ಬಿಬಿಎಂಪಿ ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಗಳ ಸುರಿಮಳೆಯೇ ಹರಿದುಬಂದಿದ್ದು, ಬರೋಬ್ಬರಿ 2 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ನೂತನವಾಗಿ 243 ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರು ಮುಕ್ತವಾಗಿ ಆಕ್ಷೇಪಣೆ ಸಲ್ಲಿಸಲು ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ವೆಬ್ ಸೈಟ್ ನಲ್ಲಿ ಹಾಗೂ ವಿಧಾನಸೌದದ ಡಿಪಿಅರ್ ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗೆ 15 ದಿನಗಳ ಆಕ್ಷೇಪಣೆಗೆ ಕಾಲವಾಕಾಶ ನೀಡಲಾಗಿತ್ತು.
ಆದರೆ, ಕೇವಲ ನಾಲ್ಕೇ ದಿನಕ್ಕೆ 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿತ್ತು. ಅದರಲ್ಲೂ ಕಾಂಗ್ರೆಸ್, ಜೆಡಿಎಸ್, ಎಎಪಿ, ಎಸ್ ಡಿಪಿಐ. ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ, ಅರ್ಜಿದಾರರು, ವಾರ್ಡ್ ವಿಂಗಡಣೆ ಸರಿಯಿಲ್ಲ, ವಾರ್ಡ್ ವಿಂಗಡಣೆ ಹೆಸರಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗಿದೆ. ಕೆಲ ವಾರ್ಡ್ ಒಡೆದು ಬೇರೆ, ಬೇರೆ ವಾರ್ಡ ಗಳಿಗೆ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಪಕ್ಷ ಹೊರತುಪಡಿಸಿ ಅನ್ಯ ಪಕ್ಷಗಳ ವಾರ್ಡ್ ಗಳನ್ನೂ ಛಿದ್ರ ಮಾಡಿ ವಿಂಗಡಣೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ವಾರ್ಡ್ ವಿಂಗಡಣೆ ಹೆಸರಲ್ಲಿ ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿದೆ. ಒಂದೇ ರಸ್ತೆಯನ್ನೂ ಎರಡು ವಾರ್ಡಗಳಿಗೆ ಹಂಚಿಕೆ ಮಾಡಿದ್ದಾರೆ. ಲೇಔಟ್ ಗಳನ್ನೂ ಎರಡು ಭಾಗ ಮಾಡಿ ವಿಂಗಡಿಸಿದ್ದಾರೆ. ಅಲ್ಲದೆ ವಾರ್ಡ್ ಹೆಸರುಗಳನ್ನೂ ಬೇರೆ ಇಡಲಾಗಿದೆ. ಇತಿಹಾಸ ಇರುವ ಹೆಸರುಗಳನ್ನೂ ತೆಗೆದು ಹಾಕಿ ಒಂದು ಸಮುದಾಯಕ್ಕೆ ಸೇರಿದ ಹೆಸರಗಳನ್ನೂ ಇಡಲಾಗಿದೆ. ಈ ರೀತಿ ವಾರ್ಡ್ ವಿಂಗಡಣೆಯಿಂದ ಸಾರ್ವಜನಿಕರಿಗೆ ಅನ್ಯಾಯವಾಗಿದೆ. ಇದು ಆವೈಜ್ಞಾನಿಕವಾಗಿ ವಿಂಗಡಣೆ. ಈ ರೀತಿ ವಿಂಗಡಣೆಯಿಂದ ಮುಂದೆ ಖಾತಾ ಬದಲಾವಣೆಗೆ ಹಾಗೂ ತೆರಿಗೆ ಪಾವತಿಗೆ ತೊಂದರೆ ಆಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
![](https://pratidhvani.com/wp-content/uploads/2022/06/bengaluru-bbmp-draft-delimitation-map-bbmp-jun2022.jpg)