• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೋದಿ, ರಾಹುಲ್‌ ಆಸ್ತಿ ಎಷ್ಟಿದೆ..? ಮೂರು ವರ್ಷದಲ್ಲಿ ಸಂಸದರ ಸಂಪತ್ತು ಏರಿದ್ದೆಷ್ಟು..?

ಪ್ರತಿಧ್ವನಿ by ಪ್ರತಿಧ್ವನಿ
January 9, 2026
in Top Story, ರಾಜಕೀಯ
0
ಮೋದಿ, ರಾಹುಲ್‌ ಆಸ್ತಿ ಎಷ್ಟಿದೆ..? ಮೂರು ವರ್ಷದಲ್ಲಿ ಸಂಸದರ ಸಂಪತ್ತು ಏರಿದ್ದೆಷ್ಟು..?
Share on WhatsAppShare on FacebookShare on Telegram

ಬೆಂಗಳೂರು : ದೇಶದಲ್ಲಿ ಸತತವಾಗಿ ಮೂರು ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸಂಸದರ ಆಸ್ತಿಯಲ್ಲಿ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿಯ ಸಂಸದರ ಆಸ್ತಿಯಲ್ಲಿ ಹೆಚ್ಚಳವಾಗಿದ್ದು ಗಮನಾರ್ಹ ಸಂಗತಿಯಾಗಿದೆ.

ADVERTISEMENT
G Parameshwara : CLP ಸಭೆಯಲ್ಲಿ 5 ವರ್ಷ CM Siddaramaiah CM ಅಂತ ತೀರ್ಮಾನವಾಗಿದೆ #pratidhvani

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಪ್ರಕಟಿಸಿರುವ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ರಾಜಕೀಯ ವಲಯದಲ್ಲಿ ವರದಿ ಸಂಚಲನ ಮೂಡಿಸಿದೆ. ಮುಖ್ಯವಾಗಿ ಗುಜರಾತ್‌ನ ಏಳು ಸಂಸದರು ಸತತ ಮೂರು ಬಾರಿ ಗೆಲುವು ಕಂಡಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಅವರ ಆಸ್ತಿಯಲ್ಲಿ ಬದಲಾವಣೆಯಾಗಿದ್ದು, ಹಲವರ ಆಸ್ತಿಯಲ್ಲಿ ಹೆಚ್ಚಳವಾಗಿದೆ ಎಂದು ವರದಿ ವಿಶ್ಲೇಷಿಸಿದೆ.

DK Shivakumar on HD Kumaraswamy: ತಾಕತ್‌ ಇದ್ರೆ ಬಿಜೆಪಿ ಅವರು ಡಿಬೇಟ್‌ಗೆ ಬರಲಿ.! #pratidhvani

ಪ್ರಧಾನಿ ಹಾಗೂ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದ ಸಂಸದ ನರೇಂದ್ರ ಮೋದಿ ಅವರ ಆಸ್ತಿಯು 10 ವರ್ಷದಲ್ಲಿ 1.26 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಮೋದಿ ಆಸ್ತಿಯು 82 ರಷ್ಟು ಅಧಿಕವಾಗಿದೆ.

ಇನ್ನೂ ಉತ್ತರ ಪ್ರದೇಶದ ರಾಯ್‌ ಬರೇಲಿ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್‌ ಗಾಂಧಿ ಅವರ ಆಸ್ತಿಯು 10 ವರ್ಷಗಳಲ್ಲಿ 10.99 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಇದನ್ನು ಶೇಕಡಾವಾರು ಲೆಕ್ಕಾಚಾರದಲ್ಲಿ ನೋಡಿದಾಗ 117ರಷ್ಟು ಜಿಗಿದಿದೆ.

DK Shivakumar on HD Kumaraswamy: ತಾಕತ್‌ ಇದ್ರೆ ಬಿಜೆಪಿ ಅವರು ಡಿಬೇಟ್‌ಗೆ ಬರಲಿ.! #pratidhvani

ರಾಜ್ಯದ ಸಂಸದರ ಆಸ್ತಿಯಲ್ಲಿಯೂ ಜಿಗಿತ..

