• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ವಿರುದ್ಧ ದಾಳಿ ನಡೆಸಿರುವುದು ಅಕ್ಷಮ್ಯ : ಶಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ..!

ಅಮಿತ್‌ ಶಾ ದಾಳಿಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬ ರಾಹುಲ್‌ ಗಾಂಧಿ ಒತ್ತಾಯಕ್ಕೆ ನನ್ನ ಬೆಂಬಲವೂ ಇದೆ : ಸಿದ್ದರಾಮಯ್ಯ..

ಪ್ರತಿಧ್ವನಿ by ಪ್ರತಿಧ್ವನಿ
July 31, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ವಿರುದ್ಧ ದಾಳಿ ನಡೆಸಿರುವುದು ಅಕ್ಷಮ್ಯ : ಶಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ..!
Share on WhatsAppShare on FacebookShare on Telegram

ಬೆಂಗಳೂರು : ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯ ಜಂತರ್‌ ಮಂತರ್‌ ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಲೆಟ್‌ ಗನ್‌, ರೈಫಲ್‌ಗಳನ್ನು ಬಳಕೆ ಮಾಡಿರುವುದು ಅತ್ಯಂತ ಆಘಾತಕಾರಿ ವಿಚಾರವಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT
Karnataka Cabinet Expansion: ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು..! | Pratidhvani

ಕೆಲವು ಪೊಲೀಸರು ವಿದ್ಯಾರ್ಥಿಗಳನ್ನು ಕಾಲುಕೊಟ್ಟು ಬೀಳಿಸುತ್ತಿರುವುದು, ಕೆಲವರು ಮಹಿಳೆಯರು, ಅಪ್ರಾಪ್ತರು ಎಂದು ಲೆಕ್ಕಿಸದೆ ಕಪಾಳಕ್ಕೆ ಹೊಡೆಯುತ್ತಿರುವುದು, ವಿದ್ಯಾರ್ಥಿನಿಯರಿಗೆ ಲಾಠಿಯಿಂದ ಹಿಂದಿನಿಂದ ತಿವಿಯುತ್ತಿರುವುದು, ಜೇಬಿನಲ್ಲಿ ಗಾಂಜಾ ಇಟ್ಟು ಪ್ರಕರಣ ದಾಖಲಿಸುವುದಾಗಿ ವಿದ್ಯಾರ್ಥಿಗಳನ್ನು ಹೆದರಿಸುತ್ತಿರುವ ವಿಡಿಯೋಗಳನ್ನು ನೋಡಿದ್ದೇವೆ ಎಂದು ಕಿಡಿಕಾರಿದ್ದಾರೆ.

ಸಮವಸ್ತ್ರ ಧರಿಸದ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಹೊಡೆಯುತ್ತಿರುವುದು, ಮೊಳೆಗಳಿರುವ ಲಾಠಿಗಳನ್ನು ಬಳಕೆ ಮಾಡುತ್ತಿರುವುದು, ಪೊಲೀಸರೇ ವಾಹನಗಳ ಗಾಜುಗಳನ್ನು ಪುಡಿ ಮಾಡುತ್ತಿರುವುದು ಹೀಗೆ ಸಾಕಷ್ಟು ರೀತಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ದೃಶ್ಯಗಳನ್ನು ವೀಕ್ಷಿಸಿದ್ದೇವೆ. ಹೀಗೆ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ವಿರುದ್ಧ ದಾಳಿ ನಡೆಸಿರುವುದು ಅಕ್ಷಮ್ಯ ಎಂದು ಸಿದ್ದರಾಮಯ್ಯ ಖಂಡಿಸಿದ್ದಾರೆ.

ಇದನ್ನೂ ಓದಿ : ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ : ಹಣ ಎಲ್ಲಿಂದ ಬಂತು?

