ನಾನು 9 ದಿನ ಜೈಲುವಾಸ ಅನುಭವಿಸಿದ್ದೆ, ಅನುಭವಿಸಿದರೂ ದೂರು ನೀಡಲಿಲ್ಲ. ಅಸ್ಸಾಂನ ನ್ಯಾಯಾಂಗವು ನನ್ನ ವಿರುದ್ಧದ ಎಫ್‌ಐಆರ್ ಕ್ಷುಲ್ಲಕವಾಗಿದೆ ಎಂದು ಕರೆದಿದೆ. ದೆಹಲಿಯಲ್ಲಿನ ತಮ್ಮ ರಾಜಕೀಯ ಮೇಲಧಿಕಾರಿಗಳ ಆಜ್ಞೆಯ ಮೇರೆಗೆ ಇದನ್ನು ಮಾಡಲಾಗಿದೆ. ಅಸ್ಸಾಂ ಸರ್ಕಾರ-ಪೊಲೀಸರ ಕ್ರಮ ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ವಿರುದ್ಧ ಜಿಗ್ನೇಶ್ ಮೇವಾನಿ ಕಿಡಿಕಾರಿದ್ದಾರೆ.

ಅಹಮದಾಬಾದ್‌ಗೆ ಆಗಮಿಸಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 22 ಪರೀಕ್ಷಾ ಪತ್ರಿಕೆಗಳ ಸೋರಿಕೆ ಕುರಿತು ತನಿಖೆ ನಡೆಸದಿದ್ದರೆ, ಉತ್ತರ ಗುಜರಾತ್‌ನ ಉನಾ (ದಲಿತರ ವಿರುದ್ಧ), ಉತ್ತರ ಗುಜರಾತ್‌ನಲ್ಲಿ ಹೋರಾಟ ನಡೆಸುತ್ತಿರುವವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯದಿದ್ದರೆ ಮತ್ತು ಮುಂದ್ರಾ ಬಂದರಿನಲ್ಲಿ ಪತ್ತೆಯಾದ ಡ್ರಗ್ಸ್ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜೂನ್ 1 ರಂದು ಗುಜರಾತ್ ಬಂದ್ ನಡೆಯಲಿದೆ ಎಂದು ಜಿಗ್ನೇಶ್ ಮೇವಾನಿ ಎಚ್ಚರಿಸಿದ್ದಾರೆ.