ಅಲ್ಲದೆ ರಾಜ್ಯದ ವಿಚಾರದಲ್ಲಿ ಗಮನಿಸಿದಾಗ ಆರು ಸಂಸದರ ಆಸ್ತಿಯಲ್ಲಿ ಹೆಚ್ಚಳ ಕಂಡಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೇ ಸೇರಿದಂತೆ ಹಲವರ ಆಸ್ತಿಯಲ್ಲಿ ಏರಿಕೆಯಾಗಿದೆ. ಇವರೆಲ್ಲ ಸತತವಾಗಿ ಮೂರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡವರೇ ಆಗಿದ್ದಾರೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿ. ವಿಜಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ರಮೇಶ್‌ ಜಿಗಜಿಣಗಿ ಅವರ ಆಸ್ತಿಯಲ್ಲಿ 42.68 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್‌ ಆಸ್ತಿ 33.72 ಕೋಟಿ ರೂಪಾಯಿ ಏರಿಕೆಯಾಗಿದೆ.

S. R. Vishwanath : ಕಂದಾಯ ಸಚಿವರ ಕ್ಷೇತ್ರದಲ್ಲೇ ಅಕ್ರಮ ಮನೆಗಳ ನಿರ್ಮಾಣ..! #kogilu #bjp #congress

ಇನ್ನೂ ಕೇಂದ್ರದ ಪ್ರಭಾವಿ ಸಚಿವ ಪ್ರಲ್ಹಾದ ಜೋಶಿ ಅವರ ಆಸ್ತಿಯಲ್ಲಿ 16.89 ಕೋಟಿ ರೂಪಾಯಿಗಳಷ್ಟು ಅಧಿಕವಾಗಿದೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಆಸ್ತಿಯಲ್ಲಿ 14.82 ಕೋಟಿ ರೂಪಾಯಿಗಳು ಇನ್‌ಕ್ರೀಸ್‌ ಆಗಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ ಅವರ ಆಸ್ತಿ 6.67 ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್‌ ಅವರ ಆಸ್ತಿ 3.94 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ.

ಅಲ್ಲದೆ ಎಡಿಆರ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಿಜೆಪಿ ಸಂಸದೆ ಪೂನಂಬೆನ್ ಮೇಡಂ ಅವರ ಘೋಷಿತ ಆಸ್ತಿ 2014 ರಲ್ಲಿ ಸುಮಾರು 17 ಕೋಟಿ ರೂಪಾಯಿಗಳಿಂದ 2024 ರಲ್ಲಿ 147 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕೇವಲ ಹತ್ತು ವರ್ಷಗಳಲ್ಲಿ ಸರಿಸುಮಾರು 130 ಕೋಟಿ ರೂಪಾಯಿ ಅಥವಾ ಶೇ. 747 ರಷ್ಟು ಅಧಿಕವಾಗಿದೆ.

Union Minister Pralhad Joshi : ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ

ಎರಡನೇ ಸ್ಥಾನದಲ್ಲಿ ಕಛ್ ಬಿಜೆಪಿ ಸಂಸದ ವಿನೋದ್ ಲಖಂಶಿ ಚಾವ್ಡಾ ಅವರ ಹೆಸರಿದ್ದು, ಚಾವ್ಡಾ ಆಸ್ತಿ 2014 ರಲ್ಲಿ ಕೇವಲ 56 ಲಕ್ಷ ರೂಪಾಯಿ ಅಂತ ಘೋಷಿಸಿಕೊಂಡಿದ್ದರು. ಅದು 2024 ರ ವೇಳೆಗೆ 6.5 ಕೋಟಿ ರೂಪಾಯಿಗೆ ಅಧಿಕವಾಗಿ ಶೇ. 1,100 ಕ್ಕಿಂತಲೂ ಹೆಚ್ಚಳವಾಗಿದೆ.

ಹಿರಿಯ ಸಂಸದರಾಗಿರುವ ಖೇಡಾದ ದೇವುಸಿನ್ಹ್‌ ಚೌಹಾಣ್‌ ಹಾಗೂ ಜುನಾಗಢ್ ರಾಜೇಶ್‌ ನರನ್‌ಭಾಯಿ‌ ಅವರುಗಳು ಶ್ರೀಮಂತರಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ಪ್ರತಿಯೊಬ್ಬ ಸಂಸದರೂ ತಾವು ಘೋಷಿಸಿಕೊಂಡಿದ್ದ ಆಸ್ತಿಗಿಂತ 2 ಕೋಟಿಗಿಂತಲೂ ಅಧಿಕ ಎಂದು ಹೇಳಿಕೊಂಡಿದ್ದಾರೆ.

Lakshmi Hebbalkar : ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಸುರಕ್ಷತೆಗೆ 'ಅಕ್ಕ ಪಡೆ': ಹೆಬ್ಬಾಳ್ಕರ್‌ ಏನಂದ್ರು..!