ದೆಹಲಿ ಪೊಲೀಸರು ಗೃಹ ಇಲಾಖೆಯ ಸುಪರ್ದಿಯಲ್ಲಿ ಬರುವುದರಿಂದ ಸಚಿವಅಮಿತ್‌ ಶಾ ನೇರ ಹೊಣೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ದಾಳಿ ನಡೆಸಲು ಅಮಿತ್‌ ಶಾ ಅವರೇ ಆದೇಶ ನೀಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಅವರು ಆದೇಶ ಮಾಡಿಲ್ಲದಿದ್ದರೆ ಬೇರೆ ಯಾರು ಮಾಡಿರುತ್ತಾರೆ? ಅಮಿತ್‌ ಶಾ ಅವರ ಗಮನಕ್ಕೆ ಬಾರದಂತೆ ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟ್‌ ಅವರೇ ನೇರವಾಗಿ ಆದೇಶಿಸಿದ್ದಾರೆ ಎಂದಾದರೆ ಗೃಹಸಚಿವರು ಅಸಮರ್ಥ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅಮಿತ್‌ ಶಾ ದಾಳಿಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬ ರಾಹುಲ್‌ ಗಾಂಧಿ ಅವರ ಒತ್ತಾಯಕ್ಕೆ ನನ್ನ ಬೆಂಬಲವೂ ಇದೆ. ಉಪವಾಸ ಸತ್ಯಾಗ್ರಹ ನಡೆಸುವುದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ನ್ಯಾಯ ಕೇಳುವ ವಿದ್ಯಾರ್ಥಿಗಳನ್ನು ಭಯೋತ್ಪಾದಕರಿಗಿಂತ ಕಡೆಯಾಗಿ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕುದಾದುದ್ದಲ್ಲ ಎಂದು ಸಿದ್ದರಾಮಯ್ಯ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

Tags: Abhijeet DipkeAmit ShahBJP Governmentcongress karnatakaNarendra ModisiddaramaiahStudents Protestunion home minister
Previous Post

ದೇಶದ ಅತ್ಯಂತ ಶ್ರೀಮಂತ ಸಿಎಂ ಡಿ.ಕೆ. ಶಿವಕುಮಾರ್; ಎಡಿಆರ್ ವರದಿಯಲ್ಲಿ ಬಹಿರಂಗವಾದ ಆಸ್ತಿ ವಿವರ!

Next Post

BIG BREAKING : ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಶುಭ ಶುಕ್ರವಾರ ; ಕೊಲೆ ಕೇಸ್‌ನಲ್ಲಿ ಜಾಮೀನು..!

Related Posts

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ : ಸಮಾಜಘಾತುಕ ಶಕ್ತಿಗಳ ಬಳಕೆ ; ಗುಡುಗಿದ ಸಿಎಂ ಡಿಕೆಶಿ..
Top Story

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ : ಸಮಾಜಘಾತುಕ ಶಕ್ತಿಗಳ ಬಳಕೆ ; ಗುಡುಗಿದ ಸಿಎಂ ಡಿಕೆಶಿ..

by ಪ್ರತಿಧ್ವನಿ
September 13, 2026
0

ಶಾಂತಿಯುತ ಗಣೇಶ ಹಬ್ಬ ಆಚರಣೆ ಖಾತರಿಗೆ ಪೊಲೀಸರಿಗೆ ಸೂಚನೆ.. ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ.. ಬೆಂಗಳೂರು :  ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು,...

Read moreDetails
ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

September 13, 2026
730 ನಕಲಿ ಐಎಸ್‌ಐ ಹೆಲ್ಮೆಟ್‌ ಜಪ್ತಿ: ಖರೀದಿಸುವ ಮುನ್ನ  ಇದನ್ನು ಪರಿಶೀಲಿಸಿ!

730 ನಕಲಿ ಐಎಸ್‌ಐ ಹೆಲ್ಮೆಟ್‌ ಜಪ್ತಿ: ಖರೀದಿಸುವ ಮುನ್ನ ಇದನ್ನು ಪರಿಶೀಲಿಸಿ!

September 12, 2026
ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು; ಭಾರತದ ಭದ್ರತಾ ಮಂಡಳಿ ಬೇಡಿಕೆಗೆ ಬ್ರಿಕ್ಸ್ ಬೆಂಬಲ

ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು; ಭಾರತದ ಭದ್ರತಾ ಮಂಡಳಿ ಬೇಡಿಕೆಗೆ ಬ್ರಿಕ್ಸ್ ಬೆಂಬಲ

September 12, 2026
ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’

September 12, 2026
Next Post
BIG BREAKING : ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಶುಭ ಶುಕ್ರವಾರ ; ಕೊಲೆ ಕೇಸ್‌ನಲ್ಲಿ ಜಾಮೀನು..!

BIG BREAKING : ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಶುಭ ಶುಕ್ರವಾರ ; ಕೊಲೆ ಕೇಸ್‌ನಲ್ಲಿ ಜಾಮೀನು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada