ಶಿವನ ವೇಷಧಾರಿ ಕಲಾವಿದ ಬೈಕ್ ಮೇಲೆ ಪಾತ್ರಧಾರಿ ಮಹಿಳೆಯನ್ನು ಕೂರಿಸಿಕೊಂಡು ಹೋಗುತ್ತಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ಅಸ್ಸಾಂ ಪೊಲೀಸರು ಕಲಾವಿದನನ್ನು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ ಕಾಳಿ ಚಿತ್ರದ ಪೋಸ್ಟರ್ ವಿವಾದದ ಹಿನ್ನೆಲೆಯಲ್ಲಿ ಭಾರೀ ಗ್ರಾಮೀಣ ಭಾರತದ ಕಲಾವಿದರ ಬಗ್ಗೆ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಅಸ್ಸಾಂನ ನಾಗೊನ್ ಜಿಲ್ಲೆಯಲ್ಲಿ ಶಿವ ಹಾಗೂ ಪಾರ್ವತಿಯ ವೇಷಧರಿಸಿದ ಕಲಾವಿದರು ಬೈಕ್ ನಲ್ಲಿ ಪ್ರದರ್ಶನ ನಡೆಯುವ ಜಾಗಕ್ಕೆ ತೆರಳುತ್ತಿರುವ ಫೋಟೊ ವೈರಲ್ ಆಗಿತ್ತು.

ಕಲಾವಿದರು ಈ ರೀತಿ ಹೋಗಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಕಲಾವಿದರನ್ನು ಪೊಲೀಸರು ಬಂಧಿಸಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.