ಬೆಂಗಳೂರಿನ (Bengaluru) ಯೋಗ ಟ್ರೈನರ್ ರನ್ನ ಅಪಹರಿಸಿ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರಕ್ಕೆ (Rape) ಯತ್ನಿಸಿ ನಂತರ ಕೊಲ್ಲಲು ಪ್ರಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಸಮೀಪ ನಡೆದಿದೆ. ಅಕ್ಟೋಬರ್ 23ರಂದು ನಾಲ್ವರು ದುರುಳರ ಗ್ಯಾಂಗ್ ಯೋಗ ಶಿಕ್ಷಕಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ (KR Puram) ಕಿಡ್ನಾಪ್ ಮಾಡಿ, ಸಂಜೆಯವರೆಗೆ ಬೆಂಗಳೂರನ್ನು ಸುತ್ತಿಸಿದ್ದಾರೆ.ಆ ನಂತರ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ.

ಆಕೆಯ ಮೇಲೆ ನಾಲ್ವರ ಗುಂಪು ಹಲ್ಲೆ ಮಾಡಿ, ಆಕೆಯನ್ನು ಜೀವಂತ ಸಮಾಧಿ ಮಾಡಿ ಪ್ರಾಣ ಹೋಗಿರಬಹುದು ಎಂದು ಊಹಿಸಿ ಅಲ್ಲಿಂದ ಹೊರಟಿದ್ದಾರೆ. ಆದ್ರೆ ಸತ್ತಂತೆ ನಟಿಸಿದ್ದ ಮಹಿಳೆ ಆ ನಂತರ ಸಮಾಧಿಯಿಂದ ಎದ್ದು ಬಂದಿದ್ದಾರೆ.ಆಮೇಲೆ ಮಹಿಳೆ ಅರೆ ಬೆತ್ತಲಾಗಿಯೇ ರಾತ್ರಿಯಿಡಿ ನಡೆದುಕೊಂಡು ಪಕ್ಕದ ದಿಬ್ಬೂರಹಳ್ಳಿಗೆ ಬಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಬಟ್ಟೆ ನೀಡಿದ್ದಾರೆ.
ಈ ಮಹಿಳೆಗೆ ಸಂತೋಷ್ (Santosh) ಎಂಬ ಪ್ರಿಯಕರನಿದ್ದು, ಆತನ ಪತ್ನಿಯೇ ಈ ಕೃತ್ಯಕ್ಕೆ ಸುಪಾರಿ ನೀಡಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂತೋಷ ಎಂಬಾತನ ಜೊತೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿದ್ದಳಂತೆ. ಹೀಗಾಗಿ ಶಿಕ್ಷಕಿ ಹತ್ಯೆಗೆ ಸಂತೋಷ್ ಪತ್ನಿ ಸುಪಾರಿ ನೀಡಿದ್ದು, ಸದ್ಯ ಈ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.