ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ಪಡೆ ವಾಹನಗಳ ಮೇಲೆ ಕಲ್ಲು ಹಾಗೂ ಬಡಿಗೆಗಳಿಂದ ದಾಳಿ ಮಾಡಿರುವ ಘಟನೆ ರಾಜ್ಯ ರಾಜಧಾನಿ ಪಾಟ್ನಾದ ಗೌರಿಚೌಕ್ನಲ್ಲಿ ನಡೆದಿದೆ.
ಭಾನುವಾರ ಸಂಜೆ ಘಟನೆ ನಡೆದಿದ್ದು 35 ಮಂದಿಯ ತಂಡವೊಂದು ಏಕಾಏಕಿ ಬೆಂಗಾವಲು ಪಡೆ ವಾಹನಗಳ ಮೇಲೆ ಮನಸ್ಸೋಇಚ್ಚೆ ದಾಳಿ ಮಾಡಿದೆ. ದಾಳಿ ವೇಳ ಮುಖ್ಯಮಂತ್ರಿ ನಿತೀಶ್ ಇರಲಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಇಲ್ಲಿಯವರೆಗೂ ಒಟ್ಟು 13 ಮಂದಿಯನ್ನು ಬಂಧಿಸಿರುವ ಪೊಲೀಸರು ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದೆ.
ಬಿಹಾರದ ಗಯಾದಲ್ಲಿ ಪಿತೃಪಕ್ಷ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ನಿತೀಶ್ ಭಾಗವಹಿಸಬೇಕಿತ್ತು. ರಸ್ತೆ ಬದಲು ಹೆಲಿಕಾಪ್ಟರ್ ಮೂಲಕ ತೆರಳಿದ್ದ ನಿತೀಶ್ ಬೆಂಗಾವಲು ಪಡೆ ವಾಹನಗಳು ಸೊಗಾಹಿ ಬಳಿ ಗುಂಪೊಂದು ಮನಸ್ಸೋ ಇಚ್ಚೆ ದಾಳಿ ಮಾಡಿ ಅಟ್ಟಹಾಸ ಮೆರೆದಿದೆ.