಕಚೇರಿ
– ರಾಜಾಜಿನಗರ ವಾರ್ಡ್ ಕಚೇರಿ
– ಶ್ರೀರಾಮ ಮಂದಿರ ವಾರ್ಡ್ ಕಚೇರಿ
– ಗಾಂಧಿನಗರ ವಾರ್ಡ್ ಕಚೇರಿ
– ಕಾಟನ್ ಪೇಟೆ ವಾರ್ಡ್ ಕಚೇರಿ
– ಜೆಜೆಆರ್ ನಗರ ವಾರ್ಡ್ ಕಚೇರಿ
– ಚಾಮರಾಜಪೇಟೆ ವಾರ್ಡ್ ಕಚೇರಿ
– ಗೋವಿಂದರಾಜನಗರ ವಾರ್ಡ್ ಕಚೇರಿ
– ಚಂದ್ರಾಲೇಔಟ್ ವಾರ್ಡ್ ಕಚೇರಿ
ದಕ್ಷಿಣ ವಲಯ :
– ಕೆಂಪೇಗೌಡ ನಗರ ವಾರ್ಡ್ ಕಚೇರಿ
– ಹೊಂಬೇಗೌಡ ನಗರ ವಾರ್ಡ್ ಕಚೇರಿ
– ವಿಜಯನಗರ ವಾರ್ಡ್ ಕಚೇರಿ
– ಗಾಳಿಆಂಜನೇಯ ದೇವಸ್ಥಾನ ವಾರ್ಡ್ ಕಚೇರಿ
– ಬಸವನಗುಡಿ ವಾರ್ಡ್ ಕಚೇರಿ
– ಗಿರಿನಗರ ವಾರ್ಡ್ ಕಚೇರಿ
– ಪದ್ಮನಾಭನಗರ ವಾರ್ಡ್ ಕಚೇರಿ
– ಬನಶಂಕರಿ ವಾರ್ಡ್ ಕಚೇರಿ
– ಬಿಟಿಎಂ ಲೇಔಟ್ ವಾರ್ಡ್ ಕಚೇರಿ
– ಕೋರಮಂಗಲ ವಾರ್ಡ್ ಕಚೇರಿ
– ಜಯನಗರ ವಾರ್ಡ್ ಕಚೇರಿ
– ಜೆಪಿನಗರ ವಾರ್ಡ್ ಕಚೇರಿ
ಪೂರ್ವ ವಲಯ :
– ಹೆಬ್ಬಾಳ ವಾರ್ಡ್ ಕಚೇರಿ
– ಜೆಸಿ ನಗರ ವಾರ್ಡ್ ಕಚೇರಿ
– ಕೆಜೆ ಹಳ್ಳಿ ವಾರ್ಡ್ ಕಚೇರಿ
– ಪುಲಿಕೇಶಿ ನಗರ ವಾರ್ಡ್ ಕಚೇರಿ
– ಹೆಚ್ ಬಿಆರ್ ಲೇಔಟ್ ವಾರ್ಡ್ ಕಚೇರಿ
– ಮಾರುತಿ ಸೇವಾನಗರ ವಾರ್ಡ್ ಕಚೇರಿ
– ಜೀವನಭೀಮ ನಗರ ವಾರ್ಡ್ ಕಚೇರಿ
– ಶಿವಾಜಿನಗರ ವಾರ್ಡ್ ಕಚೇರಿ
– ದೊಮ್ಮಲೂರು ವಾರ್ಡ್ ಕಚೇರಿ
– ಶಾಂತಿ ನಗರ ವಾರ್ಡ್ ಕಚೇರಿ
– ಸಿವಿ ರಾಮನ್ ನಗರ ವಾರ್ಡ್ ಕಚೇರಿ
– ವಸಂತ ನಗರ ವಾರ್ಡ್ ಕಚೇರಿ
ಬೊಮ್ಮನಹಳ್ಳಿ ವಲಯ :
– ಅರೆಕೆರೆ ವಾರ್ಡ್ ಕಚೇರಿ
– ಹೆಚ್ ಎಸ್ ಆರ್ ವಾರ್ಡ್ ಕಚೇರಿ
– ಬೇಗೂರು ವಾರ್ಡ್ ಕಚೇರಿ
– ಅಂಜನಾಪುರ ವಾರ್ಡ್ ಕಚೇರಿ
– ಉತ್ತರ ಹಳ್ಳಿ ವಾರ್ಡ್ ಕಚೇರಿ
ಒಟ್ಟಾರೆ ಕೊರೋನಾ ಬಳಿಕ ಆಚರಿಸಲಾಗುತ್ತಿರುವ ಗಣೇಶೋತ್ಸವಕ್ಕೆ ಎಲ್ಲಾ ಕಡೆಗಳಿಂದಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅನುಮತಿ ಹಾಗೂ ಹೇಗೆ ಆಚರಣೆ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಈ ಮೂಲಕ ಪಾಲಿಕೆ ಅದಕ್ಕೂ ತೆರೆ ಎಳೆದಿದೆ.