ಬಂಗಾಳಕೊಲ್ಲಿಯಲ್ಲಿ (bay of bengal) ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿರೋ ರೆಮಲ್ (Remal) ಚಂಡಮಾರುತ ಮಧ್ಯ ರಾತ್ರಿ ಬಾಂಗ್ಲಾದ ಕರಾವಳಿಗೆ ಅಪ್ಪಳಿಸಿದೆ. ಇದಾದ ಬಳಿಕ ನೇರವಾಗಿ ಹಾದುಬಂದ ಸೈಕ್ಲೋನ್ (Cyclone) ಪಶ್ಚಿಮ ಬಂಗಾಳದ (west bengal) ಕರಾವಳಿ ತೀರದಲ್ಲೂ ತನ್ನ ಸಪ್ಪಳವನ್ನ ಮಾಡಿದೆ.

ಹೀಗೆ ಸೈಕ್ಲೋನ್ ಎಂಟ್ರಿಯಾಗ್ತಿದ್ದಂತೆ ಹವಮಾನ ಇಲಾಖೆ ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಪಶ್ಚಿಮ ಬಂಗಾಳದ ಸಾಗರ ದ್ವೀಪ ಮತ್ತು ಬಾಂಗ್ಲಾದೇಶದ ಮೊಂಗ್ಲಾ ಬಂದರು ಸಮೀಪದ ಖೇಪುಪರ ನಡುವೆ ಮಧ್ಯರಾತ್ರಿ ಚಂಡಮಾರುತ ಅಪ್ಪಳಿಸಿದೆ.

ಈ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ಅಬ್ಬರ ಶುರುವಾಗಿದೆ. ಕರಾವಳಿ ತೀರದ ಪ್ರದೇಶಗಳಲ್ಲಿ ಭಾರೀ ಮಳೆಯಾಗ್ತಿದೆ. ಜೋರಾಗಿ ಗಾಳಿಯೂ ಬೀಸ್ತಿದೆ. 100 ರಿಂದ 110 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸ್ತಿದ್ದು ಆತಂಕಕ್ಕೆ ಕಾರಣವಾಗಿದೆ.











