ಲಾಯ್ಡ್

ಲಾಯ್ಡ್

ಮಹಾ’ ಡ್ರಾಮಾ; ಡಿಸಿಎಂ ಆಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ

ಒಂದೆಡೆ ದೇಶದ ಎಲ್ಲಾ ವಿಪಕ್ಷಗಳು ಒಗ್ಗಾಟ್ಟಾಗಿ ಬಿಜೆಪಿಯನ್ನು ವಿರೋಧಿಸುವ ಯೋಜನೆ ರೂಪಿಸುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಸೈಲೆಂಟಾಗಿ ಎನ್‌ಸಿಪಿಯ ಅಜಿತ್ ಪವಾರ್‌ರನ್ನು ತಮ್ಮ ತೆಕ್ಕೆಗೆ ಸೆಳೆದಿದೆ. ಮಹಾರಾಷ್ಟ್ರದಲ್ಲಿ ಶಿಂಧೆ...

Read moreDetails

ಬಿಬಿಎಂಪಿ ಮುಖ್ಯ ಅಭಿಯಂತರ ವರ್ಗಾವಣೆಗೆ ಸಿಎಂ ಸೂಚನೆ; ಅಧಿಕೃತ ಆದೇಶ ಪ್ರಕಟ

ಕರ್ನಾಟಕದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವ ಕುರಿತು ಮಾಜಿ‌ ಸಿಎಂ ಹೆಚ್ ಡಿ‌ ಕುಮಾರಸ್ವಾಮಿ ಆರೋಪ ಮಾಡಿರುವ ಬೆನ್ನಲ್ಲೇ, ಬಿಬಿಎಂಪಿ ಚೀಫ್ ಇಂಜಿನಿಯರ್‌ರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ...

Read moreDetails

ಆಂಧ್ರ ಸ್ಥಳಿಯಾಡಳಿತ ಚುನಾವಣೆ: ದಾಖಲೆಯ ಗೆಲುವು ಬರೆದ ವೈಎಸ್ಆರ್ ಕಾಂಗ್ರೆಸ್

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಾಖಲೆಯ ಜಯ ಸಾಧಿಸಿದೆ. ಭಾನುವಾರ ಘೋಷಣೆಯಾದ ಚುನಾವಣಾ ಫಲಿತಾಂಶ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದು, ಮಂಡಲ ಪರಿಷತ್ ಹಾಗೂ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಮಾರು 90%ರಷ್ಟು ಸ್ಥಾನಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿದೆ. ಏಪ್ರಿಲ್ 8ರಂದು 515 ಜಿಲ್ಲಾ ಪರಿಷತ್ ಹಾಗೂ 7,220 ಮಂಡಲ ಪರಿಷತ್’ಗಳಿಗೆ ಚುನಾವಣೆ ನಡೆದಿತ್ತು. ಏಪ್ರಿಲ್ 10ರಂದು ಘೋಷಣೆಯಾಗಬೇಕಿದ್ದ ಫಲಿತಾಂಶವು ನ್ಯಾಯಾಲಯದಲ್ಲಿ ಬಿಜೆಪಿ ಹಾಗೂ ಟಿಡಿಪಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ಮುಂದೂಡಲ್ಪಟ್ಟಿತ್ತು. ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಅಗತ್ಯವಿರುವ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು.  ಐದು ತಿಂಗಳು ವಿಚಾರಣೆ ನಡೆಸಿದ ಬಳಿಕ ಕಳೆದ ಗುರುವಾರ ಹೈಕೋರ್ಟ್’ನ ವಿಭಾಗೀಯ ಪೀಠವು ಮತ ಎಣಿಕೆಗೆ ಅನುಮತಿ ನೀಡಿತ್ತು.  ಭಾನುವಾರ ಸಂಜೆಯ ವೇಳಗೆ ಘೋಷಣೆಯಾದ ಫಲಿತಾಂಶದ ಪ್ರಕಾರ 553 ZPTCಗಳಲ್ಲಿ ವೈಎಸ್ಆರ್ ಕಾಂಗ್ರೆಸ್ 547 ZPTCಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.8,083MPTC ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 7,284 ಸ್ಥಾನಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿದೆ.  ಕೇವಲ ಒಂದು ದಶಕದ ಹಿಂದೆ ಸ್ಥಾಪಿತವಾದ ಈ ಪಕ್ಷವು,75 ಮುನ್ಸಿಪಾಲಿಟಿ ಹಾಗೂ ನಗರಸಭೆಗಳಲ್ಲಿ 74ಅನ್ನು ಗೆದ್ದು ಬೀಗಿದೆ. ಮಿಗಿಲಾಗಿ, ಎಲ್ಲಾ 12 ನಗರ ಪಾಲಿಕೆಗಳನ್ನು ಕೂಡಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.  2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 175ರಲ್ಲಿ 151 ಕ್ಷೇತ್ರಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿತ್ತು. ಇದೇ ವೇಳೆ ನಡೆದಂತಹ ಲೋಕಸಭಾ ಚುನಾವಣೆಯಲ್ಲಿ 25ರಲ್ಲಿ 22 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಚುನಾವಣೆಯಲ್ಲಿ ಸತತ ಗೆಲುವುಗಳನ್ನು ದಾಖಲಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್’ಗೆ ಈಗ ಪ್ರಬಲ ಪ್ರತಿಸ್ಪರ್ಧಿಯೇ ಇಲ್ಲದಂತಾಗಿದೆ.  ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಸಂ ಪಾರ್ಟಿ (ಟಿಡಿಪಿ)ಯು ಮೂರು ZPTCಗಳಲ್ಲಿ ಹಾಗೂ 675MPTC ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಪಾಲಿಗೆ ಕೇವಲ 23MPTC ಸ್ಥಾನಗಳು ಲಭಿಸಿದ್ದು ZPTCಯಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆ.  ರಾಜ್ಯದಲ್ಲಿ ಒಟ್ಟು 660ZPTC ಹಾಗೂ 10,047MPTC ಕ್ಷೇತ್ರಗಳಿವೆ. ಅವುಗಳಲ್ಲಿ ಸುಮಾರು 126ZPTC ಹಾಗೂ 2,371MPTC ಸ್ಥಾನಗಳಿಗೆ ಮಾರ್ಚ್ 2020ರಲ್ಲಿ ಅವಿರೋಧ ಆಯ್ಕೆ ನಡೆದಿತ್ತು.  ರಾಜ್ಯದಲ್ಲಿ ಮಹಿಳೆಯರಿಗೆ, ಹಿಂದುಳಿದ ಸಮುದಾಯಗಳಿಗೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿಗೆ ರಾಜ್ಯ ಸರ್ಕಾರ ರೂಪಿಸಿದ ಯೋಜನೆಗಳೇ ಈ ಗೆಲುವಿಗೆ ಕಾರಣ ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿದೆ. 

