ಅದೆಷ್ಟು ಎಚ್ಚರಿಕೆಗಳು. ಅದೆಷ್ಟು ಡೆಡ್ ಲೈನ್ ಗಳು. ಅಷ್ಟಾದ್ರೂ ಬಿಬಿಎಂಪಿ ಆಡಳಿತ ಸುಧಾರಣೆ ಆಗಿದೆಯಾ ಅಂತ ಕೇಳಿದರೂ ಖಂಡಿತಾ ಇಲ್ಲ. ಅದರಲ್ಲೂ ರಸ್ತೆ ಗುಂಡಿಗಳ ವಿಚಾರದಲ್ಲಂತೂ ಅದೆಷ್ಟು ಡೆಡ್ ಲೈನ್ ಗಳನ್ನು ನೋಡಿ, ನೋಡಿ ಸಾಕಾಗಿದೆ. ಆದರೂ ಗುಂಡಿಗಳಿಂದ ಮುಕ್ತಿಸಿಕ್ಕಿಲ್ಲ. ಇದೆಲ್ಲದರ ನಡುವೆಯೇ ಹೈಕೋರ್ಟ ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಇದೆ ತಿಂಗಳು 6ರ ಒಳಗೆ ನಗರದ ರಸ್ತೆಗಳ ಗುಂಡಿ ಮುಚ್ಚುತ್ತೇವೆ ಅಂತ ಡೆಡ್ ಲೈನ್ ಷೋಷಿಸಿದೆ.
ಎಲ್ಲರಿಗೂ ಗೊತ್ತಿರುವಂತೆ ರಾಜಧಾನಿ ಬೆಂಗಳೂರಿಗೆ ಕಳಂಕ ತಂದೊಡ್ಡಿರುವುದರಲ್ಲಿ ಗುಂಡಿಗಳದ್ದು ಸಿಂಹಪಾಲು. ಗುಂಡಿಗಳನ್ನು ಸಂಪೂರ್ಣ ಮುಚ್ಚಿತ್ತಿವಿ ಅಂತ ಬಿಬಿಎಂಪಿ ಅಧಿಕಾರಿಗಳು ಬೆಳಿಗ್ಗೆಯಾದ್ರೆ ಸುಳ್ಳು ಹೇಳುತ್ತಾ ಕಾಲಕಾಳೆಯುತ್ತಾರೆ. ಬಿಬಿಎಂಪಿಯ ಈ ನಡೆಯಿಂದ ರೋಸಿಹೋಗಿದ್ದ ಜನರು ವರ್ಷಗಳ ಹಿಂದೆಯೇ ನ್ಯಾಯಾಲಯದ ಕದ ತಟ್ಟಿದ್ದರು. ಇದೀಗ ಹೈಕೋರ್ಟ್ ಅಯುಕ್ತರಿಗೆ ಛೀಮಾರಿ ಹಾಕಿ ಗುಂಡಿ ಮುಚ್ಚುತ್ತೀರಾ ಇಲ್ವಾ ಎಂದು ಖಡಕ್ ಆಗಿ ಕೇಳಿದೆ. ಹೈ ಕೋರ್ಟ್ ಕೆಂಡಾಮಂಡಲವಾಗಿದ್ದೇ ತಡ ಬಿಬಿಎಂಪಿ ಅಯುಕ್ತರು ಇಂದು ಬೆಳಿಗ್ಗೆನೇ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಇದೇ ತಿಂಗಳ 6ರ ಒಳಗೆ ಬೆಂಗಳೂರಿನ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುತ್ತಿವಿ ಅಂತ ಮತ್ತೆ ಭರವಸೆ ನೀಡಿದ್ರು.
ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಗುಂಡಿನಗರಿ ಎಂದೂ ಅಪಹಾಸ್ಯ ಮಾಡಿಕೊಂಡು ನಗುವುದುಂಟು. ಇದಕ್ಕೆ ನೇರ ಹಾಗೂ ನೈತಿಕ ಹೊಣೆ ಬಿಬಿಎಂಪಿ ಎನ್ನುವುದರಲ್ಲಿ ಡೌಟೇ ಇಲ್ಲ. ರಸ್ತೆ ನಿರ್ಮಾಣ ಹಾಗು ನಿರ್ವಹಣೆಗಾಗಿ ವರ್ಷಕ್ಕೆ ಬಜೆಟ್ ನಲ್ಲಿ ಅದು ಕಾಯ್ದಿರಿಸುವ ಮೊತ್ತವೇ ಅದೆಷ್ಟೋ ಸಾವಿರ ಕೋಟಿ. ಆದರೆ ಅದರ ನಿರ್ವಹಣೆ ವಿಷಯದಲ್ಲಿನ ನಿರ್ಲಕ್ಷ್ಯವೇ ರಸ್ತೆಗಳಲ್ಲಿ ಗುಂಡಿಗಳಗಲೂ ಕಾರಣವಾಗಿದೆ. ಬಿಬಿಎಂಪಿ ಅಧಿಕಾರಿಗಳು ಹೈ ಕೋರ್ಟ್ ಗೆ ಸುಳ್ಳು ಹೇಳಿ ಹಲವು ಬಾರಿ ನಗೆಪಾಟಲಿಗೆ ಈಡಾಗಿತ್ತು. ಈ ವೇಳೆ ಪಾಲಿಕೆ ಚೀಫ್ ಇಂಜಿನಿಯರ್ ಕರೆಸಿ ಜೈಲಿಗೆ ಕಳಿಸ್ಲಾ ಅಂತ ತಪರಾಕಿ ಕೂಡ ಹಾಕಿತ್ತು.
