ಭಾರತದ ಅತಿ ದೊಡ್ಡ ಟೆಕ್ ಪಾರ್ಕ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ನಾಗವಾರದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿಗೆ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟದ ಕಾರಣ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಹಲವು ಭಾರೀ ನೋಟಿಸ್ಅನ್ನು ನೀಡಲಾಗಿದ್ದು ಮಾಲೀಕರು ಯಾವುದೇ ನೋಟಿಸ್ ಗೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಇಂದು ಬೆಳಗ್ಗೆ ಕಾರ್ಯಚರಣೆಗೆ ಇಳಿದ ಬಿಬಿಎಂಪಿ ಅಧಿಕಾರಿಗಳು ಪಾರ್ಕ್ನ ಮುಖ್ಯ ದ್ವಾರಕ್ಕೆ ಮುಂಭಾಗ ನಾಮ ಫಲಕ ಹಾಕಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಲೀಕರಿಗೆ ಹಲವು ಭಾರೀ ನೋಟಿಸ್ ನೀಡಲಾಗಿದ್ದು, ಅವರುಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಿಲ್ಲ. ಇತ್ತೀಚಿಗೆ ನಡೆದ ಲೆಕ್ಕ ಪತ್ರಗಳ ಪರಿಶೋಧನೆಯಲ್ಲಿ ತೆರಿಗೆ ಪಾವತಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ 2016ರಲ್ಲಿ ಡಿಫರೆನ್ಷಿಯಲ್ ಟ್ಯಾಕ್ಸ್ ಕಟ್ಟದ ಕಾರಣ ಮಾನ್ಯತಾ ಟೆಕ್ ಪೀಠೋಪಕರಣಗಳನ್ನು ಬಿಬಿಎಂಪಿ ವಶಕ್ಕೆ ಪಡೆದಿತ್ತು.