ದಿನದಿಂದ ದಿನಕ್ಕೆ ಕೊರೋನಾ ಹಾಗೂ ಓಮೈಕ್ರಾನ್ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ಅಪಾರ್ಟ್‌ಮೆಂಟ್ ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈಗಾಗಲೇ ನಗರದ ಅಪಾರ್ಟ್‌ಮೆಂಟ್ ಗಳು ರಾಜಧಾನಿಯ ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಅಪಾರ್ಟ್‌ಮೆಂಟ್ ಗಳಲ್ಲೇ ಪತ್ತೆಯಾಗುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಇಂದ ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಅಪಾರ್ಟ್ಮೆಂಟ್ ಗಳಿಗೆ ಗೈಡ್ ಲೈನ್ಸ್
ನಗರದ ಎಲ್ಲಾ ಅಪಾರ್ಟ್‌ಮೆಂಟ್ ಗಳಲ್ಲಿ ಟೆಂಪ್ರೇಚರ್ ಚೆಕ್ ಮಾಡುವುದು ಕಡ್ಡಾಯ. ಅಪಾರ್ಟ್‌ಮೆಂಟ್ ಗಳ ಕಾಮನ್ ಏರಿಯಾ ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು. ಪಾರ್ಕ್ ಗಳಲ್ಲಿ ಓಡಾಡುವಾಗ CAB ಪಾಲನೆಮಾಡುವಂತೆ ಸೂಚನೆ ಪಾಲಿಕೆ ನೀಡಿದೆ. ಲಸಿಕಾಕರಣ, ಟೆಸ್ಟಿಂಗ್ ಹಾಗೂ ಪಾಲಿಕೆ ಕೊಡುವ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು. ಅಪಾರ್ಟ್‌ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು. ಅಪಾರ್ಟ್‌ಮೆಂಟ್ ನಲ್ಲಿರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ನಿಗಾವಹಿಸಬೇಕು.
ಕಾರ್ಯಕ್ರಮಗಳಿಗೆ 50 ಮಂದಿಗಷ್ಟೇ ಅವಕಾಶ
ಕರ್ನಾಟಕ | 3 ಕ್ಕಿಂತ ಹೆಚ್ಚು #COVID19 ಪ್ರಕರಣಗಳ ಸಂದರ್ಭದಲ್ಲಿ ಸಂಪೂರ್ಣ ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕನಿಷ್ಠ 7 ದಿನಗಳವರೆಗೆ 'ಕಂಟೋನ್ಮೆಂಟ್ ವಲಯ' ಎಂದು ಘೋಷಿಸಲಾಗುತ್ತದೆ; ಎಲ್ಲಾ ನಿವಾಸಿಗಳನ್ನು ಪರೀಕ್ಷಿಸಲಾಗುವುದು ಎಂದು BBMP ಆದೇಶ ಹೊರಡಿಸಿದೆ.@BBMPSplHealth @BBMPSWMSplComm@BSBommai #Covid19 #Corona #Omicron pic.twitter.com/hrImPPwzfT
— Pratidhvani (@PratidhvaniNews) January 13, 2022
ಇನ್ನು ಅಪಾರ್ಟ್‌ಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ ನೀಡಬೇಕು. ಮನೆಗಳಲ್ಲಿನ ತ್ಯಾಜ್ಯಗಳನ್ನು ಶಿಸ್ತು ಬದ್ಧವಾಗಿ ವಿಲೇವಾರಿ ಮಾಡಬೇಕು. ಲಿಫ್ಟ್ ಗಳಲ್ಲಿನ ಬಟ್ ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು. ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಟೆಸ್ಟಿಂಗ್ ನಡೆಸಬೇಕು. ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು. ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ಕಂಟೋನ್ಮೆಂಟ್ ಝೋನ್ ಘೋಷಿಸಬೇಕು.ಹತ್ತು ಅಥವಾ ಅದಕ್ಕೂ ಅಧಿಕ ಕೇಸ್ ಪತ್ತೆಯಾದರೆ ಇಡೀ ಅಪಾರ್ಟ್‌ಮೆಂಟ್ ಸೀಲ್ ಡೌನ್ ಮಾಡಲು ತಾಕೀತು ಮಾಡಲಾಗಿದೆ.
ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್ ನಡೆಸುವುದು ಕಡ್ಡಾಯವಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ ಅಥವಾ ಇತರೆ ವಿಸಿಟರ್ಸ್ ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಒಳಗೆ ಪ್ರವೇಶ ಕಲ್ಪಿಸಬೇಕು. ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.