ವಿಧಾನಸೌಧದಲ್ಲಿ (Vidhana soudha) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda patil yatnal) ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ವಿಚಾರವಾಗಿ ಮಾತನಾಡಿದ್ದಾರೆ.ನಾಳೆ ಎರಡು ಹಂತದಲ್ಲಿ ಸಭೆ ನಡೆಯಲಿದೆ.ತಟಸ್ಥ ಬಣದ ಜೊತೆಗೂ ಸಭೆ ಮಾಡ್ತೇವೆ, ಪಕ್ಷ ಉಳಿಸುವ ಗುಂಪು ದೊಡ್ಡದಾಗುತ್ತಿದೆ. ರಾಜ್ಯಾಧ್ಯಕ್ಷರು ಯಾರು ಆಗಬೇಕು ಎಂದು ನಿರ್ಧಾರ ಇನ್ನೂ ಮಾಡಿಲ್ಲ ಎಂದಿದ್ದಾರೆ.
ನಾವೆಲ್ಲರೂ ಸೇರಿ ಒಮ್ಮತದಿಂದ ಒಬ್ಬರನ್ನು ಅಭ್ಯರ್ಥಿ ಮಾಡ್ತೇವೆ.ವಿಜಯೇಂದ್ರ (Vijayendra) ಬಗ್ಗೆ ಯಾರಿಗೂ ಸಮಾಧಾನ ಇಲ್ಲ.ಅವರ ಚೇಲಾಗಳಿಗೆ ಮಾತ್ರ ಸಮಾಧಾನ ಇರಬಹುದು ಬಿಟ್ರೆ ಎಲ್ಲರಿಗೂ ಅಸಮಾಧಾನ ಇದೆ ಎಂದು ಹೇಳಿದ್ದಾರೆ.
ಇನ್ನು ವಿಜಯೇಂದ್ರ ಆಲ್ ದ ಬೆಸ್ಟ್ ಹೇಳಿದ ವಿಚಾರಕ್ಕೆ ಸಂಬಂಧಪಟ್ಟಂತೆ, ಅವರ ದುಡ್ಡು ಅವರನ್ನ ಮಾತನಾಡಿಸ್ತಿದೆ. ಜಿಲ್ಲಾಧ್ಯಕ್ಷರ ನೇಮಕ ಅಸಮಾಧಾನ ವಿಚಾರವಾಗಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಅಸಮಾಧಾನಗಳು ಇವೆ.ನಿನ್ನೆ ಸುಧಾಕರ್ ಹೇಳಿದ್ದು ನೋಡಿದ್ರಲ್ಲ,ಕೆಲವರು ಕಾಂಗ್ರೆಸ್ ನಲ್ಲಿ ಸೀಟು ಫಿಕ್ಸ್ ಮಾಡಿಕೊಂಡಿರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.