• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮತ್ತೆ ಹೈಕೋರ್ಟನಿಂದ ಛೀಮಾರಿ ಹಾಕಿಸಿಕೊಂಡ BBMP : ಜೂನ್ 6ರ ಒಳಗಾಗಿ ರಸ್ತೆ ಗುಂಡಿ ಮುಚ್ಚಲು ಪಾಲಿಕೆ‌ ಶಪಥ!

Any Mind by Any Mind
June 2, 2022
in ಕರ್ನಾಟಕ
0
ಮತ್ತೆ ಹೈಕೋರ್ಟನಿಂದ ಛೀಮಾರಿ ಹಾಕಿಸಿಕೊಂಡ BBMP : ಜೂನ್ 6ರ ಒಳಗಾಗಿ ರಸ್ತೆ ಗುಂಡಿ ಮುಚ್ಚಲು ಪಾಲಿಕೆ‌ ಶಪಥ!
Share on WhatsAppShare on FacebookShare on Telegram

ಅದೆಷ್ಟು ಎಚ್ಚರಿಕೆಗಳು. ಅದೆಷ್ಟು ಡೆಡ್ ಲೈನ್ ಗಳು. ಅಷ್ಟಾದ್ರೂ ಬಿಬಿಎಂಪಿ ಆಡಳಿತ ಸುಧಾರಣೆ ಆಗಿದೆಯಾ ಅಂತ‌‌ ಕೇಳಿದರೂ ಖಂಡಿತಾ ಇಲ್ಲ.‌ ಅದರಲ್ಲೂ ರಸ್ತೆ ಗುಂಡಿಗಳ ವಿಚಾರದಲ್ಲಂತೂ ಅದೆಷ್ಟು ಡೆಡ್ ಲೈನ್ ಗಳನ್ನು ನೋಡಿ, ನೋಡಿ ಸಾಕಾಗಿದೆ. ಆದರೂ ಗುಂಡಿಗಳಿಂದ ಮುಕ್ತಿಸಿಕ್ಕಿಲ್ಲ. ಇದೆಲ್ಲದರ ನಡುವೆಯೇ ಹೈಕೋರ್ಟ  ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಇದೆ ತಿಂಗಳು 6ರ ಒಳಗೆ ನಗರದ ರಸ್ತೆಗಳ ಗುಂಡಿ ಮುಚ್ಚುತ್ತೇವೆ ಅಂತ ಡೆಡ್ ಲೈನ್ ಷೋಷಿಸಿದೆ.

ADVERTISEMENT

ಎಲ್ಲರಿಗೂ ಗೊತ್ತಿರುವಂತೆ ರಾಜಧಾನಿ ಬೆಂಗಳೂರಿಗೆ ಕಳಂಕ ತಂದೊಡ್ಡಿರುವುದರಲ್ಲಿ ಗುಂಡಿಗಳದ್ದು ಸಿಂಹಪಾಲು. ಗುಂಡಿಗಳನ್ನು ಸಂಪೂರ್ಣ ಮುಚ್ಚಿತ್ತಿವಿ ಅಂತ ಬಿಬಿಎಂಪಿ ಅಧಿಕಾರಿಗಳು ಬೆಳಿಗ್ಗೆಯಾದ್ರೆ ಸುಳ್ಳು ಹೇಳುತ್ತಾ ಕಾಲಕಾಳೆಯುತ್ತಾರೆ. ಬಿಬಿಎಂಪಿಯ ಈ ನಡೆಯಿಂದ ರೋಸಿಹೋಗಿದ್ದ ಜನರು ವರ್ಷಗಳ ಹಿಂದೆಯೇ ನ್ಯಾಯಾಲಯದ ಕದ ತಟ್ಟಿದ್ದರು. ಇದೀಗ ಹೈಕೋರ್ಟ್ ಅಯುಕ್ತರಿಗೆ ಛೀಮಾರಿ ಹಾಕಿ ಗುಂಡಿ ಮುಚ್ಚುತ್ತೀರಾ ಇಲ್ವಾ ಎಂದು ಖಡಕ್ ಆಗಿ ಕೇಳಿದೆ. ಹೈ ಕೋರ್ಟ್ ಕೆಂಡಾಮಂಡಲವಾಗಿದ್ದೇ ತಡ ಬಿಬಿಎಂಪಿ ಅಯುಕ್ತರು ಇಂದು ಬೆಳಿಗ್ಗೆನೇ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಇದೇ ತಿಂಗಳ 6ರ ಒಳಗೆ ಬೆಂಗಳೂರಿನ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುತ್ತಿವಿ ಅಂತ ಮತ್ತೆ ಭರವಸೆ ನೀಡಿದ್ರು.

ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಗುಂಡಿನಗರಿ ಎಂದೂ ಅಪಹಾಸ್ಯ ಮಾಡಿಕೊಂಡು ನಗುವುದುಂಟು. ಇದಕ್ಕೆ ನೇರ ಹಾಗೂ ನೈತಿಕ  ಹೊಣೆ ಬಿಬಿಎಂಪಿ ಎನ್ನುವುದರಲ್ಲಿ ಡೌಟೇ ಇಲ್ಲ. ರಸ್ತೆ ನಿರ್ಮಾಣ ಹಾಗು ನಿರ್ವಹಣೆಗಾಗಿ ವರ್ಷಕ್ಕೆ ಬಜೆಟ್ ನಲ್ಲಿ ಅದು ಕಾಯ್ದಿರಿಸುವ ಮೊತ್ತವೇ ಅದೆಷ್ಟೋ ಸಾವಿರ ಕೋಟಿ. ಆದರೆ ಅದರ ನಿರ್ವಹಣೆ ವಿಷಯದಲ್ಲಿನ ನಿರ್ಲಕ್ಷ್ಯವೇ  ರಸ್ತೆಗಳಲ್ಲಿ ಗುಂಡಿಗಳಗಲೂ ಕಾರಣವಾಗಿದೆ. ಬಿಬಿಎಂಪಿ ಅಧಿಕಾರಿಗಳು ಹೈ ಕೋರ್ಟ್ ಗೆ ಸುಳ್ಳು ಹೇಳಿ ಹಲವು ಬಾರಿ ನಗೆಪಾಟಲಿಗೆ ಈಡಾಗಿತ್ತು. ಈ‌ ವೇಳೆ ಪಾಲಿಕೆ ಚೀಫ್ ಇಂಜಿನಿಯರ್ ಕರೆಸಿ ಜೈಲಿಗೆ ಕಳಿಸ್ಲಾ ಅಂತ ತಪರಾಕಿ ಕೂಡ ಹಾಕಿತ್ತು. 

