ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣ ಅಂದಾಜು ವೆಚ್ಚ 1800 ಕೋಟಿ ರೂ. ಆಗಿದ್ದು, ಇದರ ನಿರ್ಮಾಣ ಉಸ್ತುವಾರಿ ಟ್ರಸ್ಟ್ ದ್ದಾಗಿದೆ.
ಸುಪ್ರೀಂಕೋರ್ಟ್ ನಿಯೋಜಿತ ಶ್ರೀ ರಾಮಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಸೋಮವಾರ ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಸುದೀರ್ಘ ಸಭೆ ನಡೆಸಿದ ನಂತರ ಮಂದಿರದ ನೀತಿ ನಿಯಮಗಳ ಕುರಿತು ನಿರ್ಣಯಗಳನ್ನು ಕೈಗೊಂಡಿತು.
ಮಂದಿರದೊಳಗೆ ದೇಶದ ಪ್ರಮುಖ ಸ್ವಾಮೀಜಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೇ ಮಂದಿರ ನಿರ್ಮಾಣಕ್ಕೆ 1800 ಕೋಟಿ ರೂ. ವೆಚ್ಚ ಮಾಡುವ ಕುರಿತು ತಜ್ಞರು ನೀಡಿದ ವರದಿಯನ್ನು ಅಂಗೀಕರಿಸಲಾಯಿತು.