ಬಾರ್ಡೋಲಿಯ ಪರಿಶಿಷ್ಟ ಜಾತಿಯ ಮತ್ತೊಬ್ಬ ಬಿಜೆಪಿ ಸಂಸದ ಪರಭುಭಾಯಿ ನಾಗರ್‌ಭಾಯಿ ವಾಸವ ಅವರ ಆಸ್ತಿ ಸುಮಾರು 1.6 ಕೋಟಿ ರೂಪಾಯಿಗಳಿಂದ 4.7 ಕೋಟಿ ರೂಪಾಯಿಗಳಿಗೆ ಜಿಗಿದಿದೆ. ಇದು ಅವರ ಆಸ್ತಿಯಲ್ಲಿ ಸುಮಾರು ಶೇ. 195 ರಷ್ಟರ ಹೆಚ್ಚಳವನ್ನು ಸೂಚಿಸುತ್ತದೆ.

ಈ ಎಲ್ಲ ಸಂಸದರು ತಮ್ಮ ಆಸ್ತಿಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗಮನ ಹರಿಸಿದ್ದರೆ, ಕೇಂದ್ರ ಸಚಿವ ಹಾಗೂ ನವಸಾರಿ ಸಂಸದರಾಗಿರುವ ಸಿ.ಆರ್.‌ ಪಾಟೀಲ್‌ ತಾವು ಘೋಷಿಸಿಕೊಂಡಿದ್ದ ಆಸ್ತಿಯಲ್ಲಿ ಶೇ. 47ರಷ್ಟು ಕಳೆದುಕೊಂಡಿದ್ದಾರೆ. ಹ್ಯಾಟ್ರಿಕ್‌ ಗೆಲುವು ಕಂಡ ಸಂಸದರು ಅಚ್ಚರಿ ರೀತಿಯಲ್ಲಿ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಸಿ.ಆರ್.‌ ಪಾಟೀಲ್‌ ಮಾತ್ರ ಆಸ್ತಿಯಲ್ಲಿ ಕುಸಿತ ಕಂಡಿರುವುದನ್ನು ಎಡಿಆರ್‌ ವರದಿಯು ತಿಳಿಸಿದೆ.

C M Siddaramaiah : ಹೇಗಿದೆ ನೋಡಿ ಸಿದ್ದರಾಮಯ್ಯ ಕೋಪ..! #pratidhvani

ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಅವುಗಳ ಪರಿಹಾರಕ್ಕೆ ಸಂಸದರು ಮುಂದಾಗದೆ, ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿಯೇ ಬ್ಯುಸಿ ಆಗಿದ್ದಾರಾ ಎನ್ನುವ ಪ್ರಶ್ನೆಯು ಮೂಡುತ್ತಿದೆ. ರಾಜ್ಯದ ವಿಚಾರದಲ್ಲಿಯೂ ಅಷ್ಟೇ ಪ್ರಮುಖ ನೀರಾವರಿ ಯೋಜನೆಗಳು ಜಾರಿಯಾಗಬೇಕಿದೆ. ರಾಜ್ಯದ ಹಿತಾಸಕ್ತಿಗಳ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಬದಲು ತಮ್ಮದೇ ಏಳಿಗೆಯಲ್ಲಿ ಇವರು ಮಗ್ನರಾಗಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

Tags: AssetsBJPcongressIndans PoliticsKarnataka PoliticsmpPolitics
Previous Post

ಮನರೇಗಾ ಬಗ್ಗೆ ಪ್ರಹ್ಲಾದ್ ಜೋಷಿ ಬಹಿರಂಗ ಚರ್ಚೆಗೆ ಬರಲಿ: ಡಿ.ಕೆ. ಶಿವಕುಮಾರ್ ಸವಾಲ್..!

Next Post

KPCC ಅಧ್ಯಕ್ಷ ಸ್ಥಾನದ ಮೇಲೆ ರಾಜಣ್ಣ ಕಣ್ಣು: ಹೈಕಮಾಂಡ್‌ಗೆ ಹೇಳಿದ್ದೇನೆ ಎಂದ ಮಾಜಿ ಸಚಿವರು..!

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
KPCC ಅಧ್ಯಕ್ಷ ಸ್ಥಾನದ ಮೇಲೆ ರಾಜಣ್ಣ ಕಣ್ಣು: ಹೈಕಮಾಂಡ್‌ಗೆ ಹೇಳಿದ್ದೇನೆ ಎಂದ ಮಾಜಿ ಸಚಿವರು..!

KPCC ಅಧ್ಯಕ್ಷ ಸ್ಥಾನದ ಮೇಲೆ ರಾಜಣ್ಣ ಕಣ್ಣು: ಹೈಕಮಾಂಡ್‌ಗೆ ಹೇಳಿದ್ದೇನೆ ಎಂದ ಮಾಜಿ ಸಚಿವರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada