ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ (santhosh lad ) ಅವರು ಕಲಘಟಗಿಯ (Kalagatagi) ಮಡಕಿಹೊನ್ನಳ್ಳಿಯ ಮತಗಟ್ಟೆಯಲ್ಲಿ ಇಂದು ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವತು, ನಮ್ಮ ಸಂವಿಧಾನ (constitution) ಒದಗಿಸಿದ ಪವಿತ್ರ ಕರ್ತವ್ಯವನ್ನು ನನ್ನ ಮತಚಲಾಯಿಸುವುದರ (vote casting) ಮೂಲಕ ನಿರ್ವಹಿಸಿದ್ದೇನೆ. ನೀವೂ ಕೂಡ ಮತದಾನ ಮಾಡುವುದರ ಮೂಲಕ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆಯ ಮೂರನೇ ಹಂತ (Third stage election) ಹಾಗೂ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.