ಕಳೆದ ಒಂದು ತಿಂಗಳಿಂದ ನಗರದಲ್ಲಿ ಬಾರಿ ಮಳೆಯಿಂದ ರಸ್ತೆಗಳೆಲ್ಲ ಗುಂಡಿಗಳಗಿ ಪರಿವರ್ತನೆಗೊಂಡಿದ್ವು. ಇತ್ತ ಗುಂಡಿ ಅವಾಂತರಕ್ಕೆ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಇದರಿಂದ ಕೆರಳಿ ಕೆಂಡವಾದ ಹೈಕೋರ್ಟ್ ನಿನ್ನೆ ಬಿಬಿಎಂಪಿಗೆ ಸಾಲನ್ನದ್ರು ಮಾಡಿ ಅಥವಾ ಬಿಕ್ಷೇನದ್ರು ಬೇಡಿ ಗುಂಡಿ ಮುಚ್ಚಿ, ಇಲ್ಲವಾದರೆ ಕರ್ತವ್ಯ ನಿರ್ಲಕ್ಷ ಅಂತ ನಿಮ್ಮನ್ನೂ ಜೈಲಿಗೆ ಕಳುಹಿಸ್ತಿವಿ ಅಂತ ವಾರ್ನಿಂಗ್ ಕೋಟ್ಟಿದೆ. ಇತ್ತ ಪಾಲಿಕೆ ಅಯುಕ್ತರು ಕಳೆದ ಒಂದು ವಾರದಿಂದ ಸುಮಾರು 5 ವರೆ ಸಾವಿರ ಗುಂಡಿ ಮುಚ್ಚಿದೆವೇ ಅಂತ ಹೇಳ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸುರಿದಿರಲಾರದಷ್ಟು ಮಳೆ ಈ ಬಾರಿ ಬೆಂಗಳೂರಿನಲ್ಲಾಗಿದೆ. ಈ ಕಾರಣಕ್ಕೆ ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಗಳೇ ರಸ್ತೆಗಳಾಗಿವೆಯೋ ಎನ್ನುವ ಶಂಕೆ ಮೂಡಿದೆ. ಇತ್ತ ಪಾಲಿಕೆ ಅಯುಕ್ತರು ಹೈಕೋರ್ಟ್ ನಿರ್ದೇಶನದಂತೆ ಗುಂಡಿ ಮುಚ್ಚಿಸಲು ಹರಸಹಾಸ ಬೀಳ್ತಿದೆ. ಇದುವರೆಗೂ ನಗರದಲ್ಲಿ 50 ಪರ್ಸೆಂಟ್ ಗುಂಡಿ ಮುಚ್ಚಿದಿವಿ, ಉಳಿದ ಗುಂಡಿಗಳನ್ನೂ ಜೂನ್ 6 ಒಳಗೆ ಮುಚ್ಚುತ್ತಿವಿ ಅಂತ ಹೇಳಿದೆ. ಫೈಥಾನ್ ಯಂತ್ರದ ಸಹಾಯದಿಂದ ಈಗಾಗ್ಲೇ ನಗರದ ಹಲವು ಭಾಗಗಳಲ್ಲಿ ಗುಂಡಿ ಮುಚ್ಚೋ ಕಾರ್ಯ ಪ್ರಗತಿಯಲ್ಲಿದೆ. ಮಳೆ ಬರ್ತಿರುವ ಹಿನ್ನೇಲೆಯಲ್ಲಿ ಸ್ವಲ್ಪ ತಡವಾಗ್ತಿದೆ ಅಂತ ಪಾಲಿಕೆ ಅಯುಕ್ತ ತುಷರ್ ಗಿರಿನಾಥ್ ತಿಳಿಸಿದರು.
ಒಟ್ನಲ್ಲಿ ಬೆಂಗಳೂರಿನ ಮಾನವನ್ನು ಹರಾಜು ಹಾಕುತ್ತಿರುವ ಗುಂಡಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿಗಳು , ಬಿಬಿಎಂಪಿಯ ಕಾರ್ಯವೈಖರಿ ನೋಡಿ ಬೆರಗಾಗಿದೆ. ಯಾಕಂದ್ರೆ ಬಿಬಿಎಂಪಿ ಹಣೆಬರಹ ಏನನ್ನೋದು ಅದಾಗ್ಲೇ ಅವರಿಗೆ ತಿಳಿದಿದ್ದಾಗಿದೆ.