Read moreDetails

ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿಯು ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದೆ. ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಟಿಟಿಡಿಯ ಆಡಳಿತ ಮಂಡಳಿಗೆ ಬರೋಬ್ಬರಿ 81 ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಇರುವ ಸಚಿವರ ಸಂಖ್ಯೆ ಪ್ರಧಾನಿ ಮೋದಿ ಸೇರಿ 78.  81 ಜನರ ಆಡಳಿತ ಮಂಡಳಿಯಲ್ಲಿ 29 ಜನ ಸದಸ್ಯರು ಹಾಗೂ 52 ಜನ ವಿಶೇಷ ಆಹ್ವಾನಿತರು ಇರಲಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಟಿಟಿಡಿಗೆ ಇಷ್ಟು ದೊಡ್ಡ ಮಟ್ಟದ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಕಳೆದ ಆಡಳಿತ ಮಂಡಳಿಯಲ್ಲಿ 40 ಸದಸ್ಯರಿದ್ದರು.  ಇಂಡಿಯಾ ಸಿಮೆಂಟ್ಸ್ ಚೇರ್ಮನ್ ಎನ್ ಶ್ರೀನಿವಾಸನ್, ಮೈ ಹೋಮ್ ಗ್ರೂಪ್ ಚೇರ್ಮನ್ ಜೆ ರಾಮೇಶ್ವರ್ ರಾವ್, ಹಿಟೆರೋ ಗ್ರೂಪ್ ಚೇರ್ಮನ್ ಬಿ ಪಾರ್ಥಸಾರಥಿ ರೆಡ್ಡಿ ಅವರು ಹೊಸ ಟಿಟಿಡಿ ಟ್ರಸ್ಟ್ ಮಂಡಳಿಗೆ ಮರು ಆಯ್ಕೆಯಾಗಿದ್ದಾರೆ. ಆಂಧ್ರದ ನೆರೆ ರಾಜ್ಯವಾದ ತೆಲಂಗಾಣದಿಂದ ಟಿಟಿಡಿಗೆ ಏಳು ಜನ ಸದಸ್ಯರನ್ನು ನೇಮಿಸಲಾಗಿದೆ. ಕಳೆದ ಬಾರಿ ಒಂಬತ್ತು ಸ್ಥಾನಗಳನ್ನು ನೀಡಲಾಗಿತ್ತು.  ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಪ್ರಭಾವಿ ನಾಯಕರು ಹಾಗೂ ಉದ್ಯಮಿಗಳು ಇನ್ನಿಲ್ಲದಂತೆ ಲಾಬಿ ನಡೆಸಿದ್ದರು. ಇವರ ಒತ್ತಡಕ್ಕೆ ಮಣಿದು ಸರ್ಕಾರ ಆದಷ್ಟು ಜನರನ್ನು ಆಡಳಿತ ಮಂಡಳಿಗೆ ಸೇರಿಸುವ ನಿರ್ಧಾರ ತಾಳಿದೆ.  ಈ ಕುರಿತಾಗಿ ಸರ್ಕಾರ ಮೂರು ಆದೇಶಗಳನ್ನು ಹೊರಡಿಸಿತ್ತು. ಮೊದಲ ಆದೇಶದಲ್ಲಿ 29 ಜನ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ನಂತರ ತಿರುಪತಿ ಶಾಸಕ ಭುಮನ ಕರುಣಾಕರ ರೆಡ್ಡಿ ಹಾಗೂ ಬ್ರಾಹ್ಮಣ ಕೋಆಪರೇಷನ್ ಚೇರ್ಮನ್ ಆಗಿರುವ ಸುಧಾಕರ ಅವರನ್ನು ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿತ್ತು. ಮೂರನೇ ಆದೇಶದಲ್ಲಿ ಇನ್ನೂ ಐವತ್ತು ಜನರನ್ನು ವಿಶೇಷ ಆಹ್ವಾನಿತರಾಗಿ ನೇಮಿಸುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದರೆ, ಇವರಿಗೆ ಮತದಾನದ ಹಕ್ಕನ್ನು ನೀಡಲಾಗಿಲ್ಲ.  ಆಡಳಿತ ಮಂಡಳಿಯಲ್ಲಿ ಆಂಧ್ರಪ್ರದೇಶದ 10, ತೆಲಂಗಾಣದ 7, ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರದಿಮದ ತಲಾ ಇಬ್ಬರು, ಗುಜರಾತ್, ಪಶ್ಚಿಮ ಬಂಗಾಳ ಹಾಗು ಪುದುಚೆರಿಯಿಂದ ತಲಾ ಒಬ್ಬರು ಸದಸ್ಯರನ್ನು ನೇಮಿಸಲಾಗಿದೆ.  ಈ ಆಡಳಿತ ಮಂಡಳಿಯು ಈವರೆಗಿನ ಅತೀ ದೊಡ್ಡ ಮಂಡಳಿ ಆಗಿರುವುದರಿಂದ, ಸಭೆ ನಡೆಯುವ ಸಂದರ್ಭದಲ್ಲಿ ಇವರಿಗೆ ವಸತಿ, ವಾಹನ ಹಾಗೂ ಸಭಾಭವನದ ವ್ಯವಸ್ಥೆಗೆ ಮತ್ತಷ್ಟು ಹೊರೆ ಬೀಳಲಿದೆ. 

