ಬಿಜೆಪಿ ರಾಜ್ಯಾಧ್ಯಕ್ಷ (Bjp state president) ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧ ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ್ (Basanagowda yatnal) ಹೇಳಿಕೆ ಕೊಟ್ಟಿದ್ದಾರೆ. ನಾನು ಸ್ಪರ್ಧೆ ಮಾಡುವುದು ಖಚಿತ..ನನ್ನ ಗೆಲುವು ನಿಶ್ಚಿತ.. ಠೇವಣಿ ಉಚಿತ… ಎಂದು ಯತ್ನಾಳ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು,ನಮ್ಮದೊಂದು ಕೋರ್ ಕಮಿಟಿ ಇದೆ.ಅಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವೇಳೆ ಕೋರ್ ಕಮೀಟಿಯಲ್ಲಿ ನನ್ನ ಹೆಸ್ರು ಅಂತಿಮವಾದ್ರೆ ಸ್ಪರ್ಧಿಸುವೆ ಎಂದು ಹೇಳಿದ್ದಾರೆ.
ಆ ಮೂಲಕ ಇಷ್ಟೂ ದಿನ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ನೇರ ನೇರಾ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅಂಡ್ ಟೀಮ್ ಈಗ ತಾವು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರೆಡಿ ಎಂದು ಹೇಳಿರುವುದು ಬಿಜೆಪಿಯಲ್ಲಿನ ಭಿನ್ನಮತ ಇನ್ನಷ್ಟು ಸ್ಫೋಟಿಸುವ ಸಾಧ್ಯತೆಯಿದೆ.