ನಿರ್ದೇಶಕ ರಾಜಮೌಳಿ (Rajamouli) ಹಾಗೂ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಕಾಂಬಿನೇಷನ್ ನ ಬ್ಲಾಕ್ ಬಸ್ಟರ್ ಸಿನಿಮಾ ಬಾಹುಬಲಿ (Bahubali) ಸೀರಿಸ್ ಗೆ ಕೇವಲ ದೇಶದಾದ್ಯಂತ ಮಾತ್ರವಲ್ಲ ಹೊರದೇಶದಲ್ಲೂ ಅಪಾರ ಅಭಿಮಾನಿ ಬಳಗವಿದೆ. ಬಾಹುಬಲಿ 2 ಅದೇಲೆ, ಬಾಹುಬಲಿ 3 ಬರಲಿದ್ಯಾ ಅನ್ನೋದು ಎಲ್ಲರನ್ನೂ ಕಾಡ್ತಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಪದೇ ಪದೇ ಅಭಿಮಾನಿ ಬಳಗ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದ್ದ ಬಾಹುಬಲಿ 3 (Bahubali 3) ಕುರಿತಾದ ಪ್ರಶ್ನೆಗಳಿಗೆ ನಿರ್ಮಾಪಕ ಜ್ಞಾನವೇಲ್ ರಾಜಾ ಉತ್ತರಿಸಿದ್ದು, ಸದ್ಯ ಬಾಹುಬಲಿ 3 ಮಾಡು ಕುರಿತು ಮಾತುಕತೆ ನಡೀತಿದೆ ಎಂದು ಹೇಳಿದ್ದಾರೆ.
ಆ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿರುವ ನಿರ್ಮಾಪಕ ಜ್ಞಾನವೇಲ್ ರಾಜಾ, ರಾಜಮೌಳಿ ಮತ್ತು ಮಹೇಶ್ ಬಾಬು (Mahesh babu) ಸಿನಿಮಾ ಮುಗಿದ ಬಳಿಕ, ಬಾಹುಬಲಿ 3 ಸೆಟ್ಟೇರುವ ಸಾಧ್ಯತೆಯಿದೆ ಅಂತಾ ತಿಳಿಸಿದ್ದಾರೆ.