ಮೈಸೂರು : ಮೇ.07: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಆನೆ ಇಂದು ಕೊನೆಯುಸಿರೆಳೆದಿದೆ. ಬಲರಾಮ ಆನೆ ಪ್ರತಿ ಬಾರಿಯ ಮೈಸೂರು ದಸರಾದಲ್ಲಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಮೈಸೂರು ದಸರಾ ಮಹೋತ್ಸವದ ವಿಜಯದಶಮಿ, ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಮೈಸೂರಿಗರ ನೆಚ್ಚಿನ ಆನೆಯೂ ಕೂಡ ಆಗಿತ್ತು.

ಇತ್ತೀಚಿಗೆ ಬಲರಾಮ ಆನೆಯ ಆರೋಗ್ಯವು ಹದಗೆಟ್ಟಿತ್ತು, ಇದೇ ಕಾರಣಕ್ಕೆ ನಾಗರಹೊಳೆ ಉದ್ಯಾನವಾದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶುವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡಿದ್ರು, ಬಲರಾಮನ ಬಾಯಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲು ನೀರು ಕುಡಿಯಲಾಗದೆ ಅಸ್ಪಸ್ಥಗೊಂಡಿತು. ಪಶು ವೈದ್ಯರು ಸಾಕಷ್ಟು ಚಿಕಿತ್ಸೆಯನ್ನ ನೀಡಿದ್ದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೆ ಬಲರಾಮ ಆನೆ ಕೊನೆಯುಸಿರೆಳೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಬಲರಾಮ ಆನೆಯ ಬಾಯಿಯಲ್ಲಿ ಹುಣ್ಣಾಗಿ ನಿತ್ರಾಣಗೊಂಡಿತ್ತು ಜೊತೆಗೆ ಈ ಹುಣ್ಣು ಹೆಚ್ಚಾದ ಪರಿಣಾಮ ಬಲರಾಮ ಆನೆ ಸಂಪೂರ್ಣವಾಗಿ ಅಸ್ವಸ್ಥಗೊಂಡಿತು ಇದಕ್ಕಾಗಿ ಪಶು ವೈದ್ಯರು ನಿರಂತರವಾದ ಚಿಕಿತ್ಸೆಯನ್ನು ಕೂಡ ನೀಡಿದ್ರು ಬಲರಾಮ ಆನೆಗೆ ಆಹಾರ ಸೇವಿಸಲು ನೀರು ಕುಡಿಯಲು ಆಗದಂತಹ ಪರಿಸ್ಥಿತಿ ಉಂಟಾಗಿತ್ತು ರಮೇಶ ಸ್ಥಳದಲ್ಲೇ ಠಿಕಾಣಿ ಹೂಡಿ ಚಿಕಿತ್ಸೆಯನ್ನ ನಿರಂತರವಾಗಿ ನೀಡುತ್ತಾ ಬಂದಿದ್ರು ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ ಅನ್ನೋದು ಅರಣ್ಯ ಇಲಾಖೆ ಸಿಬ್ಬಂದಿಗಳ ಮಾತಾಗಿದೆ