Read moreDetails

ಮಹಿಳಾ ಖೈದಿಗಳ ಕುರಿತು ಇರುವ ತಪ್ಪು ಕಲ್ಪನೆ ತೊಲಗಿಸಲು ಯೋಜನೆ ರೂಪಿಸಬೇಕು- ಸಿಜೆಐ ರಮಣ

ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುವ ಮಹಿಳೆಯರ ಕುರಿತು ಸಮಾಜದಲ್ಲಿ ಆಳವಾದ ಪೂರ್ವಾಗ್ರಹ ಪೀಡಿತ ಆಲೋಚನೆ ಹಾಗೂ ತಾರತಮ್ಯವಿದೆ. ಅವರನ್ನು ಕಳಂಕಿತರಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ಮಹಿಳೆಯರು ಸಮಾಜದೊಂದಿಗೆ ಮರುಸಂಘಟಿತರಾಗಲು ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ, ಎಂದು ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಹೇಳಿದ್ದಾರೆ.  ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ 32ನೇ ಕೇಂದ್ರೀಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು . ಬಂಧನಕ್ಕೆ ಒಳಗಾಗದ ಮಹಿಳೆಯರು ಕಳಂಕಿತರು ಎಂಬ ಭಾವನೆ ಸಮಾಜದಲ್ಲಿ ಮೂಡಿದ್ದು ಇದರಿಂದಾಗಿ ಅವರಿಗೆ ಪುರ್ನವಸತಿ ಕಲ್ಪಿಸುವುದು ನಿಜಕ್ಕೂ ಸವಾಲಿನ ವಿಚಾರವಾಗಿದೆ. ಭಾರತ ಎಲ್ಲರ ಹಿತ ಕಾಯುವ ದೇಶವಾಗಿದ್ದರಿಂದ ಮಹಿಳಾ ಖೈದಿಗಳನ್ನು ಸಮಾಜದೊಂದಿಗೆ ಪುನರ್ ಸಂಯೋಜಿಸಲು ಸೇವೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಪುರುಷ ಖೈದಿಗಳಂತೆ ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕಾಗಿದೆ, ಎಂದು ಅವರು ಹೇಳಿದ್ದಾರೆ.  “ಮಹಿಳಾ ಖೈದಿಗಳು ಬಿಡುಗಡೆಯಾದ ಬಳಿಕ ಅವರಿಗೆ ತಾರತಮ್ಯವಿಲ್ಲದ ಶಿಕ್ಷಣ, ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಗೌರವಧನ ಸಿಗುವಂತಹ ಉದ್ಯೋಗವನ್ನು ಪಡೆಯಲು ಯೋಜನೆ ರೂಪಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.  ಇದೇ ವೇಳೆ ಮಾತನಾಡಿರುವ ಜಸ್ಟೀಸ್ ಲಲಿತ್, ಕರೋನಾ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿವೆ. ಜ್ಯುವೆನೈಲ್ ಹೋಮ್’ಗಳಲ್ಲಿನ ಪರಿಸ್ಥಿತಿ ಊಹೆಗೂ ನಿಲುಕದಷ್ಟರ ಮಟ್ಟಿಗೆ ಬಿಗಡಾಯಿಸಿದೆ. ಕೇವಲ ಒಬ್ಬ ಶಿಕ್ಷಕ ವೀಡಿಯೋ ತರಗತಿಗಳನ್ನು ನಡೆಸುವುದರ ಮೂಲಕ ಪರಿಣಾಮಕಾರಿ ಶಿಕ್ಷಣ ನೀಡಲು ಅಸಾಧ್ಯ. ಅದರಲ್ಲೂ ವಿವಿಧ ವಯೋಮಿತಿಯ ಮಕ್ಕಳಿರುವ ಕಡೆ ಇದು ಕಷ್ಟ ಸಾಧ್ಯ, ಎಂದು ಹೇಳಿದ್ದಾರೆ.  “ಈ ಅಂತರವನ್ನು ನಿಭಾಯಿಸಲು ಹಾಗೂ ಸಮಾಜದಲ್ಲಿ ತಳಮಟ್ಟದ ಬದಲಾವಣೆಯನ್ನು ತರಲು ಕಾನೂನು ವಿದ್ಯಾರ್ಥಿಗಳು ಮೂರು ಅಥವಾ ನಾಲ್ಕು ತಾಲ್ಲೂಕುಗಳನ್ನು ದತ್ತು ಪಡೆದು ಕಾರ್ಯ ನಿರ್ವಹಿಸಬೇಕು. ಕಾನೂನು ವಿದ್ಯಾರ್ಥಿಗಳ ಸೇವೆ ಹಾಗೂ ಅವರ ಕೌಶಲ್ಯ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು,” ಎಂದು ಜಸ್ಟೀಸ್ ಲಲಿತ್ ಹೇಳಿದ್ದಾರೆ.  ಶನಿವಾರದಂದು 33 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕ ಅದಾಲತ್ ಮೂಲಕ ಸುಮಾರು 15 ಲಕ್ಷಗಳಿಗೂ ಅಧಿಕ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ತರವಾದ ಸಾಧನೆ ಎಂದು ಗುರುತಿಸಿಕೊಂಡಿದೆ. 

Read moreDetails

ಮಾತು ಮರೆತ  ಪ್ರಧಾನಿ ಮೋದಿ; ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಗೋಳು

ಕರೋನಾದಂತಹ ಸಂಕಷ್ಟದ ಸಮಯದಲ್ಲಿ ವೈದ್ಯರು ಹಾಗೂ ದಾದಿಯರು ಯಾವ ರೀತಿ ಯೋಧರಂತೆ ಸೇವೆ ಸಲ್ಲಿಸಿದರೋ, ಅದೇ ರೀತಿ ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಕೂಡಾ ಲಾಕ್ಡೌನ್ ಹಾಗೂ ಕರೋನಾ ಭಯದ ನಡುವೆಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆಲ್ಲಾ ಕರೋನಾ ವಾರಿಯರ್ಸ್ ಎಂಬ ‘ಬಿರುದು’ ಬಿಟ್ಟರೆ ಬೇರೆ ಯಾವ ರೀತಿಯ ಸವಲತ್ತುಗಳು ಕೂಡಾ ದಕ್ಕಲಿಲ್ಲ. ಇಂದಿಗೂ ದೇಶದ ಮೂಲೆ ಮೂಲೆಗಳಲ್ಲಿ ತಮ್ಮ ಹಕ್ಕಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಮಾತ್ರ ಎಂದಿನಂತೆ ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿ ಕುಳಿತಿದೆ.  ರೈತ ಆಂದೋಲನದ ಕೇಂದ್ರ ಬಿಂದುವಾದ ದೆಹಲಿಯಲ್ಲಿ ಮಂಗಳವಾರದಂದು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಗೌರವಧನ ಹೆಚ್ಚಳ, ಬಾಕಿ ಉಳಿದಿರುವ ಗೌರವಧನ ಬಿಡುಗಡೆ ಸೇರಿದಂತೆ ಹಲವು ದೀರ್ಘ ಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹೇರುವ ಪ್ರಯತ್ನ ಮಾಡಿದ್ದರು.  ಕರ್ನಾಟಕದಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಹಾಗೂ ಒಕ್ಕೂಟಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರು ಒಕ್ಕೊರಲಿನಿಂದ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಗೌರವ’ದಿಂದ ಸಲ್ಲಬೇಕಾದ ಗೌರವಧನವನ್ನು ಹೆಚ್ಚಿಸುತ್ತ ಸರ್ಕಾರ ಗಮನವೇ ನೀಡುತ್ತಿಲ್ಲ.  ಪ್ರಧಾನಿ ಮೋದಿಯವರು ಸೆಪ್ಟೆಂಬರ್ 11,2018ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆಸಿದ ಆನ್ಲೈನ್ ಸಂವಾದದಲ್ಲಿ ಶೀಘ್ರವೇ ಗೌರವಧನ ಹೆಚ್ಚಿಸುವುದಾಗಿ ಹೇಳಿದ್ದರು. ಈ ಭರವಸೆಯೂ ಇತರ ಭರವಸೆಗಳಂತೆ ಪೊಳ್ಳಾಗಿಯೇ ಉಳಿದಿದೆ. ಭರವಸೆ ನೀಡಿ ಮೂರು ವರ್ಷಗಳು ಕಳೆದರೂ, ಇನ್ನೂ ಪರಿಷ್ಕೃತ ವೇತನ ದರ ನಿಗದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ.  “ಯಾರಿಗೆ ರೂ. 3,000 ವೇತನ ಲಭಿಸುತ್ತಿದೆಯೋ ಅವರಿಗೆ ರೂ. 4,500 ಹಾಗೂ ಯಾರಿಗೆ ರೂ. 2,200 ಲಭಿಸುತ್ತಿದೆಯೋ ಅವರಿಗೆ ರೂ.3,500ದಷ್ಟು ವೇತನ ಹೆಚ್ಚಳ ಮಾಡಲಾಗುವುದು. ಇದರಂತೆ ಅಂಗನವಾಡಿ ಸಹಾಯಕಿಯರಿಗೂ ಶೇ.50ರಷ್ಟು ವೇತನ ಹೆಚ್ಚಳ ಮಾಡಲಾಗುವುದು,” ಎಂದು ಪ್ರಧಾನಿ ಮೋದಿ ಹೇಳಿದ್ದರು.  