ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ (Rama janma bhoomi) 500 ವರ್ಷಗಳ ನಂತರ ಬಾಲರಾಮನ ಮುಂದೆಯೇ ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ಅದ್ದೂರಿಯಾಗಿ ಆಚರಿಸಲಾಯ್ತು. ಉತ್ತರ ಪ್ರದೇಶದ (Uttar Pradesh) ಅಯೋಧ್ಯಾ ನಗರಿ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿದೆ.
ಸರಯು ನದಿ ತೀರದ 55 ಘಾಟ್‌ಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸಲಾಯಿತು. ಇದೇ ವೇಳೆ 1,121 ಮಂದಿ ವೇದಾಚಾರ್ಯರು ಸರಯೂ ನದಿಗೆ ಆರತಿ ಎತ್ತಿದರು.
ಈ ದೃಶ್ಯ ಕಣ್ಣಿಗೆ ಹಬ್ಬದಂತೆ ರಮಣೀಯವಾಗಿ ಗೋಚರಿಸಿತು. ಇನ್ನು ದೀಪೋತ್ಸವ ನಂತರ ಅಯೋಧ್ಯೆಯಲ್ಲಿ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ.