ಬೆಳಗಾವಿ: ಗುಡುಗು ಸಿಡಿಲು ಸಮೇತ ಸುರಿದ ಭಾರಿ ಮಳೆ ಅನಾಹುತಗಳನ್ನೇ ಸೃಷ್ಟಿ ಮಾಡಿದೆ. ಮಳೆ ಹಾಗು ಸಿಡಿಲಿನ ಹೊಡೆತಕ್ಕೆ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ 12 ಕುರಿಗಳು ಸಾವನ್ನಪ್ಪಿದ್ದು ಅಲ್ಲಲ್ಲಿ ಗಿಡ ಮರಳು ಧರೆಗೆ ಉಳಿಸಿ ಸಂಚಾರ ಅಸ್ತವ್ಯಸ್ತ ವಾಗಿದೆ..

ಚಿಕ್ಕೋಡಿ ಭಾಗದ ರಾಯಬಾಗ ಪಟ್ಟಣದಲ್ಲಿ ಕೆಲಸಕ್ಕೆ ತೆರಳಿದ್ದ ಐವರ ಪೈಕಿ 45 ವರ್ಷದ ಶೋಭಾ ಕುಲಗೋಡೆ ಸಿಡಿಲಿಗೆ ಸಾವನ್ನಪ್ಪಿದ್ದು ಜೊತೆಗಿದ್ದ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ 35 ವರ್ಷದ ಗುರು ಪುಂಡಲೀಕ ಸಾವಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಜೊತೆಗೆ 12 ಕುರಿಗಳು ಸಾವನ್ನಪ್ಪಿವೆ..

ಭಾರಿ ಗಾಳಿ ಮಳೆಯಿಂದ 10ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿದ್ದು, ಚಿಕ್ಕೋಡಿ – ಮೀರಜ್ ರಾಜ್ಯ ಹೆದ್ದಾರಿ ಸಂಚಾರ ಕೂಡ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಅಲ್ಲದೆ ಮರಗಳು ಧರೆಗೆ ಉರುಳಿದ ಪರಿಣಾಮ ರಾಯಬಾಗ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ..