ಬೆಂಗಳೂರಿನಲ್ಲಿ ಇಂದಿನಿಂದ ಯಾವುದೇ ಬ್ಯಾನರ್ (banner) ಬಟ್ಟಿಂಗ್ ಹಾಕುವಂತಿಲ್ಲ ಎಂದು ಸರ್ಕಾರ (government) ಆದೇಶ ಮಾಡಿದೆ. ಬಿಬಿಎಂಪಿ ( BBMP ) ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್ ಬಟ್ಟಿಂಗ್ ಹಾಕಿದ್ರೆ ದಂಡ ( Fine ) ವಿಧಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ( DCM D.K. Shivakumar) ಘೋಷಣೆ ಮಾಡಿದ್ದರು. ಅದರಂತೆ ನಾಳೆಯಿಂದ ದಂಡ ವಿಧಿಸಲು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಅಧಿಕೃತ ಆದೇಶ ಮಾಡಿದ್ದಾರೆ. ನಾಳೆಯಿಂದ ಎಲ್ಲಿಯಾದರೂ ಪೋಸ್ಟರ್, ಬ್ಯಾನರ್, ಬಟ್ಟಿಂಗ್ಸ್ ಕಂಡು ಬಂದರೆ ದಂಡ ಹಾಕುವುದಕ್ಕೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲೂ ರಾಜಕಾರಣಿಗಳ ಹುಟ್ಟುಹಬ್ಬ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಬ್ಯಾನರ್ ಹಾಕಿದಾಗ ಏನು ಮಾಡುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಅನಧಿಕೃತ ಬ್ಯಾನರ್ ಬಟ್ಟಿಂಗ್ಸ್ಗೆ ಎಂದಿದೆ ಆದೇಶ..!
ಬೆಂಗಳೂರಿನಲ್ಲಿ ನಾಳೆಯಿಂದ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡುವಂತಿಲ್ಲ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ ಬಿಬಿಎಂಪಿ ಆಯುಕ್ತರು, ಒಂದು ವೇಳೆ ಅನಧಿಕೃತ ಬ್ಯಾನರ್, ಬಟ್ಟಿಂಗ್ಸ್, ಫ್ಲೆಕ್ಸ್ ಹಾಕಿದ್ರೆ 50 ಸಾವಿರ ದಂಡ ವಸೂಲಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 17 ರಿಂದ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿದ್ರೆ ಕ್ರಿಮಿನಲ್ ಕೇಸ್ ಜೊತೆಗೆ 50 ಸಾವಿರ ದಂಡ ವಸೂಲಿಗೆ ಸೂಚಿಸಲಾಗಿದೆ. ಆದರೆ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಟ್ಟಿಂಗ್ಸ್ಗೆ ಮಾತ್ರ. ಅಧಿಕೃತವಾಗಿ ಬ್ಯಾನರ್ ಬಟ್ಟಿಂಗ್ಸ್ ಹಾಕಿದ್ರೆ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ.
ಅಧಿಕೃತವಾಗಿ ಬ್ಯಾನರ್, ಬಟ್ಟಿಂಗ್ ಹಾಕುವುದು ಹೇಗೆ..?
ರಸ್ತೆಗಳ ನಡುವೆ ಬೇಕಾಬಿಟ್ಟಿ ಬ್ಯಾನರ್ ಬಟ್ಟಿಂಗ್ಸ್ ಹಾಕುವುದರಿಂದ ಬೆಂಗಳೂರು ನಗರದ ಸೌಂದರ್ಯ ಹಾಳಾಗುತ್ತದೆ. ಅಷ್ಟೆ ಅಲ್ಲದೆ ಬಿಬಿಎಂಪಿಗೆ ಬರಬೇಕಾದ ರಾಜಸ್ವ ಸಂಗ್ರಹಕ್ಕೂ ತಡೆಯಾಗುತ್ತದೆ. ಇದೇ ಕಾರಣಕ್ಕೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ನಿಷೇಧ ಮಾಡಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕೃತವಾಗಿ ಬ್ಯಾನರ್, ಬಟ್ಟಿಂಗ್ ಹಾಕುವುದಕ್ಕೆ ಬಿಬಿಎಂಪಿ ಬಳಿ ಅನುಮತಿ ಪಡೆಯಬೇಕು. ಬಿಬಿಎಂಪಿಗೆ ಅರ್ಜಿ ಹಾಕಿ, ಎಷ್ಟು ಬ್ಯಾನರ್, ಬಟ್ಟಿಂಗ್ಸ್ ಹಾಕ್ತೇವೆ ಎನ್ನುವ ಮಾಹಿತಿ ನೀಡಬೇಕು. ಆ ಮಾಹಿತಿ ಆಧಾರದ ಮೇಲೆ ಬಿಬಿಎಂಪಿ ತೆರಿಗೆ ವಿಧಿಸಲಿದೆ. ಈ ಮೂಲಕ ಬಿಬಿಎಂಪಿ ಆದಾಯ ದ್ವಿಗುಣ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದೆ
ಸರ್ಕಾರ ತೆಗೆದುಕೊಂಡಿರುವ ಕ್ರಮ ಎಷ್ಟು ಸರಿ..!?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಲೆಕ್ಕಾಚಾರ ಇಲ್ಲದೆ ಬೇಕಾಬಿಟ್ಟಿ ಬ್ಯಾನರ್ ಬಟ್ಟಿಂಗ್ಸ್ ಹಾಕಿದ್ದ ಕ್ರಮವನ್ನು ಹೈಕೋರ್ಟ್ ಕೂಟ ಖಂಡಿಸಿ, ಛೀಮಾರಿ ಹಾಕಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಟ್ಟು ನಿಟ್ಟಿನ ಜಾಹಿರಾತು ಕ್ರಮ ಜಾರಿ ಮಾಡಿದರೆ ಸರ್ಕಾರಕ್ಕೆ ಆದಾಯದ ಜೊತೆಗೆ ಬೇಕಾಬಿಟ್ಟಿ ಫ್ಲೆಕ್ಸ್ ಬ್ಯಾನರ್ ಹಾಕಿದ್ರೆ ದಂಡವೂ ಬೀಳಲಿದೆ. ಒಂದು ವೇಳೆ ಬಿಬಿಎಂಪಿಗೆ ಬ್ಯಾನರ್ ಹಾಕುವ ಬಗ್ಗೆ ಮನವಿ ಮಾಡಿದಾಗ ಒಂದು ವೇಳೆ ಬಿಬಿಎಂಪಿ ಅಧಿಕಾರಿಗಳು ತಿರಸ್ಕಾರ ಮಾಡಿದರೆ ಬೆಂಗಳೂರಿನಲ್ಲಿ ಬ್ಯಾನರ್ ಹಾಕುವುದಕ್ಕೆ ಅವಕಾಶವೇ ಇಲ್ಲ. ಆದರೆ ಬಿಬಿಎಂಪಿ ಎಷ್ಟು ಪರಿಣಾಮಕಾರಿ ಜಾರಿ ಮಾಡಲಿದೆ ಅನ್ನೋದ್ರ ಮೇಲೆ ಬೆಂಗಳೂರಿನ ಸೌಂದರ್ಯ ನಿಂತಿದೆ ಎನ್ನಬಹುದು.
ಕೃಷ್ಣಮಣಿ