ಸಹಾಯಕ ಪ್ರಾಧ್ಯಾಪಕದರ ನೇಮಕಾತಿಗೆ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ದಿನಾಂಕದ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ (ಆಗಸ್ಟ್ 29) ಪ್ರಕಟಿಸಿದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಪ್ರಾಧಿಕಾರ, ಪರೀಕ್ಷಾ ದಿನಾಂಕದ ತಾತ್ಲಾಲಿಕ ವೇಳಾಪಟ್ಟಿ ನೀಡಿದೆ. ಸೆಪ್ಟೆಂಬರ್ 5 ರಂದು ಪರೀಕ್ಷೆಯ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಆ ದಿನವೇ ಮಾಹಿತಿ ಪುಸ್ತಕ ಪ್ರಕಟಿಸಲಾಗುತ್ತದೆ. ಆನ್ಲೈನ್ ಮೂಲಕ ಸೆಪ್ಟೆಂಬರ್ 10 ರಿಂದ 30ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 3 ಕೊನೆಯ ದಿನಾಂಕವಾಗಿದೆ. ಪರೀಕ್ಷೆ ನವೆಂಬರ್ 5 ರಂದು ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.
ಮಾಹಿತಿಗೆ 080-23564583 ಸಂಪರ್ಕಿಸಲು ಕೋರಲಾಗಿದೆ.