ಆನ್ ಲೈನ್ ನಲ್ಲಿ ಪಟಾಕಿ ಮಾರಾಟಕ್ಕೆ(Online crackers selling) ಜಾಹೀರಾತು ನೀಡಿದ ವ್ಯಾಪಾರಿ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ ಪಟಾಕಿ ವ್ಯಾಪಾರಿ ಮೇಲೆ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸಿದ್ದಾರೆ.

ಬಂಡೇಪಾಳ್ಯ ಪೊಲೀಸ್ರಿಂದ FIR ರಿಜಿಸ್ಟರ್ ಮಾಡಿದ್ದು, ಸುಪ್ರೀತ್ ಎಂಬಾತನ ವಿರುದ್ಧ ಎಕ್ಸ್ ಪ್ಲೋಸಿವ್ (Explosive) ಕಾಯ್ದೆಯಡಿ ದೂರು ದಾಖಲಾಗಿದ್ದು,ಅನ್ ಲೈನ್ ನಲ್ಲಿ ಪಟಾಕಿಯನ್ನ ಮನೆ ಬಾಗಿಲಿಗೆ ಡೆಲಿವರಿ ನೀಡೋದಾಗಿ ಜಾಹೀರಾತು ನೀಡಿದ್ದ ಸುಪ್ರೀತ್.
ಜಾಹೀರಾತು ನೋಡಿ ಹಲವರಿಂದ ಪಟಾಕಿ ಬುಕ್ಕಿಂಗ್ ಕೂಡ ಆಗಿತ್ತು. ಆದ್ರೆ ಆನ್ ಲೈನ್ ನಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್ (Supreme court) ಆದೇಶ ಹೊರಡಿಸಿದೆ.ಈ ಹಿನ್ನೆಲೆ ಸುಪ್ರೀತ್ ವಿರುದ್ಧ ಕೇಸ್ ದಾಖಲಿಸಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.