ಬೀದರ್:ಮಾ.18: 2022-23ನೇ ಸಾಲಿನಲ್ಲಿ ಬೆಳೆದ ಮಾವು ಹಾಗೂ ಗೋಡಂಬಿ, ಹೂವು ಬಿಡುವ ಹಾಗೂ ಕಾಯಿಕಟ್ಟುವ ಹಂತದಲ್ಲಿ ಇರುತ್ತದೆ. ಈ ಫಸಲಿನ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 20 ರಂದು ಬೆಳಿಗ್ಗೆ 10.30 ಗಂಟೆಗೆ ಸಮಿತಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಜಾನುವಾರು ಸಾಕಾಣಿಕೆ ಸಂಕೀರ್ಣಾ ವಿಭಾಗದ ಮುಂಭಾಗದಲ್ಲಿ, ಪಶು ವೈದ್ಯಕೀಯ ಮಹಾವಿದ್ಯಾಲಯ, ನಂದಿನಗರ, ಬೀದರನಲ್ಲಿ ಜರುಗಿಸಲಾಗುತ್ತಿದೆ. ಷರತ್ತುಗಳು: ಹರಾಜಿನಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಮಾವು ಹಾಗೂ ಕಾಜು ಬೆಳೆದ ಫಸಲಿಗೆ ದರ ನಮೂದಿಸಿ ಮುಚ್ಚಿದ ಲಕೋಟೆಯಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಬೀದರ ಅವರ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸುವುದು.

ಜಾಹಿರ ಲಿಲಾವಿನ ಲಕೋಟೆ ತೆರೆದು ಗರಿಷ್ಠ ದರ ನಮೂದಿಸಿದನು ಗಮನಿಸಿ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು. ಹರಾಜಿನಲ್ಲಿ ಭಾಗವಹಿಸಲು 1000 ರೂ. ಮುಂಗಡ ಹಣವನ್ನು ಸದರಿ ದಿನಾಂಕದAದು ಅಥವಾ ಮುಂಚಿತವಾಗಿ ಭರಿಸಿ ಲಿಲಾವಿನಲ್ಲಿ ಭಾಗವಹಿಸುವುದು. ಹರಾಜುದಾರರು ಲಿಲಾವನ್ನು ಪಡೆದ ನಂತರ ಕಾರ್ಯಾಲಯದ ವೇಳೆಯಲ್ಲಿ ಹಣವನ್ನು ಹಣಕಾಸು ನಿಯಂತ್ರಣಾಧಿಕಾರಿಗಳು, ಪಶು ವೈದ್ಯಕೀಯ ಮಹಾವಿದ್ಯಾಲಯ, ಬೀದರ ಇವರಲ್ಲಿ ಹಣವನ್ನು ಭರಿಸಬೇಕು. ಯಶಸ್ವಿ ಬಿಡುದಾರ ಹಣ ಭರಿಸದಿದ್ದಲ್ಲಿ ಠೇವಣಿಯ ಹಣವನ್ನು ಮುಟ್ಟುಗೊಲು ಹಾಕಲಾಗುವುದು. ಒಂದು ವೇಳೆ ಹರಾಜುದಾರರು ಹಣಕಟ್ಟದೆ ಇದ್ದಲ್ಲಿ ತಮಗೆ ಇಷ್ಟವಿಲ್ಲ ಎಂದು ಪರಿಗಣಿಸಿ ನಂತರ ಕ್ರಮಾಂಕದ ಹೆಸರಿನವಿರಗೆ ಪರಿಗಣಿಸಲಾಗುವುದು. ಯಾವುದೇ ಗಿಡಗಳಿಗೆ ಹಾನಿ ಮಾಡಿದ್ದು ಕಂಡುಬAದರೆ ಆದೇಶವನ್ನು ರದ್ದುಪಡಿಸಲಾಗುವುದು. ಬಹಿರಂಗ ಹರಾಜು ಯಾವುದೇ ಕಾರಣ ನೀಡದೆ ಮುಂದುಡುವ ಅಂಗೀಕರಿಸುವ ಅಥವಾ ರದ್ದುಪಡಿಸುವ ಅಧಿಕಾರ ಕೆಳಗೆ ಸಹಿ ಮಾಡಿರುವವರು ಹೊಂದಿರುತ್ತಾರೆ.
ಪ್ರಯುಕ್ತ ಇಚ್ಚೆಯುಳ್ಳ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿಧಿಸಿರುವ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಲೀಲಾವಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಬೀದರ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.