ಆದರೆ, ಪ್ರಧಾನಿಯವರ ಭರವಸೆಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿರುವ ದೆಹಲಿ ಅಂಗನವಾಡಿ ಕಾರ್ಯರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯ ಸದಸ್ಯೆ ವೃಷಾಲಿ ಅವರು, ಕೆಲವು ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ಗೌರವಧನವನ್ನು ‘ದಾಖಲೆ’ಗಳಲ್ಲಿ ಹೆಚ್ಚಿಸಲಾಗಿದೆ. ಆದರೆ, ಆ ಹಣ ಇನ್ನೂ ಕಾರ್ಯಕರ್ತೆಯರ ಕೈ ಸೇರಿಲ್ಲ. ಆಗಸ್ಟ್ 2021ರ ಹೊತ್ತಿಗೆ, ಅಂಗನವಾಡಿ ಕಾರ್ಯಕರ್ತೆಯರ ರೂ.51,000 ಹಾಗೂ ಸಹಾಯಕಿಯರ ರೂ.25,500 ಬಾಕಿ ಹಣ ಇನ್ನೂ ಪಾವತಿಯಾಗಿಲ್ಲ, ಎಂದಿದ್ದಾರೆ.  ಕಾರ್ಯಕರ್ತೆಯರ ಇನ್ನೊಂದು ಪ್ರಮುಖ ಬೇಡಿಕೆ ಏನೆಂದರೆ, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ನೌಕರರೆಂದು ಪರಿಗಣಿಸಬೇಕು. ಎಲ್ಲಾ ಕಾರ್ಯಕರ್ತೆಯರಿಗೂ ಹಾಗೂ ಸಹಾಯಕಿಯರಿಗೂ ಇಎಸ್ಐ, ಪಿಎಫ್ ಸೇರಿದಂತೆ ಪಿಂಚಣಿ ಸೌಲಭ್ಯವನ್ನು ಕೂಡಾ ನೀಡಬೇಕು.  ಈ ವಿಚಾರವಾಗಿ ಕರ್ನಾಟಕದಲ್ಲಿಯೂ ಕಳೆದ ಹಲವು ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. 2016ರ ನಂತರ ನಿವೃತ್ತರಾದ ಕಾರ್ಯಕರ್ತೆಯರಿಗೆ ಇನ್ನೂ ಎನ್ ಪಿ ಎಸ್ ಹಾಗೂ ಪಿಎಫ್ ನೀಡಲಾಗಿಲ್ಲ. ಹದಿನೈದು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾರ್ಯಕರ್ತೆಯರ ಗೌರವಧನ ಇನ್ನೂ ಹತ್ತು ಸಾವಿರ ಮಾತ್ರವೇ ಇದೆ.  ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಸರ್ಕಾರದ ಅವಗಣನೆಗೆ ಒಳಗಾಗುತ್ತಿರುವ ಅಂಗನವಾಡಿ ನೌಕರರ ಸಂಕಷ್ಟಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕಾಗಿದೆ. ಕರೋನಾ ಸಂಕಷ್ಟದ ವೇಳೆ ಸೇವೆ ಸಲ್ಲಿಸಿ, ಸೋಂಕಿನಿಂದ ಮೃತಪಟ್ಟ ಕಾರ್ಯಕರ್ತೆಯರ ಕುಟುಂಬದ ನೆರವಿಗೆ ಸರ್ಕಾರ ಬರಬೇಕಿದೆ. ಕೇವಲ ಬಾಯಿ ಮಾತಿನ ಚಪಲಕ್ಕೆ ಹಾಗೂ ಪ್ರಚಾರದ ತೆವಲಿಗೆ ಬಿದ್ದು ಅಂಗನವಾಡಿ ಕಾರ್ಯಕರ್ತೆಯನ್ನು ಕರೋನಾ ವಾರಿಯರ್ಸ್ ಎಂದು ಹೊಗಳುವ ಬದಲು, ಅವರ ಪಾಲಿನ ಹಕ್ಕುಗಳನ್ನು ಅವರಿಗೆ ನೀಡಿದ್ದಲ್ಲಿ, ಅದು ನಿಜವಾಗಿಯೂ ಅಂಗನವಾಡಿ ಕಾರ್ಕರ್ತೆಯರಿಗೆ ನೀಡುವ ಗೌರವವಾಗುವುದು. 

