ಬೆಂಗಳೂರು: ವಿಶ್ವದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರು ಅನೇಕ ವಿಚಾರಗಳಲ್ಲಿ ನಂ.1, ನ.2 ಸ್ಥಾನ ಪಡೆದಿದೆ. ಐಟಿ ಹಬ್ ಆಗಿ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಜಗತ್ತಿನ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ.
ನೆದರ್ಲೆಂಡ್ಸ್ ಮೂಲದ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ಸುಮಾರು 500 ನಗರಗಳಲ್ಲಿ 3.65 ಟ್ರಿಲಿಯನ್ ಕಿ.ಲೋ ಮೀಟರ್ ಗಳಿಗಿಂತ ಹೆಚ್ಚಿನ ಪ್ರಯಾಣದ ಡೇಟಾವನ್ನು ಆಧಾರಿಸಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಅಮೇರಿಕಾದ ಮೆಕ್ಸಿಕೊ ನಗರ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಇನ್ನು ಮುಂಬೈ 18ನೇ ಸ್ಥಾನ, ದೆಹಲಿ 23, ಜೈಪುರ 30 ಚೆನ್ನೈ 32, ಹೈದರಾಬಾದ್ 47ನೇ ಸ್ಥಾನದಲ್ಲಿದೆ.

ವರದಿ ಪ್ರಕಾರ ಕೇವಲ 34 ನಗರಗಳಲ್ಲಿ ಮಾತ್ರ ಅತ್ಯಂತ ವೇಗವಾಗಿ ವಾಹನ ಸಂಚಾರ ಮಾಡಬಹದುದಂತೆ. ಬೆಂಗಳೂರು ನಗರದಲ್ಲಿ ಒಂದು ಕಿಲೋ ಮೀಟರ್ ಸಂಚರಿಸಲು ಕನಿಷ್ಠ 3 ನಿಮಿಷ 37 ಸೆಕೆಂಡ್ ಸಮಯ ಬೇಕಂತೆ. 15 ನಿಮಿಷದಲ್ಲಿ ಗರಿಷ್ಠ 4.2 ಕಿಲೋಮೀಟರ್ ದೂರ ಸಾಗಬಹುದಾಗಿದೆ. ಇದರಿಂದ ವಾಹನ ಸವಾರನ ವಾರ್ಷಿಕ 164 ಗಂಟೆಗಳ ಕಾಲ ಟ್ರಾಫಿಕ್ ನಲ್ಲೇ ಕಳೆಯ ಬೇಕಾಗಿದೆ. ಅಲ್ಲದೆ ವಾರ್ಷಿಕ 17 ಸಾವಿರ ಹಣ ಕಳೆದುಕೊಳ್ಳಲಾಗುತ್ತಿದೆಯಂತೆ. 2024 ರ ಸಾಲಿಗೆ ಹೋಲಿಸಿದರೆ 1.7 ರಷ್ಟು ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆಯಂತೆ. ಇನ್ನು ಸಂಜೆ ಸಮಯದಲ್ಲಿ 15 ನಿಮಿಷಗಳಲ್ಲಿ ಕೇವಲ 2.5 ಕಿಲೋಮೀಟರ್ ಪ್ರಯಾಣ ಮಾಡಬಹುದು ಎಂದು ವರದಿ ತಿಳಿಸಿದೆ.






