ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೋಲಿಸರು ಏನೇ ಕ್ರಮಕ್ಕೆ ಮುಂದಾದ್ರೂ ದಿನೇ ದಿನೇ ಹೆಚ್ಚಾಗುತ್ತಿರುವ ಪುಂಡರ ವೀಲಿಂಗ್ (Bike Wheeling) ಹಾವಳಿಗೆ ಬ್ರೇಕ್ ಹಾಕಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಪೊಲೀಸರು ಇದೀಗ ಈ ಪುಂಡರ ಪೋಷಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಹೀಗಾಗಿ ಕೇವಲ ಬೈಕ್ ವೀಲಿಂಗ್ ಮಾಡಿದ ಪುಂಡರ ವಿರುದ್ಧ ಮಾತ್ರವಲ್ಲದೇ ಅವರ ಪೋಷಕರ ವಿರುದ್ಧವೂ ಬೆಂಗಳೂರು ಪೋಲಿಸರು FIR ದಾಖಲಿಸಿದ್ದಾರೆ. ಬೆಂಗಳೂರಿನ ತಲಘಟ್ಟಪುರ ಠಾಣೆ ವ್ಯಾಪ್ತಿಯ ಅಂಜನಪುರ ರಸ್ತೆಯಲ್ಲಿ ವೀಲಿಂಗ್ ಮಾಡಿ ಇನ್‌ಸ್ಟಾದಲ್ಲಿ (Instrgram) ಅಪ್ಲೋಡ್ ಮಾಡಲಾಗಿತ್ತು.
ಈ ಕಿಡಿಗೇಡಿಗಳ ಶೋಕಿ ಆಟಾಟೋಪಗಳಿಗೆ ಬಿಸಿ ಮುಟ್ಟಿಸಿರುವ ಬೆಂಗಳೂರು ಪೋಲಿಸ್, ಈ ಬಾಲಕನನ್ನ ಪತ್ತೆ ಮಾಡಿ, ಈತನ ಬೈಕ್ ಸೀಜ್ ಮಾಡಿ ಬಾಲಕನ ಪೋಷಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.