ಬೆಳಗಾವಿಯಲ್ಲಿ (Belagavi) ಮರಾಠಿಗರ ಪುಂಡಾಟಿಕೆ, ಗೂಂಡಾ ವರ್ತನೆ, ಪುಡಿ ರೌಡಿತನ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಮತ್ತೆ ಕನ್ನಡಿಗರ ಮೇಲೆ ಗೂಂಡಾಗಿರಿ ಮೆರೆದಿರುವ ಪುಂಡರು ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.

ಹೌದು ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರು ಗೂಂಡಾಗಿರಿ ನಡೆಸಿದ್ದಾರೆ. ಕನ್ನಡ ಮಾತನಾಡಿದ ಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ (Jayavanta nidagalkar) ಮೇಲೆ ಮರಾಠಿ ಗೂಂಡಾಗಳು ದಾಳಿ ನಡೆಸಿದ್ದು , ರಕ್ತ ಬರುವಂತೆ ಹೊಡೆದಿದ್ದಾರೆ.
ಇಂದು ಬೆಳಗಾವಿಯ ಖಾನಾಪುರದ ಜಾಂಬೋಡಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಈ ಘಟನೆಯ ಹಿನ್ನೆಲೆ ಬೆಳಗಾವಿಯಲ್ಲಿ ಸಂಪೂರ್ಣ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕೆಲವೇ ಕೆಲ ದಿನಗಳ ಹಿಂದಷ್ಟೇ KSRTC ಬಸ್ ಕಂಡಕ್ಟರ್ ಒಬ್ಬರು ಕನ್ನಡ ಬರೋದಿಲ್ವಾ, ಕನ್ನಡ ಮಾತನಾಡು ಎಂದಿದ್ದಕ್ಕೆ ಬಸ್ ನಿಲ್ಲಿಸಿದ ಗೂಂಡಗಳು ಹಲ್ಲೆ ನಡೆಸಿದ್ದರು.