ಅ.15ರಂದು ವಿಜಯಪುರದಲ್ಲಿ (Vijayapura) ವಕ್ಸ್ ಹಠಾವೋ ದೇಶ ಬಚಾವೋ ಎಂಬ ಪ್ರತಿಭಟನೆಗೆ ಯತ್ನಾಳ್ ಕರೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಮುಸ್ಲಿಂ (Muslim) ಮುಖಂಡರು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ ಸದ್ದು ಮಾಡುತ್ತಿದ್ದು, ಈಗ ಮತ್ತೊಬ್ಬ ರಾಜಕಾರಣಿಯ ಸಿಡಿ (CD politics) ಇರೋದಾಗಿ ಮುಸ್ಲಿಂ ಮುಖಂಡರೊಬ್ಬರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಶಾಸಕ ಬಸನ ಗೌಡ ಯತ್ನಾಳ್ (Basanagowda Patil yatnal) ಸಿಡಿ ತಮ್ಮ ಬಳಿಯಿದ್ದು, ಸುಖಾಸುಮ್ಮನೆ ಕಂಡ ಕಂಡವರ ಮೇಲೆ ಬೇಕಾಬಿಟ್ಟಿ ಆರೋಪಗಳನ್ನು ಮಾಡಿದರೆ ಸಿಡಿ ಬಿಡುಗಡೆ ಮಾಡುವುದಾಗಿ ವಿಜಯಪುರ ಮುಸ್ಲಿಂ ಮುಖಂಡರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ರವರೇ ನೀವು ನಿಮ್ಮ ರಾಜಕಾರಣ ಏನಿದ್ಯೋ ಅದನ್ನು ಮಾಡಿ. ಇಲ್ಲವಾದ್ರೆ ನವೆಂಬರ್ 6ನೇ ತಾರೀಖು ನಿಮ್ಮ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದಿದ್ದಾರೆ.