
ಮುಂಬೈ:ವಯಸ್ಕರ ಸಿನಿಮಾಗಳಲ್ಲಿ ನಟಿಸುವ ಮೂಲಕ ಭಾರತದಲ್ಲಿ ಕುಖ್ಯಾತಿ ಗಳಿಸಿರುವ ರಿಯಾ ಬಾರ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ನಟಿಸುತ್ತಿದ್ದ ರಿಯಾ ಬದುಕಿನ ನಗ್ನ ಸತ್ಯಗಳು ಆಕೆಯ ಬಂಧನದ ಬಳಿಕ ಬಯಲಾಗುತ್ತಿವೆ. ಅಶ್ಲೀಲ ಸಿನಿಮಾ ಉದ್ಯಮದಲ್ಲಿ ಆರೋಹಿ ಬರ್ಡೆ ಮತ್ತು ಬನ್ನಾ ಶೇಖ್ ಎಂದು ಜನಪ್ರಿಯವಾಗಿರುವ ರಿಯಾ ಬರ್ಡೆ ಅವರನ್ನು ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಬಂಧಿಸಲಾಗಿದೆ.

ರಿಯಾ ಬಾರ್ಡೆ ಬಂಧನಕ್ಕೆ ಕಾರಣವೇನು?
ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ನೀಲಿ ತಾರೆ ರಿಯಾ ಬಾರ್ಡೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಆಕೆಯ ವಿರುದ್ಧದ ಆರೋಪಗಳ ಪ್ರಕಾರ, ರಿಯಾ ಬಾಂಗ್ಲಾದೇಶದ ನಿವಾಸಿಯಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ತನ್ನ ಕುಟುಂಬದೊಂದಿಗೆ ಭಾರತದಲ್ಲಿ ನೆಲೆಸಿದ್ದಳು. ಈ ಪ್ರಕರಣದಲ್ಲಿ ಆಕೆಯ ತಾಯಿ, ಸಹೋದರಿ, ಸಹೋದರ ಮತ್ತು ತಂದೆಯ ಪತ್ತೆಗೂ ಪೊಲೀಸರು ನಿಗಾ ಇರಿಸಿದ್ದರು. ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420, 465, 468, 479, 34, ಮತ್ತು 14A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಶಾಂತ್ ಮಿಶ್ರಾ ಎಂದು ಗುರುತಿಸಲಾದ ರಿಯಾ ಅವರ ಸ್ನೇಹಿತರೊಬ್ಬರು ಈ ವಿಷಯವನ್ನು ವರದಿ ಮಾಡಿದ್ದಾರೆ. ರಿಯಾ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆಕೆಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.