ಎಟಿಎಂ ಬಳಕೆದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಮುಂದಿನ ವರ್ಷ ಜನವರಿ (2022)ಯಿಂದ ATM ನಿಂದ ಹಣ ತೆಗೆಯುವುದಕ್ಕೆ ವಿಧಿಸುವ ಸೇವಾ ಶುಲ್ಕ ಹೆಚ್ಚಳವಾಗಲಿದೆ.
ಶುಲ್ಕ ಹೆಚ್ಚಳಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಗ್ರಾಹಕರಿಗೆ ಜಿಎಸ್‌ಟಿ ಸೇರಿ ಶೇಕಡಾ 21ರವರೆಗೆ ಶುಲ್ಕವಿಧಿಸಲು ಅನುಮತಿ ನೀಡಿದೆ. ಪ್ರಸ್ತುತ GST ಸೇರಿದಂತೆ ಶೇಕಡಾ 20ರವರೆಗೆ ಸೇವಾಶುಲ್ಕ ವಿಧಿಸಲಾಗುತ್ತಿದೆ.
ATM ಇಂಟರ್ಚೇಂಜ್ ಶುಲ್ಕ ಹೆಚ್ಚಳ
ಸುಮಾರು 9 ವರ್ಷಗಳ ನಂತರ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಅನುಮತಿ ನೀಡಿದೆ. ATM ಸ್ಥಾಪನೆ ಮತ್ತು ನಿರ್ವಹಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಶುಲ್ಕವನ್ನು ಹೆಚ್ಚಿಸಲಾಗಿದೆ. ಇಂಟರ್ಚೇಂಜ್ ಶುಲ್ಕ ಎಂದರೆ ‘ಯಾವುದೇ ಬ್ಯಾಂಕಿನ ಗ್ರಾಹಕರು ಇನ್ನೊಂದು ಬ್ಯಾಂಕಿನ ಎಟಿಎಂನಿಂದ ವಹಿವಾಟು ನಡೆಸಿದಾಗ ಕಾರ್ಡ್ ನೀಡುವ ಬ್ಯಾಂಕ್ ATM ಆಪರೇಟರ್‌ಗೆ ಶುಲ್ಕವನ್ನು ಪಾವತಿಸುತ್ತದೆ’ ಅದನ್ನೇ ಇಂಟರ್ಚೇಂಜ್ ಶುಲ್ಕ ಎನ್ನಲಾಗುತ್ತದೆ. ಪ್ರಸ್ತುತ ಇಂಟರ್ಚೇಂಜ್ ಶುಲ್ಕವು ಹಣಕಾಸಿನ ವಹಿವಾಟಿಗೆ 15 ರೂ. ಮತ್ತು ಹಣಕಾಸಿನೇತರ ವಹಿವಾಟಿಗೆ 5 ರೂ ಇದೆ. ಇದನ್ನು 17 ರೂ ಮತ್ತು 6 ರೂ.ಗಳಿಗೆ ಹೆಚ್ಚಿಸಲಾಗಿದೆ.

ಇಂಟರ್ಚೇಂಜ್ ಶುಲ್ಕ ಏರಿಕೆಯಾದಾಗ ಅದಕ್ಕೆ ಪರಿಹಾರವಾಗಿ ಬ್ಯಾಂಕುಗಳು ATM ಬಳಕೆ ಮೇಲೆ ಸೇವಾಶುಲ್ಕವನ್ನು ಹೆಚ್ಚಿಸುತ್ತವೆ. ವಿವಿಧ ಬ್ಯಾಂಕುಗಳು ವಿವಿಧ ದರಗಳನ್ನು ವಿಧಿಸುತ್ತವೆ.
ಎಸ್‌ಬಿಐ ತಿಂಗಳಿಗೆ ಗ್ರಾಹಕರಿಗೆ 5 ಬಾರಿ ATM ಉಚಿತವಾಗಿ ಬಳಸಲು ಅವಕಾಶ ನೀಡುತ್ತದೆ. ನಂತರ GST ಸೇರಿದಂತೆ 10 ರೂಪಾಯಿಗಳನ್ನು ಎಸ್ ಬಿಐ ಎಟಿಎಂಗಳಿಂದ ಹಣ ಪಡೆಯುವವರಿಗೆ ಮತ್ತು ಬೇರೆ ಬ್ಯಾಂಕಿನ ಎಟಿಎಂ ಬಳಕೆ ಮಾಡಿದವರಿಗೆ ಜಿಎಸ್ ಟಿ ಸೇರಿದಂತೆ 20 ರೂಪಾಯಿ ದರ ಹೇರುತ್ತದೆ. ಐಸಿಐಸಿಐ ಬ್ಯಾಂಕ್ 5 ಬಾರಿಯ ನಂತರ ಎಟಿಎಂ ಬಳಕೆಗೆ GST ಸೇರಿ 20 ರೂಪಾಯಿ ದರ ವಿಧಿಸುತ್ತದೆ.










