ಬೆಂಗಳೂರಿನಲ್ಲಿ (Bangalore) ಆಟೋ ಡ್ರೈವರ್ ಗಳ ವರ್ತನೆಯ ಬಗ್ಗೆ ಆಗ್ಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಯುವತಿಯೊಂದಿಗೆ ಆಟೋ ಚಾಲಕ (Auto driver) ಅಸಭ್ಯ ಪದ ಬಳಕೆ ಮಾಡಿದ ಘಟನೆ ನಡೆದಿದೆ.
ಆಟೋ ಚಾಲಕ ಜಾಸ್ತಿ ಬಾಡಿಗೆ ಹಣ ಕೇಳಿದ ಕಾರಣ, ಅಷ್ಟು ಜಾಸ್ತಿ ಬಾಡಿಗೆ ಏಕೆ ? ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಆಟೋ ಚಾಲಕ ಅಸಯ್ಯಕರ, ಅಸಭ್ಯ ಪದ ಬಳಕೆ ಮಾಡಿದ್ದಾನೆ.ಸಿಲ್ಕ್ ಬೋರ್ಡ್ (Silk board) ಏನು ಇಲ್ಲೆ ಇದ್ಯಾ ಎನ್ನುತ್ತಾ ತೀರಾ ಹೊಲಸು ಪದಗಳಿಂದ ಈ ಚಾಲಕ ಯುವತಿಯನ್ನು ನಿಂದನೆ ಮಾಡಿರುವ ವಿಡಿಯೋವನ್ನ ತನ್ನ ಮೊಬೈಲ್ ನಲ್ಲಿ ಯುವತಿ ಸೆರೆಹಿಡಿದಿದ್ದಾಳೆ.
ಸಿಲ್ಕ್ ಬೋರ್ಡ್ ಗೆ ಡ್ರಾಪ್ ಕೇಳಿದ ಯುವತಿ 150 ರೂಪಾಯಿ ಬಾಡಿಗೆ ಕೊಡ್ತೀನಿ, ಅದಕ್ಕಿಂತ ಜಾಸ್ತಿ ಕೊಡೋಕೆ ಆಗೋದಿಲ್ಲ ಎಂದಿದ್ದಕ್ಕೆ, ಅಸಭ್ಯ ಪದಬಳಿಸಿ ನಿಂದನೆ ಮಾಡಿ ಆಟೋ ಹತ್ತಿ ಚಾಲಕ ಅಲ್ಲಿಂದ ಹೊರಟಿದ್ದಾನೆ. ಆಟೋಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಟರ್ನೆಟ್ ನಲ್ಲಿ (Internet) ಆಗ್ರಹ ಕೇಳಿಬರುತ್ತಿದ್ದು, ಘಟನೆ ಸ್ಥಳದ ಬಗ್ಗೆ ನಿಖರ ಮಾಹಿತಿ ಕೇಳಿರುವ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.