Read moreDetails

ತಾಲಿಬಾನ್: ಅತಂತ್ರದಲ್ಲಿ ಮಹಿಳಾ ಸ್ವಾತಂತ್ರ್ಯ

“ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ.” ಇಂದು ಅಫ್ಘಾನಿಸ್ತಾನದಲ್ಲಿರುವ ಬಹುತೇಕ ಮಹಿಳೆಯರು, ತಮ್ಮ ವ್ಯಾಸಂಗ ಪ್ರಮಾಣಪತ್ರಗಳನ್ನು ಸುಟ್ಟು ಹಾಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು, ಬಹಿರಂಗವಾಗಿ ತೆಗೆದಂತಹ ಫೋಟೋಗಳನ್ನು ಅಳಿಸಿ ಹಾಕುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ನಡೆಸಿ ಆರ್ಥಿಕ ಸ್ವಾವಲಂಬನೆಯತ್ತ ದೃಷ್ಟಿ ನೆಟ್ಟಿದ್ದ ಮಹಿಳೆಯರು, ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಯಲ್ಲಿಟ್ಟಿದ್ದ ಬುರ್ಖಾ ಹುಡುಕುವತ್ತ ಗಮನ ನೀಡಿದ್ದಾರೆ.  ಕಳೆದ ಎರಡು ತಿಂಗಳಿನಿಂದ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ಆ ದೇಶವನ್ನು ಎರಡು ದಶಕಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿದೆ. ಮುಖ್ಯವಾಗಿ, ಅಲ್ಲಿನ ಮಹಿಳೆಯರು ತಮಗಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡು, ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಎಲ್ಲಿ ಕಮರಿ ಹೋಗುವುದೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.  1996ರಿಂದ 2001ರ ನಡುವಿನ ತಾಲಿಬಾನ್ ಆಡಳಿತವನ್ನು ಮತ್ತೆ ನೆನಪಿಸಿಕೊಂಡರೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಮಹಿಳೆಯರಿಗೆ ಕೆಲಸಕ್ಕೆ ಹೋಗುವ ಸ್ವಾತಂತ್ರ್ಯ ಇರಲಿಲ್ಲ. ಮನೆಯಿಂದ ಹೊರಗೆ ಬರುವಾಗ ತಮ್ಮ ಮುಖವನ್ನು ಇಸ್ಲಾಮಿಕ್ ಬುರ್ಖಾ ಧರಿಸಿ ಮುಚ್ಚಬೇಕಿತ್ತು. ಮನೆಯ ಗಂಡು ಸದಸ್ಯರ ಸಹಾಯದೊಂದಿಗೆ ಮಾತ್ರ ಮನೆಯಿಂದ ಹೊರ ಬರಬೇಕಿತ್ತು. ಇಂತಹ ಕರಾಳ ದಿನಗಳನ್ನು ನೋಡಿರುವ ಅಲ್ಲಿನ ಮಹಿಳೆಯರು, ಮತ್ತೆ ಸ್ವಾತಂತ್ರ್ಯದ ಹರಣಕ್ಕೆ ಸಾಕ್ಷಿಯಾಗಿದ್ದಾರೆ.  ಇಂದಿಗೂ 90ರ ದಶಕದ ಅತ್ಯಂತ ಕ್ರೂರ ಶಿಕ್ಷೆಗಳಾದ ಛಡಿಯೇಟು ಹಾಗೂ ಕಲ್ಲುಗಳನ್ನು ಎಸೆಯುವುದನ್ನು ಮಹಿಳೆಯರು ಇನ್ನೂ ಮರೆತಿಲ್ಲ. ಇಂತಹ ಕಠೋರವಾದ ಇಸ್ಲಾಮಿಕ್ ನಿಯಮಗಳನ್ನು ಜಾರಿಗೆ ತರಲಾಗಿತ್ತು.  