ಇಂದು ಬೆಂಗಳೂರು (Bengaluru) ಸಂಪರ್ಕಿಸುವ ರಸ್ತೆಗಳು ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ತೀವ್ರ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಇಷ್ಟೂ ದಿನ ದೀಪಾವಳಿ ಹಬ್ಬದ (Deepavali festival) ಹಿನ್ನಲೆ ಊರುಗಳಿಗೆ ಹೋಗಿದ್ದ ಜನ ಕಳೆದ ರಾತ್ರಿಯಿಂದ ನಗರಕ್ಕೆ ವಾಪಸ್ಸಾಗುತ್ತಿದ್ದಾರೆ.
ಇದರ ಪರಿಣಾಮ ನಗರಕ್ಕೆ ಎಂಟ್ರಿಯಾಗುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ (Traffic jam) ಉಂಟಾಗಿದೆ. ಇತ್ತ ತುಮಕೂರು ಹೆದ್ದಾರಿಯಲ್ಲಿ (Tumkur highway) ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಇನ್ನು ಹಲವರು ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಬಸ್ ಇಳಿದು ಮೆಟ್ರೋ ಹತ್ತಲು ನಾಗಸಂದ್ರ ಮೆಟ್ರೋ ಸ್ಟೇಷನ್ (Nagasandra metro station) ಮುಂದೆ 500 ಮೀಟರ್ ದೂರದವರೆಗೂ ಕ್ಯೂ ನಿಂತಿದ್ದಾರೆ. ಅಲ್ಲದೇ ನೆಲಮಂಗಲ ಟೋಲ್, ಪೀಣ್ಯ, ಗೊರಗುಂಟೆಪಾಳ್ಯ ಸಿಗ್ನಲ್‌ವರೆಗೂ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ.