ಬಾಂಗ್ಲಾದೇಶದ ಓರ್ವ ಯೂಟ್ಯೂಬರ್ ಬಾಂಗ್ಲಾದೇಶದವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವ ಮಾರ್ಗವನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ, ಬಾಂಗ್ಲಾದೇಶದ ಮತ್ತೋರ್ವ ಯೂಟ್ಯೂಬರ್ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ವಿಡಿಯೋ ಹಾಕಿ ಗಮನ ಸೆಳೆದಿದ್ದಾರೆ. ಅಕ್ರಮ ವಲಸಿಗರು ಬಾಂಗ್ಲಾದೇಶದಿಂದ ಮೇಘಾಲಯದ ಮೂಲಕ ಭಾರತವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
BIG SECURITY CONCERN 🚨
— Bloody Media (@bloody_media) August 1, 2024
Another Bangladeshi 🇧🇩 YouTuber posted a video demonstrating how to enter India illegally without a Visa or Passport, and he not only showed the method but also documented his own illegal entry!
Primarily, Bangladeshi nationals are entering India… pic.twitter.com/E3FY7KpOnL
3-4 ವರ್ಷದ ಹಿಂದಿನದ್ದು ಎಂದು ಹೇಳಲಾದ ವೀಡಿಯೊವನ್ನು ಈಗ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಲಾಗಿದ್ದರೂ, ಇದನ್ನು ಎಕ್ಸ್ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಈ ವೀಡಿಯೊದಲ್ಲಿ ಅವರು ಭಾರತಕ್ಕೆ ತೆರಳುವ ಮಾರ್ಗವನ್ನು ತೋರಿಸುವುದಲ್ಲದೆ, ಬಾಂಗ್ಲಾದೇಶದಿಂದ ಮೊದಲು ಸುರಂಗದ ಮೂಲಕ ಮೇಘಾಲಯವನ್ನು ಪ್ರವೇಶಿಸುವ ಬಗ್ಗೆ ವಿವರಿಸಿದ್ದು ಅಲ್ಲಿ ಸ್ಥಳೀಯರೊಂದಿಗೆ ಮಾತನಾಡಿದ್ದಾರೆ.
ಇಲ್ಲಿಯವರೆಗೆ ಈ ವೀಡಿಯೋ ಲಕ್ಷಗಟ್ಟಲೆ ವೀಕ್ಷಣೆ ಗಳಿಸಿದೆ.ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸುವ ಜನರ ವಿರುದ್ಧ ಭಾರತ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕೆಂದು ಇಂಟರ್ನೆಟ್ ಬಳಕೆದಾರರು ಒತ್ತಾಯಿಸಿದ್ದಾರೆ.