ತಮ್ಮ ಮೊತ್ತ ಮೊದಲ ಸುದ್ದಿಗೋಷ್ಟಿಯಲ್ಲಿ ಮಹಿಳೆಯರಿಗೆ ‘ಇಸ್ಲಾಮಿಕ್ ನಿಯಮಗಳ’ ಅಡಿಯಲ್ಲಿ ಶಿಕ್ಷಣ ಹಾಗೂ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗುವುದು, ಎಂದು ತಾಲಿಬಾನ್ ಹೇಳಿದೆ. ಆದರೆ, ತಾಲಿಬಾನ್ ಈ ಹಿಂದೆ ದೇಶದ ಜನರೊಂದಿಗೆ ನಡೆದುಕೊಂಡಿರುವ ಕ್ರೂರ ರೀತಿಯಿಂದ ಯಾರೂ ಈ ಮಾತುಗಳನ್ನು ನಂಬಲು ಸಿದ್ದರಿಲ್ಲ. ಮಿಗಿಲಾಗಿ, ಕೆಲಸಕ್ಕೆಂದು ಹೋದ ಮಹಿಳೆಯರನ್ನು ವಾಪಾಸ್ ಮನೆಗೆ ಕಳುಹಿಸಿರುವ ತಾಜಾ ಉದಾಹರಣೆಗಳು ಕಣ್ಣ ಮುಂದಿರುವಾಗ, ಬಂದೂಕಿನಿಂದ ಶಾಂತಿ ಸ್ಥಾಪನೆಗೆ ಹೊರಟವರ ಮಾತುಗಳನ್ನು ನಂಬುವುದಾದರೂ ಹೇಗೆ?  ಅಫ್ಘಾನಿಸ್ತಾನದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದ ಪತ್ರಕರ್ತೆಯೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಾಲಿಬಾನ್ ಪಡೆಗಳು ಕಾಬೂಲನ್ನು ವಶಪಡಿಸಿಕೊಂಡ ಕೇವಲ ಮೂರು ದಿನಗಳ ನಂತರ ಸಂಪೂರ್ಣ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ, ಎಂದು ಅವರು ಹೇಳಿದ್ದಾರೆ.  “ನಾನು ತಾಲಿಬಾನಿಗಳ ವಿರುದ್ದ, ಅವರ ಕಾರ್ಯಾಚರಣೆಗಳ ಕುರಿತು ನೂರಾರು ವರದಿಗಳನ್ನು ಮಾಡಿದ್ದೆ. ಈಗ ಅವರು ನನ್ನ ಗುರುತು ಪತ್ತೆ ಹಚ್ಚಿದರೆ ಏನು ಮಾಡುತ್ತಾರೆ ಎಂದೂ ತಿಳಿದಿಲ್ಲ. ನನ್ನ ಅಸ್ಮಿತೆಯನ್ನೇ ಬಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ,” ಎಂದು ಅವರು ರಾಯಿಟರ್ಸ್’ಗೆ ಹೇಳಿಕೆ ನೀಡಿದ್ದಾರೆ.  “ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ,” ಎಂದು ಅವರು ಕಣ್ಣೀರಿಟ್ಟಿದ್ದಾರೆ.  ಕಾಬೂಲ್’ನಲ್ಲಿ ಸಲೂನ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಮ್ಮ ವ್ಯಾಪಾರವನ್ನು ಮುಚ್ಚಿ ಈಗ ಮನೆಯಲ್ಲಿ ಅವಿತು ಕುಳಿತಿದ್ದಾರೆ.  “ನನ್ನ ಅಂಗಡಿಯಿಂದ ಕನಿಷ್ಟ 24 ಜನರ ಕುಟುಂಬಗಳು ಬದುಕುತ್ತಿದ್ದವು. ಅದು ಕೂಡಾ ಎಲ್ಲಾ ಕೆಲಸಗಾರರು ಮಹಿಳೆಯರಾಗಿದ್ದರು. ಈಗ ಅದು ಇತಿಹಾಸವಾಗಿದೆ. ತಾಲಿಬಾನ್ ಭಯದಿಂದ ಮಹಿಳೆಯರು ಮನೆಯಿಂದ ಹೊರಹೋಗಲೂ ಅಂಜುತ್ತಿದ್ದಾರೆ,” ಎಂದು ಆ ಮಹಿಳೆ ಹೇಳಿದ್ದಾರೆ.  ಪ್ರತಿರೋಧದ ಆರಂಭ ತಾಲಿಬಾನ್ ವಿರುದ್ದ ಈಗಾಗಲೇ ಮಹಿಳೆಯರ ಪ್ರತಿರೋಧ ಆರಂಭವಾಗಿದೆ. ಮಹಿಳೆಯರ ಒಂದು ಸಣ್ಣ ಗುಂಪು ಕಾಬೂಲ್’ನ ಬೀದಿಗಳಲ್ಲಿ ತಾಲಿಬಾನ್ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿದೆ.  “ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲಿನ ಮಹಿಳೆಯರ ಹೃದಯದಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸಲು ನಾವು ಪ್ರತಿಭಟಸುತ್ತಿದ್ದೇವೆ. ಭಯದಿಂದ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಹಿಳೆಯೂ ನಮ್ಮೊಂದಿಗೆ ಕೈಜೋಡಿಸಬೇಕು. ದೇವರಿಚ್ಚೆ ಇದ್ದರೆ ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸುತ್ತೇವೆ. ಇನ್ನು ಹೆಚ್ಚಿನ  ಮಹಿಳೆಯರು ನಮ್ಮೊಂದಿಗೆ ಸೇರುತ್ತಾರೆ,” ಎಂದು ಪ್ರತಿಭನಾನಿರತ ಮಹಿಳೆ ಸೂದಾವರ್ ಕಬೀರಿ ಹೇಳಿದ್ದಾರೆ.  https://twitter.com/missnzl/status/1427914119370264580 ಕಳೆದ ಇಪ್ಪತ್ತು ವರ್ಷಗಳಲ್ಲಿ ಅಫ್ಘಾನ್ ಮಹಿಳೆಯರು ಪಡೆದಿರುವ ಧ್ವನಿಯನ್ನು ಈಗ ಮೌನವಾಗಿಸಲು ನಾವು ಬಿಡುವುದಿಲ್ಲ ಎಂದು ತಾಲಿಬಾನಿಗಳ ಕ್ರೌರತೆಯ ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ.  90ರ ದಶಕದ ಕರಾಳ ನೆನಪುಗಳನ್ನು ಮೀರಿ ನಿಲ್ಲುವಂತಹ ಪ್ರಗತಿಯನ್ನು ಅಫ್ಘಾನ್ ಮಹಿಳೆಯರು ಸಾಧಿಸಿದ್ದರು. ಶಿಕ್ಷಣ, ವಿಜ್ಞಾನ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಈಗ ಆ ಪ್ರಗತಿ ಮತ್ತೆ ಅಧಃಪತನದತ್ತ ಸಾಗುತ್ತಿದೆ. ಮಹಿಳಾ ಸ್ವಾತಂತ್ರ್ಯವೆಂಬುದು ಕೇವಲ ಕನಸಾಗಿ ಉಳಿಯುವ ದಿನಗಳು ಮುಂದೆ ಕಾಣುತ್ತಿವೆ ಎಂಬ ಭಯ ಅಲ್ಲಿನ ಮಹಿಳೆಯರಲ್ಲಿ ಕಾಡುತ್ತಿದೆ.  ಈಗ ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯ ವಿರುದ್ದ ತಾಲಿಬಾನಿನ ಕ್ರೂರ ದೃಷ್ಟಿ ಬೀರುವ ಸಾಧ್ಯತೆಯಿದ್ದರೂ, ತಮ್ಮ ಹಕ್ಕುಗಳಿಗಾಗಿ ಮಹಿಳೆಯರ ಹೊರಾಟ ನಿರಂತರವಾಗಿ ಸಾಗಿದೆ.  “ಅಫ್ಘಾನಿಸ್ತಾನದಲ್ಲಿ 18 ಮಿಲಿಯನ್ ಮಹಿಳೆಯರಿದ್ದಾರೆ. ಅವರೆಲ್ಲರನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸುವುದು ಕಷ್ಟ....

Read moreDetails

‘ಪಂಜರದ ಗಿಣಿ’ಗೆ ಸ್ವಾತಂತ್ರ್ಯ ನೀಡಿ- ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

CBI ಕೇವಲ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿರುವ ಸ್ವಾಯತ್ತ (autonomous) ಸಂಸ್ಥೆಯಾಗಿರಬೇಕೆಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಮಹತ್ತರವಾದ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಆಧೀನದಲ್ಲಿರುವ ಸಿಬಿಐ ಅನ್ನು ಸ್ವತಂತ್ರ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!