ನಿನ್ನೆ (ಜುಲೈ 16) ಬೆಂಗಳೂರಿನಲ್ಲಿ (Bengaluru) ನಡೆದ ಭೀಕರ ಮರ್ಡರ್,ರೌಡಿಶೀಟರ್ ಬಿಕ್ಲು ಶಿವ (Biklu shiva) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೇಸ್ ನ ತನಿಖಾಧಿಕಾರಿಯಾಗಿ ಕೆ.ಜಿ.ಹಳ್ಳಿ (KG Halli) ಎಸಿಪಿ ಪ್ರಕಾಶ್ ರಾಥೋಡ್ ಅವರನ್ನ ನೇಮಿಸಿ ಆದೇಶ ಹೊರಡಿಸಲಾಗಿದೆ.ಮತ್ತೊಂದೆಡೆ ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ (Byrathi basavaraj) ಹೆಸರನ್ನ ಸೇರಿಸಿರೋದು ರಾಜಕೀಯ ಪಿತೂರಿ ಎಂದು ಹೈಕೋರ್ಟ್ ವಕೀಲ ಪ್ರಶಾಂತ್ ವಾಗ್ದಾಳಿ ನಡೆಸಿದ್ದಾರೆ.

ಈ ರೌಡಿಶೀಟರ್ ಶಿವಕುಮಾರ್ @ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ,ಶಾಸಕ ಬೈರತಿ ಬಸವರಾಜ್ ಹೆಸರನ್ನು ರಾಜಕೀಯ ದುರುದ್ಧೇಶದಿಂದ ಸೇರಿಸಲಾಗಿದೆ.ಒಬ್ಬ ಜನಪ್ರತಿನಿಧಿಗೆ ಕ್ಷೇತ್ರದಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲೂ ಪರಿಚಯ ಇರ್ತಾರೆ. ಬಸವರಾಜ್ ಅವರಿಗೆ ಆರೋಪಿಗಳ ಪರಿಚಯ ಇರಬಹುದು,ಹಾಗಂತ ಹೋಗಿ ಕೊಲೆ ಮಾಡಿ ಅಂತ ಹೇಳಿಲ್ಲ ಎಂದು ವಕೀಲ ಪ್ರಶಾಂತ್ ಹೇಳಿದ್ದಾರೆ.

ಇನ್ನು ಈ ರೀತಿಯ ಕೇ ಗಳಲ್ಲಿ ನಮ್ಮ ನಗರ ಪೊಲೀಸರು, ಅದ್ರಲ್ಲೂ ಕೊಲೆ ಕೇಸ್ ನಲ್ಲಿ ಒಬ್ಬ ಜನಪ್ರತಿನಿಧಿಯ ಹೆಸರು ತರುವಾಗ ಕೂಲಂಕುಷವಾಗಿ ವಿಚಾರಣೆ ನಡೆಸಬೇಕಿತ್ತು.ಆದ್ರೆ ಆ ಕೆಲಸ ಆಗಿಲ್ಲ. ಹೀಗಾಗಿ ಬೈರತಿ ಬಸವರಾಜ್ ಅವರ ಹೆಸರನ್ನ ಆರೋಪಿ ಸ್ಥಾನದಿಂದ ಕೈ ಬಿಡುವಂತೆ ವಕೀಲ ಪ್ರಶಾಂತ್ ಮೆಹಲ್ ಆಗ್ರಹಿಸಿದ್ದಾರೆ.