ಕಳೆದ ಒಂದು ತಿಂಗಳಿಂದ ನಗರದಲ್ಲಿ ಬಾರಿ ಮಳೆಯಿಂದ ರಸ್ತೆಗಳೆಲ್ಲ ಗುಂಡಿಗಳಗಿ ಪರಿವರ್ತನೆಗೊಂಡಿದ್ವು. ಇತ್ತ ಗುಂಡಿ ಅವಾಂತರಕ್ಕೆ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಇದರಿಂದ  ಕೆರಳಿ ಕೆಂಡವಾದ ಹೈಕೋರ್ಟ್ ನಿನ್ನೆ ಬಿಬಿಎಂಪಿಗೆ ಸಾಲನ್ನದ್ರು ಮಾಡಿ ಅಥವಾ ಬಿಕ್ಷೇನದ್ರು ಬೇಡಿ ಗುಂಡಿ ಮುಚ್ಚಿ, ಇಲ್ಲವಾದರೆ ಕರ್ತವ್ಯ ನಿರ್ಲಕ್ಷ ಅಂತ ನಿಮ್ಮನ್ನೂ ಜೈಲಿಗೆ ಕಳುಹಿಸ್ತಿವಿ ಅಂತ ವಾರ್ನಿಂಗ್ ಕೋಟ್ಟಿದೆ. ಇತ್ತ ಪಾಲಿಕೆ ಅಯುಕ್ತರು ಕಳೆದ ಒಂದು ವಾರದಿಂದ ಸುಮಾರು 5 ವರೆ ಸಾವಿರ ಗುಂಡಿ ಮುಚ್ಚಿದೆವೇ ಅಂತ ಹೇಳ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ  ಸುರಿದಿರಲಾರದಷ್ಟು ಮಳೆ ಈ ಬಾರಿ ಬೆಂಗಳೂರಿನಲ್ಲಾಗಿದೆ. ಈ ಕಾರಣಕ್ಕೆ ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಗಳೇ ರಸ್ತೆಗಳಾಗಿವೆಯೋ ಎನ್ನುವ ಶಂಕೆ ಮೂಡಿದೆ. ಇತ್ತ ಪಾಲಿಕೆ ಅಯುಕ್ತರು ಹೈಕೋರ್ಟ್ ನಿರ್ದೇಶನದಂತೆ ಗುಂಡಿ ಮುಚ್ಚಿಸಲು ಹರಸಹಾಸ ಬೀಳ್ತಿದೆ. ಇದುವರೆಗೂ ನಗರದಲ್ಲಿ 50 ಪರ್ಸೆಂಟ್ ಗುಂಡಿ ಮುಚ್ಚಿದಿವಿ, ಉಳಿದ ಗುಂಡಿಗಳನ್ನೂ ಜೂನ್ 6 ಒಳಗೆ ಮುಚ್ಚುತ್ತಿವಿ ಅಂತ ಹೇಳಿದೆ. ಫೈಥಾನ್ ಯಂತ್ರದ ಸಹಾಯದಿಂದ ಈಗಾಗ್ಲೇ ನಗರದ ಹಲವು ಭಾಗಗಳಲ್ಲಿ ಗುಂಡಿ ಮುಚ್ಚೋ ಕಾರ್ಯ ಪ್ರಗತಿಯಲ್ಲಿದೆ. ಮಳೆ ಬರ್ತಿರುವ ಹಿನ್ನೇಲೆಯಲ್ಲಿ ಸ್ವಲ್ಪ ತಡವಾಗ್ತಿದೆ ಅಂತ ಪಾಲಿಕೆ ಅಯುಕ್ತ ತುಷರ್ ಗಿರಿನಾಥ್ ತಿಳಿಸಿದರು.

ಒಟ್ನಲ್ಲಿ ಬೆಂಗಳೂರಿನ ಮಾನವನ್ನು ಹರಾಜು ಹಾಕುತ್ತಿರುವ ಗುಂಡಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿಗಳು , ಬಿಬಿಎಂಪಿಯ ಕಾರ್ಯವೈಖರಿ ನೋಡಿ ಬೆರಗಾಗಿದೆ.‌ ಯಾಕಂದ್ರೆ ಬಿಬಿಎಂಪಿ ಹಣೆಬರಹ ಏನನ್ನೋದು ಅದಾಗ್ಲೇ ಅವರಿಗೆ ತಿಳಿದಿದ್ದಾಗಿದೆ.

Tags: BJPCongress PartyCovid 19ಬಿಜೆಪಿ
Previous Post

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಭಜರಂಗ ದಳದ ಇಬ್ಬರು ಕಾರ್ಯಕರ್ತರು ಸಾವು

Next Post

ಫೇಸ್ಬುಕ್ & ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿದ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ : ಮೆಟಾ ವರದಿ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಫೇಸ್ಬುಕ್ & ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿದ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ : ಮೆಟಾ ವರದಿ

ಫೇಸ್ಬುಕ್ & ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿದ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ : ಮೆಟಾ ವರದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada